ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಅನುಮಾಸ್ಪದವಾಗಿ ಕುಳಿತಿದ್ದ ಬೆಂಗಳೂರು ಹುಡುಗ ಹುಡುಗಿ |ಆಪತ್ಬಾಂಧವವಾದ ರೈಲ್ವೆ ರಕ್ಷಣಾ ದಳ
Bengaluru-based boy and girl rescued, Shivamogga Railway Protection Force

SHIVAMOGGA | MALENADUTODAY NEWS | ಮಲೆನಾಡು ಟುಡೆ Jan 25, 2025
ಶಿವಮೊಗ್ಗ ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ಮತ್ತೊಂದು ಒಳ್ಳೆಯ ಕೆಲಸ ಮಾಡಿದ್ದಾರೆ. ಬೆಂಗಳೂರಿನಿಂದ ಬಂದಂತ ಜೋಡಿಯೊಂದನ್ನು ರಕ್ಷಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಕ್ಕಳ ರಕ್ಷಣಾ ವಿಭಾಗದ ಸುಪರ್ಧಿಗೆ ಒಪ್ಪಿಸಿದ್ದಾರೆ.
ಏನಿದು ಪ್ರಕರಣ
ಬೆಂಗಳೂರು ಮೂಲದ ಹುಡುಗಿ ಹುಡುಗ ಇಬ್ಬರು ತಮ್ಮ ಮನೆಯವರಿಗೆ ತಿಳಿಸದೇ ಟ್ರೈನ್ ಹತ್ತಿಕೊಂಡು, ಬೆಂಗಳೂರು ಸಮೀಪದ ಜಿಲ್ಲೆಯೊಂದರಿಂದ ಶಿವಮೊಗ್ಗಕ್ಕೆ ಬಂದಿದ್ದಾರೆ.ಈ ಇಬ್ಬರನ್ನು ಅನುಮಾನದ ಮೇರೆಗೆ ಅಧಿಕಾರಿಗಳ ತಂಡ ವಿಚಾರಣೆಗೆ ಒಳಪಡಿಸಿದೆ. ಇದರ ನಡುವೆ ಹುಡುಗ ಹುಡುಗಿಯ ಫೋಷಕರು, ಇಬ್ಬರನ್ನು ಸುರಕ್ಷಿತವಾಗಿ ತಮ್ಮಲ್ಲೆ ಇರಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಇನ್ನೂ ತಪ್ಪಿಸಿಕೊಂಡು ಬಂದಿದ್ದ ಹುಡುಗ ಹುಡುಗಿ ಆತಂಕದಲ್ಲಿರುವುದನ್ನು ಸಹ ಅಧಿಕಾರಿಗಳ ತಂಡ ಗಮನಿಸಿದೆ. ಮೇಲಾಗಿ ಇಬ್ಬರ ವಯಸ್ಸನ್ನು ಪರಿಶೀಲಿಸಿದಾಗ ಹುಡುಗ ಅಪ್ರಾಪ್ತನಾಗಿರುವುದು ಕಂಡು ಬಂದಿದೆ. ಹೀಗಾಗಿ ಮಕ್ಕಳ ರಕ್ಷಣಾ ವಿಭಾಗಕ್ಕೆ ಇಬ್ಬರನ್ನು ಹಸ್ತಾಂತರಿಸಿದ್ದಾರೆ. ಸದ್ಯ ಇಬ್ಬರು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಸುಪರ್ಧಿಯಲ್ಲಿ ಮುಂದಿನ ಪ್ರಕ್ರಿಯೆಗಳು ಜಾರಿಯಲ್ಲಿವೆ.
