ಚಿಕ್ಕಮಗಳೂರು ಎಲೆಕ್ಟ್ರಿಷಿಯನ್ ಹಾಗೂ ಭದ್ರಾವತಿ ಗುಜರಿ ವ್ಯಾಪಾರಿ ಅರೆಸ್ಟ್‌ | ಲಕ್ಷ..ಲಕ್ಷ ಕ್ಯಾಶ್‌, ಬೈಕ್‌ ಸೀಜ್

Bhadravathi New Town police have arrested a scrap dealer from Bhadravathi, including a chikkamagaluru-based electrician, in a case and cracked a total of 10 bike theft cases

ಚಿಕ್ಕಮಗಳೂರು ಎಲೆಕ್ಟ್ರಿಷಿಯನ್ ಹಾಗೂ ಭದ್ರಾವತಿ ಗುಜರಿ ವ್ಯಾಪಾರಿ ಅರೆಸ್ಟ್‌ | ಲಕ್ಷ..ಲಕ್ಷ ಕ್ಯಾಶ್‌, ಬೈಕ್‌ ಸೀಜ್
Bhadravathi New Town police , Bhadravathi, chikkamagaluru based electrician,  ,bike theft cases

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 1, 2024 ‌ 

ಭದ್ರಾವತಿ ಪೊಲೀಸರು ಪ್ರಕರಣವೊಂದರಲ್ಲಿ ಚಿಕ್ಕಮಗಳೂರು ಮೂಲದ ಎಲೆಕ್ಟ್ರಿಷಿಯನ್ ಒಬ್ಬಾತ ಸೇರಿದಂತೆ, ಭದ್ರಾವತಿಯ ಗುಜರಿ ವ್ಯಾಪಾರಿಯನ್ನ ಬಂಧಿಸಿದ ಒಟ್ಟು 10 ಬೈಕ್‌ ಕಳ್ಳತನ ಪ್ರಕರಣವನ್ನು ಭೇದಿಸಿದ್ದಾರೆ. 

ಏನಿದು ಕೇಸ್‌

ಭದ್ರಾವತಿ ಬಿಳಕಿ ಕ್ರಾಸ್‌ ಬಳಿ  BAJAJ CT-100 ಬೈಕ್‌ವೊಂದು ದಿನಾಂಕಃ 04-06-2024 ರಂದು ಕಳ್ಳತನವಾಗಿತ್ತು. ಈ ಪ್ರಕರಣದ ತನಿಖೆ ನಡೆಸ್ತಿದ್ದ  ಭದ್ರಾವತಿ ನ್ಯೂ ಟೌನ್ ಪೊಲೀಸರಿಗೆ ದೊಡ್ಡ ಲೀಡ್‌ ಸಿಕ್ಕಿದೆ. ಅದನ್ನ ಆಧರಿಸಿ ತನಿಖೆಗೆ ಇಳಿದ ಪೊಲೀಸ್‌ ಟೀಂಗೆ ದಿನಾಂಕಃ-28-11-2024 ರಂದು ಇಬ್ಬರು ಆರೋಪಿಗಳು ಸೆರೆ ಸಿಕ್ಕಿದ್ದಾರೆ. ಚಿಕ್ಕಮಗಳೂರು ಕೋಟೆ ಅಗ್ರಹಾರ ಸರ್ಕಲ್‌ ಮೂಲದ ನವೀನ್‌ ಹಾಗೂ ಭದ್ರಾವತಿ ವೀರಾಪುರ ಬಳಿ ಗುಜರಿ ವ್ಯಾಪಾರಿ ಉಮ್ಮರ್‌ ಎಂಬಾತನನ್ನ ಬಂಧಿಸಿದ ಪೊಲೀಸರು ಅವರಿಂದ 10 ಬೈಕ್‌ ಕಳ್ಳತನ ಪ್ರಕರಣಗಳನ್ನ ಬಯಲಿಗೆ ತಂದಿದ್ದಾರೆ. 

ಆರೋಪಿ ನವೀನ್‌ ಒಟ್ಟಾರೆ 10 ಬೈಕ್‌ ಕದ್ದಿದ್ದು ಆ ಪೈಕಿ ಏಳು ಬೈಕ್‌ಗಳನ್ನ ಉಮ್ಮರ್‌ಗೆ ಮಾರಿದ್ದ. ಈ ಸಂಬಂಧ ವಿಚಾರಣೆ ನಡೆಸಿದ ಪೊಲೀಸರಿಗೆ ಕಳುವಾದ ಬೈಕ್‌ಗಳು  ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯ 06, ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯ 03 ಮತ್ತು  ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯ 01  ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ್ದು ಎಂದು ಗೊತ್ತಾಗಿದೆ. 

ಈ ಸಂಬಂಧ ಇದೀಗ ಆರೋಪಿತರಿಂದ ಅಂದಾಜು ಮೌಲ್ಯ 55,000/- ರೂಗಳ ಒಟ್ಟು 3 ದ್ವಿ ಚಕ್ರ ವಾಹನಗಳನ್ನು ಮತ್ತು 7 ದ್ವಿ ಚಕ್ರ ವಾಹನಗಳ ಬಿಡಿ ಭಾಗಗಳನ್ನು ಜಪ್ತು ಮಾಡಿದ್ದಾರೆ. ಅಲ್ಲದೆ ಬೈಕ್‌ಗಳನ್ನ  ಮಾರಾಟ ಮಾಡಿಗಳಿಸಿದ್ದ ರೂ 2,10,000/- ನಗದು ಹಣವನ್ನು ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ  60,000/-  ರೂಗಳ ಪಲ್ಸರ್ ಬೈಕ್ ಸೇರಿ ಒಟ್ಟು 3,25,000/- ರೂಗಳ ಮಾಲನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ. 

SUMMARY | Bhadravathi New Town police have arrested a scrap dealer from Bhadravathi, including a chikkamagaluru-based electrician, in a case and cracked a total of 10 bike theft cases

KEY WORDS  | Bhadravathi New Town police , Bhadravathi, chikkamagaluru based electrician,  ,bike theft cases