ಜನರಿಗೆ ತೊಂದರೆ ಕೊಡುತ್ತಿದ್ದ ಬೂತ ಅರೆಸ್ಟ್ | ಸುಮುಟೋ ಕೇಸ್
Bhadravati Newtown Police Station, sumuto case, ganja case
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 4, 2025
ಶಿವಮೊಗ್ಗ ಜಿಲ್ಲೆ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕನ ವಿರುದ್ಧ ಸುಮುಟೋ ಕೇಸ್ ದಾಖಲಾಗಿದೆ. ಪ್ರವೀಣ ಯಾನೆ ಬೂತ ಎಂಬಾತನ ವಿರುದ್ಧ NARCOTIC DRUGS AND PSYCHOTROPIC SUBSTANCES ACT, 1985 (U/s-27(b)) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈತ ಜನ್ನಾಪುರ, ಜಯಶ್ರೀ ಸರ್ಕಲ್ , ಗಾಂಧಿ ಪಾರ್ಕ್ ಬಳಿ ಅಡ್ಡಾಡುತ್ತಿದ್ದು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಎಂದು ದೂರು ಬಂದ ಹಿನ್ನೆಲೆಯಲ್ಲಿ ಎಸ್‌ಐ ಈ ಬಗ್ಗೆ ಪರಿಶೀಲನೆ ನಡೆಸಿ ಆರೋಪಿಯನ್ನು ಮೆಡಿಕಲ್ ಟೆಸ್ಟ್‌ಗೆ ಒಳಪಡಿಸಿದ್ದಾರೆ. ಆ ಬಳಿಕ ಮೆಡಿಕಲ್ ಟೆಸ್ಟ್‌ನ ವರದಿಯಲ್ಲಿ ಆತ ಮಾದಕ ವಸ್ತು ಗಾಂಜಾವನ್ನು ಸೇವಿಸಿದ್ದು ದೃಡವಾದ ಹಿನ್ನೆಲೆಯಲ್ಲಿ ಕೇಸ್ ದಾಖಲಿಸಿದ್ದಾರೆ.
SUMMARY | Bhadravati Newtown Police Station police have registered a sumuto case against a youth who consumed ganja.
KEY WORDS | Bhadravati Newtown Police Station, sumuto case, ganja case