ಭದ್ರಾವತಿಯಲ್ಲಿ ಮೀಟರ್‌ ಬಡ್ಡಿ ಅಟ್ಟಹಾಸ | ತಂದೆ ಸಾಲಕ್ಕೆ ಮಗನ ಕಿಡ್ನ್ಯಾಪ್‌ & ಹಲ್ಲೆ | ಯುವಕ ಆತ್ಮಹತ್ಯೆ |

Bhadravati paper town incident | ಭದ್ರಾವತಿಯಲ್ಲಿ ಮೀಟರ್‌ ಬಡ್ಡಿಗೆ ತಂದೆಗೆ ಕೊಟ್ಟ ದುಡ್ಡಿಗೆ ಪ್ರತಿಯಾಗಿ ಮಗನನ್ನ ಕಿಡ್ನ್ಯಾಪ್‌ ಮಾಡಿ ಹಲ್ಲೆ ಮಾಡಿದ ಘಟನೆ ನಡೆದಿದೆ. ಈ ಕಾರಣಕ್ಕೆ ಸ್ಟೀವನ್‌ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ

ಭದ್ರಾವತಿಯಲ್ಲಿ ಮೀಟರ್‌ ಬಡ್ಡಿ ಅಟ್ಟಹಾಸ | ತಂದೆ ಸಾಲಕ್ಕೆ ಮಗನ ಕಿಡ್ನ್ಯಾಪ್‌ & ಹಲ್ಲೆ | ಯುವಕ ಆತ್ಮಹತ್ಯೆ |
Bhadravati paper town , ಭದ್ರಾವತಿ ಪೇಪರ್‌ ಟೌನ್

SHIVAMOGGA | MALENADUTODAY NEWS | Aug 22, 2024 ಮಲೆನಾಡು ಟುಡೆ  

ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಏನೇನು ನಡೆಯುತ್ತಿದೆ ಎನ್ನುವುದು ಊಹಿಸುವುದು ಕಷ್ಟವಾಗಿದೆ. ಶಾಸಕರ ಮಗನ ಹತ್ಯೆಗೆ ಸ್ಕೆಚ್‌ ರೂಪಿತವಾದ ಆರೋಪ ಕೇಳಿಬಂದ ಬೆನ್ನಲ್ಲೆ ತಂದೆ ಮಾಡಿದ ಸಾಲಕ್ಕೆ ಮಗನನ್ನ ಕರೆದೊಯ್ದು ಮನಸ್ಸೋ ಇಚ್ಚೆ ಹಲ್ಲೆ ಮಾಡಿದ ಆರೋಪವೊಂದು ಕೇಳಿಬಂದಿದೆ. 

ಮಲೆನಾಡು ಟುಡೆಗೆ ಮೃತ ಕುಟುಂಬಸ್ಥರ ಬಂಧುಗಳು ಹೇಳಿದ ಪ್ರಕಾರ, ಪೇಪರ್‌ ಟೌನ್‌ನಲ್ಲಿನ ನಿವಾಸಿ ಸ್ಟೀವನ್‌ ಎಂಬಾತ ತನ್ನ ಪಾಡಿಗೆ ದುಡಿದು ಬದುಕುತ್ತಿದ್ದಾನೆ. ಈತನ ತಂದೆ ನೂರು ರೂಪಾಯಿಗೆ 10 ರೂಪಾಯಿ ಬಡ್ಡಿಯಂತೆ ಸಾಲ ಪಡೆದಿದ್ದು, ಆತ ತಲೆಮರೆಸಿಕೊಂಡಿದ್ದಾನೆ. ಈ ನಡುವೆ ಮೀಟರ್‌ ಬಡ್ಡಿಯ ಸಾಲ ವಾಪಸ್‌ ಕೊಡಿಸುವಂತೆ ಮಗನನ್ನ ಕಿಡ್ನಾಪ್‌ ಮಾಡಿ ದಿನವಿಡಿ ಹಲ್ಲೆ ಮಾಡಿದ್ದಾರೆ ಎಂಬುದು ಕುಟುಂಬಸ್ಥರ ಆರೋಪ

ಇದೇ ಕಾರಣಕ್ಕೆ ನೋವು ಹಾಗೂ ಭಯದಲ್ಲಿ ಸ್ಟೀವನ್‌ ಇವತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸಂಬಂಧಿಕರು ಹೇಳುತ್ತಿದ್ದಾರೆ. ಸ್ಟೀವನ್‌ ಹಾಗೂ ಆತನ ತಂಗಿ ಮಾತ್ರವೆ ಮನೆಯಲ್ಲಿರುತ್ತಿದ್ದು, ಇದೀಗ ಸ್ಟೀವನ್‌ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೀಟರ್‌ ಬಡ್ಡಿಗೆ ಸ್ಟೀವನ್‌ ತಂದೆಗೆ ಸಾಲ ಕೊಟ್ಟ ಇಬ್ಬರು ಮಗನನ್ನ ಕೂಡಿ ಹಾಕಿ ತಂದೆಯನ್ನ ಕರೆಸು ಎಂದು ಬೆದರಿಸಿದ್ದಾರೆ. ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ. 

ಇನ್ನೂ ಈ ಬಗ್ಗೆ ಪೊಲೀಸರಿಗೆ ದೂರು ಹೇಳಿದರೂ ಕ್ರಮಕೈಗೊಳ್ಳುತ್ತಿಲ್ಲ. ಅಲ್ಲದೆ ದೂರು ಕೊಡಲು ಸ್ಟೀವನ್‌ ಕುಟುಂಬದಲ್ಲಿ ತಂಗಿಯನ್ನ ಹೊರತು ಪಡಿಸಿ ಯಾರೂ ಇಲ್ಲವಂತೆ. ತಂದೆಗೆ ಮಗನ ಸಾವಿನ ವಿಚಾರ ತಿಳಿದು ಈಗ ಭದ್ರಾವತಿಗೆ ವಾಪಸ್‌ ಬರುತ್ತಿದ್ದಾರೆ ಎನ್ನಲಾಗಿದೆ.  . 

  ಇನ್ನಷ್ಟು ಸುದ್ದಿಗಳು