11 ವರ್ಷದ ಹಿಂದೆ ನಾಪತ್ತೆಯಾಗಿದ್ದ ಅಪರಾಧಿಯನ್ನ ಹಿಡಿದು ತಂದ ಭದ್ರಾವತಿ ಪೊಲೀಸ್
Bhadravati police arrested accused , absconding for the past 11 years.
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 22, 2024
ಕಳೆದ ಸುಮಾರು 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನ ಭದ್ರಾವತಿ ಪೊಲೀಸರು ಇದೀಗ ಅರೆಸ್ಟ್ ಮಾಡಿದ್ಧಾರೆ. ಕನ್ವಿಕ್ಷನ್ ವಾರೆಂಟ್ ಹೊಂದಿದ್ದ ಆರೋಪಿಯನ್ನ ಇಲ್ಲಿನ ಹಳೇನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
2011ನೇ ಸಾಲಿನ ಹಳೇ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ 2ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆರೋಪಿ ಪೆರುಮಾಳ್‌ಗೆ 2 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, ₹10 ಸಾವಿರ ದಂಡ ವಿಧಿಸಿ ತೀರ್ಪು ನೀಡಿತ್ತು. ಆದರೆ ಆರೋಪಿ ನಾಪತ್ತೆಯಾಗಿದ್ದ.
11 ವರ್ಷ ತಲೆಮರೆಸಿಕೊಂಡಿದ್ದ ಈತನ ವಿರುದ್ದ ನ್ಯಾಯಾಲಯ ಕನ್ವಿಕ್ಷನ್ ವಾರೆಂಟ್ ಹೊರಡಿಸಿತ್ತು. ಠಾಣಾ ಉಪ ನಿರೀಕ್ಷಕ ಚಂದ್ರಶೇಖರ್‌ನಾಯ್ಕ, ಸಿಬ್ಬಂದಿ ರಾಘ ವೇಂದ್ರ ಮತ್ತು ಚಿನ್ನಾನಾಯ್ಕ ಅವರನ್ನೊಳಗೊಂಡ ತಂಡ ಇದೀಗ ಆರೋಪಿಯನ್ನು ತಿಪಟೂರಿನಲ್ಲಿ ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಕೋರ್ಟ್ ಮೂಲಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
SUMMARY | Bhadravati police have now arrested an accused who had been absconding for the past 11 years.
KEY WORDS | Bhadravati police arrested accused , absconding for the past 11 years.