bhadravathi police :  ನಕಲಿ ಬಂಗಾರ ತೋರಿಸಿ ಲಕ್ಷಾಂತರ ರೂಪಾಯಿ ವಂಚನೆ | ಆರೋಪಿ ಪೊಲೀಸರ ವಶಕ್ಕೆ

prathapa thirthahalli
Prathapa thirthahalli - content producer

bhadravathi police : ನಕಲಿ ಬಂಗಾರವನ್ನು ತೋರಿಸಿ ಅಸಲಿ ಬಂಗಾರವೆಂದು ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ವ್ಯಕ್ತಿಯನ್ನು ಭದ್ರಾವತಿ ತಾಲೂಕು ಹೊಳೆಹೊನ್ನೂರು  ಪೊಲೀಸರು ಬಂಧಿಸಿದ್ದಾರೆ. ರಾಮಪ್ಪ (65) ಬಂಧಿತ ಆರೋಪಿಯಾಗಿದ್ದಾರೆ. 

bhadravathi police : ಏನಿದು ಪ್ರಕರಣ

ವಿಜಯನಗರ ಜಿಲ್ಲೆಯ ರಾಜೇಶ್​ ಎಂಬುವವರಿಗೆ ಜುಲೈ 2024 ರಂದು ಆರೋಪಿ ರಾಮಪ್ಪ  ಸುರೇಶ್​ ಎಂಬ ಹೆಸರಿನಿಂದ ಪರಿಚಯಿಸಿಕೊಂಡಿದ್ದ. ನಂತರ  ಆತ ರಾಜೇಶ್​ಗೆ ನಕಲಿ ಬಂಗಾರವನ್ನು ತೋರಿಸಿ ಅಸಲಿ ಬಂಗಾರವೆಂದು ನಂಬಿಸಿ ಮೋಸ ಮಾಡಿದ್ದಾನೆ. ಈ ಹಿನ್ನಲೆ ರಾಜೇಶ್ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನಲೆ ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧನೆ ನಡೆಸಿದ್ದರು.

- Advertisement -

ಪ್ರಕರಣದ ಆರೋಪಿ ರಾಮಪ್ಪ (65)​ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದು, ಆತನಿಂದ  3 ಲಕ್ಷದ 8 ಸಾವಿರ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ.

Share This Article