ಇಲ್ಲೊಂದು ಸಮಸ್ಯೆ ಇದೆ ಅಂತಾ ಮನೆಗೆ ಬಂದವ ಮಾಡಿದ್ದೇನು? 2 ಕಡೆ ಒಂದೇ ಥರದ ಕೇಸ್‌ | ನೀವು ಹುಷಾರ್

case has been registered at Bhadravathi Rural Police Station in connection with the theft of gold from the house in the name of black magic and puja

ಇಲ್ಲೊಂದು ಸಮಸ್ಯೆ ಇದೆ ಅಂತಾ ಮನೆಗೆ ಬಂದವ ಮಾಡಿದ್ದೇನು? 2 ಕಡೆ ಒಂದೇ ಥರದ ಕೇಸ್‌ | ನೀವು ಹುಷಾರ್
case has been registered, Bhadravathi Rural Police Station , theft of gold from the house, black magic  

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 22, 2024

ನಿಮಗೆ ಯಾರೋ ಮಾಟ ಮಾಡಿಸಿದ್ದಾರೆ. ಅದನ್ನ ತೆಗೆಯುತ್ತೇವೆ ಅಂತಾ ಹೇಳುವ ವ್ಯಕ್ತಿಗಳನ್ನ ನಂಬಲೇ ಬೇಡಿ ಎಕೆಂದರೆ, ಇಲ್ಲದ ವಿಚಾರಗಳನ್ನ ತಲೆಗೆ ತುಂಬಿ ಮನೆಯೊಳಗೆ ಬರುವ ವ್ಯಕ್ತಿಗಳು ಆನಂತರ ಮನೆಯಲ್ಲಿರುವ ಚಿನ್ನವನ್ನ ದೋಚಿಕೊಂಡು ಹೋಗುವ ಸಾಧ್ಯತೆ ಇದೆ. ಇದಕ್ಕೆ ಸಾಕ್ಷಿ ಎಂಬಂತಃ ಘಟನೆ ಭದ್ರಾವತಿ ತಾಲ್ಲೂಕುನಲ್ಲಿ ನಡೆದಿದೆ. ವಿಶೇಷ ಅಂದರೆ ಎರಡು ಕಡೆಗಳಲ್ಲಿ ಒಂದೇ ರೀತಿಯಲ್ಲಿ ಘಟನೆ ನಡೆದಿದೆ. 

 

ಶಾಸ್ತ್ರ ಹೇಳಿ ಮಾಟ ಮಾಡಲಾಗಿದೆ ಎಂದು ಹೇಳಿಕೊಂಡು ಹಳೇ ಕೂಡ್ಲಿಗೆರೆ ಗ್ರಾಮದ ನಿವಾಸಿಯೊಬ್ಬರ ಮನೆಗೆ ಬಂದ  ಅಪರಿಚಿತ ವ್ಯಕ್ತಿಯೊಬ್ಬ  ಮನೆಯ ಸಮಸ್ಯೆ ಬಗೆಹರಿಸುವುದಾಗಿ ನಂಬಿಸಿದ್ದಾನೆ. ಈ ನಿಟ್ಟಿನಲ್ಲಿ ಕಳೆದ ಜುಲೈ 22 ರಂದು ಮನೆಯವರಿಂದ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ತೆಗೆದುಕೊಂಡು ಪೆಟ್ಟಿಗೆಯಲ್ಲಿಟ್ಟಂತೆ ಮಾಡಿ ಪೂಜೆ ಆರಂಭಿಸಿದ್ದಾನೆ. ಮನೆಯ ಕೋಣೆಯೊಂದಕ್ಕೆ ತೆರಳಿದ ಆತ ಅಲ್ಲಿ ಪೂಜೆ ಮಾಡಿದಂತೆ ಮಾಡಿ 41 ದಿನಗಳ ಬಳಿಕ ಪೆಟ್ಟಿಗೆಯ ಬೀಗ ತೆಗೆಯಬೇಕು ಹಾಗೂ ಪ್ರತಿನಿತ್ಯ ಪೂಜೆ ಮಾಡುವಂತೆ ತಿಳಿಸಿದ್ದಾನೆ. ಇದನ್ನ ನಂಬಿದ ಮನೆಯವರು ಹಾಗೆ ಮಾಡಿದ್ದಾರೆ. ಆದರೆ 41 ದಿನಗಳ ಮನೆಯವರು ನಂತರ ಮನೆಯವರು ಪೆಟ್ಟಿಗೆ ಓಪನ್‌ ಮಾಡಿ ನೋಡಿದರೆ, ಅದರಲ್ಲಿ  ನಕಲಿ ಆಭರಣಗಳಿದ್ದವು. ಇದರಿಂದ ಹೆದರಿದ ಮನೆಯವರು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರುದಾಖಲಿಸಿದ್ದಾರೆ. 

ಇನ್ನೊಂದು ಪ್ರಕರಣದಲ್ಲಿ ಅತ್ತಿಗುಂದ ಗ್ರಾಮದ ನಿವಾಸಿಯೊಬ್ಬರು ಇದೇ ರೀತಿಯಲ್ಲಿ ಮೋಸ ಹೋಗಿದ್ದಾರೆ. ಅವರ ಮನೆಯ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಬಂದ ವ್ಯಕ್ತಿಯೊಬ್ಬರು, ಇಲ್ಲೊಂದು ಸಮಸ್ಯೆ ಇದೆ, ಅದಕ್ಕೆ ಪರಿಹಾರವಾಗಿ ಪೂಜೆ ಮಾಡಬೇಕು ಎಂದು ಹೇಳಿ, ಪೂಜೆಗಾಗಿ 40 ತೊಲ ಬಂಗಾರ ಹಾಗೂ ನಗದು ಹಣ ಬೇಕು ಎಂದಿದ್ದಾನೆ. 

ಆ ಬಳಿಕ ಮನೆಯವರು ನೀಡಿದ ಹಣ ಹಾಗೂ ಚಿನ್ನವನ್ನು ಪೆಟ್ಟಿಗೆಯಲ್ಲಿಟ್ಟು ಮನೆಯ ಕೋಣೆಯಲ್ಲಿ ಪೂಜೆ ಮಾಡಿದ್ದಾನೆ. ಅಲ್ಲಿ 48 ದಿನಗಳ ಕಾಲ ಪೆಟ್ಟಿಗೆಗೆ ಪೂಜೆ ಮಾಡಬೇಕು ಎಂದು ಹೇಳಿ, ಅಲ್ಲಿಂದ ಎಸ್ಕೇಪ್‌ ಆಗಿದ್ದಾನೆ. ಈ ನಡುವೆ ಅಪರಿಚಿತ ವ್ಯಕ್ತಿ ಪೋನ್‌ ಸ್ವಿಚ್‌ ಮಾಡಿದ್ದನ್ನ ಗಮನಿಸಿದ ಮನೆಯವರಿಗೆ ಅನುಮಾನ ಮೂಡಿ ಪೆಟ್ಟಿಗೆ ಓಪನ್‌ ಮಾಡಿ ನೋಡಿದ್ದಾರೆ. ಆಗ ಮೋಸ ಹೋಗಿರುವುದು ಗೊತ್ತಾಗಿದೆ. ಅವರು ಸಹ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

SUMMARY|  case has been registered at Bhadravathi Rural Police Station in connection with the theft of gold from the house in the name of black magic and puja. 



KEY WORDS | case has been registered, Bhadravathi Rural Police Station , theft of gold from the house, black magic