ರಕ್ಷಣೆ ಕಾರ್ಯಾಚರಣೆ ಹೇಗಿತ್ತು
Operation Nanhe Farishteh ಅಡಿಯಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ವಿಶೇಷ ಗಮನ ಹರಿಸಲಾಗುತ್ತೆ. ಪ್ರತಿನಿತ್ಯ ಓಡಾಡುವ ಪ್ರಯಾಣಿಕರ ಪೈಕಿ ಅನುಮಾನಸ್ಪದವಾಗಿ ಕಾಣುವ ಅಪ್ರಾಪ್ತರನ್ನು ಗುರುತಿಸಿ, ಅವರನ್ನು ರಕ್ಷಣೆ ಮಾಡುವ ಅಭಿಯಾನವನ್ನು Operation Nanhe Farishteh ಅಡಿಯಲ್ಲಿ ಕೈಗೊಳ್ಳಲಾಗುತ್ತಿದೆ. ಅದೇ ರೀತಿಯಲ್ಲಿ ಬೆಂಗಳೂರು ಮೂಲದ ಹುಡುಗ ಹಾಗೂ ಹುಡುಗಿಯನ್ನು ರಕ್ಷಣೆ ಮಾಡಲಾಗಿದೆ.
ಶಿವಮೊಗ್ಗ ಮೈಸೂರು ಎಕ್ಸ್‌ಪ್ರೆಸ್ ರೈಲು ಸಂಚಾರದ ಸಂದರ್ಭದಲ್ಲಿ ರೈಲ್ವೆ ರಕ್ಷಣಾ ದಳದ ಎಎಸ್‌ಐ ಶ್ರೀನಿವಾಸ್, ಹೆಡ್ ಕಾನ್‌ಸ್ಟೇಬಲ್ ಅಭಿಲಾಶ್ ಕೆಸಿ ಹಾಗೂ ಕಾನ್‌ಸ್ಟೇಬಲ್ ಮಂಜುನಾಥ್ ಕೆಎನ್ ರವರ ತಂಡ ರೌಂಡ್ಸ್‌ನಲ್ಲಿತ್ತು. ಈ ಸಂದರ್ಭದಲ್ಲಿ ಪ್ಲಾಟ್‌ಫಾರಮ್ ನಂಬರ್ ಒಂದರಲ್ಲಿ ಹುಡುಗ ಹುಡುಗಿ ಬೆಂಚ್ ಮೇಲೆ ಕುಳಿತಿರುವುದನ್ನ ಗಮನಿಸಿದ ತಂಡ ಅವರಿಬ್ಬರ ಮುಖದಲ್ಲಿನ ವತ್ಯಾಸಗಳನ್ನು ಗಮನಿಸಿದ್ದಾರೆ. ಬಹುತೇಕ ಇಬ್ಬರು ಅಪ್ರಾಪ್ತರಂತೆ ಕಂಡ ಹಿನ್ನೆಲೆಯಲ್ಲಿ ತಕ್ಷಣವೇ ಅಲ್ಲಿಗೆ ತೆರಳಿ ಇಬ್ಬರನ್ನು ವಿಚಾರಿಸಿದ್ದಾರೆ ಅಧಿಕಾರಿಗಳು. ಎಲ್ಲಿಯವವರು ? ಎಲ್ಲಿಗೆ ಹೋಗುತ್ತಿದ್ದೀರಿ? ಎಂದೆಲ್ಲಾ ವಿಚಾರಿಸಿದಾಗ ಇಬ್ಬರು ಸಮರ್ಪಕ ಉತ್ತರ ನೀಡಿಲ್ಲ. ಹೀಗಾಗಿ ಅನುಮಾನಗೊಂಡು ಇಬ್ಬರನ್ನ ಆರ್‌ಪಿಎಫ್‌ನ ಕಚೇರಿಗೆ ಕರೆದುಕೊಂಡು ಬಂದು ವಿಚಾರಿಸಿದ್ದಾರೆ. ಈ ವೇಳೆ ನಡೆದ ಘಟನೆಯನ್ನು ಹುಡುಗ ಹುಡುಗಿ ವಿವರಿಸಿದ್ದಾರೆ.
SUMMARY | Bengaluru-based boy and girl rescued by Shivamogga Railway Protection Force officers
KEY WORDS | Bengaluru-based boy and girl rescued, Shivamogga Railway Protection Force