ಭದ್ರಾವತಿ ಸಿಟಿಯಲ್ಲಿ ಒಂದೇ ದಿನ ಎರಡು ಕಡೆ ದರೋಡೆ | ಆತಂಕ!?

In Bhadravathi , two cases of robbery have been registered under bhadravathi new town police station and bhadravathi rural police station limits. 

ಭದ್ರಾವತಿ ಸಿಟಿಯಲ್ಲಿ ಒಂದೇ ದಿನ ಎರಡು ಕಡೆ ದರೋಡೆ | ಆತಂಕ!?
In Bhadravathi, robbery , bhadravathi new town police station, bhadravathi rural police station limits

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 18, 2024

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು, ಭದ್ರಾವತಿ ಸಿಟಿಯಲ್ಲಿ ಎರಡು ದರೋಡೆ ಪ್ರಕರಣಗಳು ನಡೆದಿದ್ದು ಜನರನ್ನ ಆತಂಕಕ್ಕೆ ದೂಡಿದೆ. ಭದ್ರಾವತಿಯಲ್ಲಿ ಪೊಲೀಸ್‌ ವ್ಯವಸ್ಥೆ ವೈಫಲ್ಯ ಕಂಡಿದ್ಯಾ ಎಂಬ ಅನುಮಾನವನ್ನ ಸ್ಥಳೀಯರಲ್ಲಿ ವ್ಯಕ್ತವಾಗುತ್ತಿದ್ದು, ಪ್ರಕರಣಗಳ ಗಂಭೀರತೆ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. 

ನಡೆದಿದ್ದೇನು?

ಒಂದೇ ದಿನ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ವ್ಯಕ್ತಿಗಳನ್ನ ದರೋಡೆ ಮಾಡಲಾಗಿದೆ.  ದ್ವಿಚಕ್ರ ವಾಹನಗಳಲ್ಲಿ ಹೋಗುತ್ತಿದ್ದ ಸವಾರನ್ನು ಅಡ್ಡಗಟ್ಟಿ ಬೆದರಿಸಿ ನಗದು, ಚಿನ್ನಾಭರಣ ದರೋಡೆ ಮಾಡಲಾಗಿದೆ. 

ನಗರಸಭೆ ವ್ಯಾಪ್ತಿಯ ಕಡದಕಟ್ಟೆ ನಿವಾಸಿ ಸಿ. ವೆಂಕಟೇಶ್ ಎಂಬುವರು ರಾತ್ರಿ 10 ಗಂಟೆ ಸಮಯದಲ್ಲಿ ಬಿ.ಎಚ್ ರಸ್ತೆ, ಭೈರವೇಶ್ವರ ಕಮ್ಯೂನಿ ಕೇಷನ್ ಬಳಿ ಹಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ತೆಗೆದುಕೊಂಡು ಮನೆಗೆ ಹೊರಟಾಗ ಸುಮಾರು 3 ಯುವಕರು ದ್ವಿಚಕ್ರ ವಾಹನ ಅಡ್ಡಗಟ್ಟಿ ₹1.75 ಮೌಲ್ಯದ ಬಂಗಾರದ ಸರ ದೋಚಿದ್ದಾರೆ. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮತ್ತೊಂದು ಪ್ರಕರಣದಲ್ಲಿ ತಾಲೂಕಿನ ಪದ್ಮನಹಳ್ಳಿ ಗ್ರಾಮದ ನಿವಾಸಿ ರಾಕೇಶ್ ಎಂಬುವರು ಸಂಜೆ 7 ಗಂಟೆ ಸಮಯದಲ್ಲಿ ಪದ್ದೇನಹಳ್ಳಿ ಗ್ರಾಮಕ್ಕೆ ಹೋಗುತ್ತಿರುವಾಗ ತಡಸ ಗ್ರಾಮದ ಬಳಿ , ಮದ್ಯಪಾನ ಮಾಡುತ್ತಿದ್ದ 3 ಯುವಕರು ಇವರನ್ನು ಅಡ್ಡಗಟ್ಟಿ ಚಾಕು ತೋರಿಸಿ ಬೆದರಿಸಿ 2 ಸಾವಿರ ರೂಪಾಯಿ ಕಿತ್ತುಕೊಂಡು ಹೋಗಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SUMMARY | In Bhadravathi , two cases of robbery have been registered under bhadravathi new town police station and bhadravathi rural police station limits. 

KEY WORDS |In Bhadravathi, robbery , bhadravathi new town police station, bhadravathi rural police station limits