ಹುಲಿ ಸಂರಕ್ಷಿತ ಪ್ರದೇಶಕ್ಕಾಗಿ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದ ಸಂತ್ರಸ್ಥರ ನೆಲದಲ್ಲಿ ನಡೆಯಬೇಕಿತ್ತು ರಜತ ಮಹೋತ್ಸವ ಕಾರ್ಯಕ್ರಮ...ಯಾಕಂತಿರಾ..?
ಹುಲಿ ಸಂರಕ್ಷಿತ ಪ್ರದೇಶಕ್ಕಾಗಿ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದ ಸಂತ್ರಸ್ಥರ ನೆಲದಲ್ಲಿ ನಡೆಯಬೇಕಿತ್ತು ರಜತ ಮಹೋತ್ಸವ ಕಾರ್ಯಕ್ರಮ.

ಹುಲಿ ಸಂರಕ್ಷಿತ ಪ್ರದೇಶಕ್ಕಾಗಿ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದ ಸಂತ್ರಸ್ಥರ ನೆಲದಲ್ಲಿ ನಡೆಯಬೇಕಿತ್ತು ರಜತ ಮಹೋತ್ಸವ ಕಾರ್ಯಕ್ರಮ.
ಭದ್ರಾ ಹುಲಿ ಸಂರಕ್ಷಿತ ಮೀಸಲು ಪ್ರದೇಶ ಘೋಷಣೆಯಾಗಿ 25 ವರ್ಷ ಕಳೆದಿದೆ. 1974 ರಲ್ಲಿ ಭದ್ರಾ ಅಭಯಾರಣ್ಯ ಎಂದು ಘೋಷಣೆಯಾಯ್ತು. 1998 ಡಿಸಂಬರ್ 23 ರಂದು ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಎಂದು ಷೋಷಿಸಲಾಯಿತು.ಈ ಯೋಜನೆಯಲ್ಲಿ 26 ಕ್ಕೂ ಹೆಚ್ಚು ಹಳ್ಳಿಗಳು ಸ್ಥಳಾಂತರಗೊಂಡಿದೆ. ಸಾವಿರಾರು ಮಂದಿ ಸಂತ್ರಸ್ಥರಾಗಿದ್ದಾರೆ. ಭಾರತದ ಇತಿಹಾಸದಲ್ಲಿ ಹುಲಿ ಯೋಜನೆಗಾಗಿ ಸಂಪೂರ್ಣ ಗ್ರಾಮಗಳನ್ನು ತೆರವುಗೊಳಿಸಿದ ಯಶಸ್ಸು ಭದ್ರಾ ಹುಲಿ ಸಂರಕ್ಷಿತ ಯೋಜನೆಗೆ ಸಲ್ಲುತ್ತದೆ. ಈ ಯೋಜನೆಯ ಯಶಸ್ಸಿಗಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಸಂತ್ರಸ್ಥರು ಚಿಕ್ಕಮಗಳೂರು ಜಿಲ್ಲೆಯ ಜನರೇ ಆಗಿದ್ದಾರೆ. ಇವರುಗಳಿಗೆ ತಮ್ಮ ಮನೆ ಜಮೀನು ನಂಬಿದ ದೇವಸ್ಥಾನಗಳೆಲ್ಲಾ ಮರೆಯಲಾಗದ ನೆನಪುಗಳಷ್ಟೆ.
