Bhadravathi New Town Police | ರಸ್ತೆ ಬದಿ ನಿಂತಿದ್ದವನ ಸುಲಿಗೆ ಕೇಸ್ | 2 ದಿನಗಳಲ್ಲಿ ಮಲ್ಲಿ, ಗುಂಡಾ ಅರೆಸ್ಟ್ | ಕುತೂಹಲದ ಪ್ರಕರಣ
Bhadravathi New Town Police Operation, ಭದ್ರಾವತಿ ನ್ಯೂಟೌನ್ ಪೊಲೀಸ್ ಸ್ಟೇಷನ್
SHIVAMOGGA | MALENADUTODAY NEWS | Aug 13, 2024 ಮಲೆನಾಡು ಟುಡೆ
ಶಿವಮೊಗ್ಗ ಜಿಲ್ಲೆ ಭದ್ರಾವತಿ ಪೊಲೀಸರು ದರೋಡೆ ಪ್ರಕರಣವೊಂದನ್ನ ಬೇಧಿಸಿದ್ದಾರೆ. ಇಲ್ಲಿನ ನ್ಯೂಟೌನ್ ಠಾಣೆ ಪೊಲೀಸರು,(New Town Police) ಇಬ್ಬರು ಆರೋಪಿಗಳನ್ನು ಬಂಧಿಸಿ ₹1.5 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
New Town Police
ಭದ್ರಾವತಿ ನಗರದಲ್ಲಿ ಕಳೆದ ಆಗಸ್ಟ್ 9 ರಂದು ಮುರುಳೀಧರ್ (64) ಎಂಬುವರು ಶಾರದಾ ಮಂದಿರದ ಬಳಿ ನಿಂತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದಿದ್ದ 4 ರಿಂದ 5 ಜನ ಅವರನ್ನು ಹೆದರಿಸಿ ಉಂಗುರ, ಚಿನ್ನದ ಸರ, ನಗದು ಹಾಗೂ ಇತರ ವಸ್ತುಗಳನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದರು.
ತುಂಬಿದ ಭದ್ರಾ | ಎಷ್ಟಿದೆ ಡ್ಯಾಮ್‌ನಲ್ಲಿ ನೀರು | ಭದ್ರಾ ಜಲಾಶಯದ ಇವತ್ತಿನ ನೀರಿನ ಮಟ್ಟ
ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನನ್ವಯ ದರೋಡೆ ಕೇಸ್ ಫಿಟ್ ಆಗಿತ್ತು. ಪ್ರಕರಣ ಸಂಬಂಧ ಭದ್ರಾವತಿ ನಗರ ವೃತ್ತದ ಸಿಪಿಐ ನೇತೃತ್ವದ ಟೀಂ ರಚನೆ ಮಾಡಲಾಗಿತ್ತು
ಭದ್ರಾವತಿ ಪೊಲೀಸ್
ಇದೀಗ ಆರೋಪಿಗಳನ್ನ ಬಂಧಿಸಿರುವ ಪೊಲೀಸರು, ಬಂಧಿತರಿಂದ ₹1.59 ಲಕ್ಷ ಮೌಲ್ಯದ 24.5 ಗ್ರಾಂ ತೂಕದ ಚಿನ್ನದ ಸರ, ಉಂಗುರ ಹಾಗೂ ಕೃತ್ಯಕ್ಕೆ ಬಳಸಿದ್ದ ಅಂದಾಜು ₹35,000 ಮೌಲ್ಯದ ಬೈಕ್ ಜಪ್ತಿ ಮಾಡಿದ್ದಾರೆ.
ಬಂಧಿತರು
ಭದ್ರಾವತಿ ನಗರದ ಮೋಮಿನ್ ಮೊಹಲ್ಲಾ ಹಾಗೂ ಅನ್ವರ್ ಕಾಲೊನಿ ನಿವಾಸಿಗಳಾದ ಜಬೀವುಲ್ಲಾ ಯಾನೆ ಮಲ್ಲಿ (23) ಮತ್ತು ಮಹಮದ್ ಗೌಸ್ ಯಾನೆ ಗುಂಡಾ (24)