ಭದ್ರಾ ಸಂರಕ್ಷಿತ ಪ್ರದೇಶ ಘೋಷಣೆಯಾದಾಗ ಸಂತ್ರಸ್ಥರ ಮನವೊಲಿಕೆಗೆ ಅಂದು ಪ್ರಾಮಾಣಿಕ ಅಧಿಕಾರಿಗಳು ಹರಸಾಹಸವನ್ನೇ ಪಟ್ಟಿದ್ದಾರೆ. ಅವರ ಶ್ರಮದಿಂದಾಗಿ ಕಾಡು ತೊರೆದ ಜನರು ನಾಡು ಸೇರಿ ಹೊಸ ಬದುಕು ಕಂಡುಕೊಂಡಿದ್ದಾರೆ. ಇಂತಹ ಮಹತ್ವಾಕಾಂಕ್ಷಿ ಯೋಜನೆಗಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ನೆಲದಲ್ಲಿಯೇ ಭದ್ರಾ ಹುಲಿ ಯೋಜನೆಯ ರಜತ ಮಹೋತ್ಸವ ನಡೆಯಬೇಕಿತ್ತು ಎಂಬುದು ಚಿಕ್ಕಮಗಳೂರು ಜಿಲ್ಲೆಯ ಜನತೆಯ ಆಶಯಾಗಿತ್ತು. ಆದರೆ ಕಾರ್ಯಕ್ರಮವನ್ನು ಪಕ್ಕದ ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಆಚರಿಸಲಾಯಿತು. ಕುವೆಂಪು ವಿಶ್ವವಿದ್ಯಾನಿಲಯ ಭದ್ರಾ ಟೈಗರ್ ರಿಸರ್ವ್ ವ್ಯಾಪ್ತಿಗೆ ಸೇರುತ್ತಾದರೂ, 25 ರ ಸಂಭ್ರಮದ ಕಾರ್ಯಕ್ರಮ ಚಿಕ್ಕಮಗಳೂರು ಜಿಲ್ಲೆಯ ಯಾವುದಾದರೂ ಭಾಗದಲ್ಲಿ ನಡೆಯಬೇಕಿತ್ತು. ಕಾರ್ಯಕ್ರಮ ಸ್ಥಳಾಂತರದ ಹಿಂದೆ ಈಗ ಹಲವು ಅನುಮಾನಗಳು ರೆಕ್ಕೆಪುಕ್ಕವನ್ನು ಪಡೆದುಕೊಳ್ಳುತ್ತಿದೆ. ಕಾರ್ಯಕ್ರಮಕ್ಕಾಗಿ ಕಾಡಂಚಿನ ಶ್ರೀಮಂತರು, ಖಾಸಗಿ ಕಂಪನಿಗಳು ಟಿಂಬರ್ ಮರ್ಚೆಂಟ್, ಸಾಮೀಲ್ ಮಾಲೀಕರು ಅರಣ್ಯ ಗುತ್ತಿಗೆದಾರರಿದದ ಸಾಕಷ್ಟು ಹಣವನ್ನು ಪಡೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ.ಕಾರ್ಯಕ್ರಮದ ವೆಚ್ಚ ದೇಣಿಗೆ ಬಗ್ಗೆ ಅಧಿಕಾರಿಗಳೇ ಬಹಿರಂಗಪಡಿಸಬೇಕಿದೆ.
ಹಾಗೆ ನೋಡಿದರೆ, ಭದ್ರಾ ಟೈಗರ್ ರಿಸರ್ವ್ ಎರಡು ಜಿಲ್ಲೆಯ ವ್ಯಾಪ್ತಿಗೆ ಒಳಪಡುತ್ತದೆ.ಆದರೆ ಯೋಜನೆ ಯಶಸ್ಸಿಗೆ ಬಹುತೇಕ ಸಂತ್ರಸ್ಥರಾದವರೆಲ್ಲಾ ಚಿಕ್ಕಮಗಳೂರು ಜಿಲ್ಲೆಯವರೇ ಆಗಿದ್ದಾರೆ. ಹುಲಿ ಯೋಜನೆ ಮುಖ್ಯ ಕಛೇರಿ ಇರುವುದು ಕೂಡ ಚಿಕ್ಕಮಗಳೂರು ಆಗಿದೆ. ಅರಣ್ಯ ವೃತ್ತ ಕಛೇರಿ ಕೂಡ ಚಿಕ್ಕಮಗಳೂರಿಗೆ ಸೇರಿರುವಾಗ, 25 ರ ಸಂಭ್ರಮವನ್ನು ಮೂಲ ನೆಲೆಯಲ್ಲಿಯೇ ಮಾಡಬೇಕಿತ್ತು ಎಂಬುದು ಜನತೆಯ ಆಶಯವಾಗಿತ್ತು. ಕಾರ್ಯಕ್ರಮದ ಹೈಜಾಕ್ ಬಗ್ಗೆ ಅಧಿಕಾರಿಗಳು ಏನು ಸ್ಪಷ್ಟನೆ ಕೊಡುತ್ತಾರೋ ಗೊತ್ತಿಲ್ಲ. ಆದರೆ ಅರಣ್ಯ ಸಚಿವ ಈಶ್ವರ ಖಂಡ್ರೆಯವರು ಇಂತಹ ಪ್ರಮಾದಗಳು ಮುಂದೆ ನಡೆಯದಂತೆ ಗಮನ ಹರಿಸಬೇಕು.