ಗೃಹಸಚಿವರ ಹೆಸರಲ್ಲಿ ತಿರುಪತಿಯಲ್ಲಿ VIP ಪಾಸ್‌ ಪಡೆಯುತ್ತಿದ್ದ ಬೆಂಗಳೂರು ವ್ಯಕ್ತಿ ಅರೆಸ್ಟ್‌

Bengaluru-based accused arrested for obtaining VIP pass in Tirupati in the name of Home Minister Dr. G. Parameshwara

ಗೃಹಸಚಿವರ ಹೆಸರಲ್ಲಿ ತಿರುಪತಿಯಲ್ಲಿ VIP ಪಾಸ್‌ ಪಡೆಯುತ್ತಿದ್ದ ಬೆಂಗಳೂರು ವ್ಯಕ್ತಿ ಅರೆಸ್ಟ್‌
Bengaluru based accused arrested , VIP pass in Tirupati , Home Minister Dr. G. Parameshwara

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 16, 2024 ‌‌ 

ಗೃಹ ಸಚಿವ ಡಾ.ಜಿ. ಪರಮೇಶ್ವರ್ ರವರ ಹೆಸರಲ್ಲಿ ತಿರುಪತಿಯಲ್ಲಿ ವಿಐಪಿ ಪಾಸ್‌ ಕೊಡಿಸುತ್ತಿದ್ದ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಯಲಹಂಕದ ನಿವಾಸಿ ಮಾರುತಿ ಎಂಬಾತ ಬಂಧಿತ ಆರೋಪಿ. 

ಈತ ಗೃಹಸಚಿವರ ಹೆಸರಲ್ಲಿ ನಕಲಿ ಲೆಡ್‌ ಹೆಡ್‌ ರೆಡಿಮಾಡುತ್ತಿದ್ದ ಎನ್ನಲಾಗಿದೆ, ಸಚಿವರ ಫೋಟೋವನ್ನು ಡಿಪಿಯಲ್ಲಿ ಹಾಕಿಕೊಂಡು, ಅವರ ಹೆಸರಲ್ಲಿ ತಿರುಪತಿಗೆ ಹೋಗುವವರಿಂದ ಹಣ ಪಡೆದು ವಿಐಪಿ ಪಾಸ್ ಕೊಡಿಸುತ್ತಿದ್ದ ಎಂದು ದೂರಲಾಗಿದೆ. ಅಲ್ಲದೆ  ಆಂಧ್ರ ಪ್ರದೇಶದ ಮುಖ್ಯಮಂತ್ರಿ ಕಚೇರಿಗೆ ವಾಟ್ಸಾಪ್ ಸಚಿವರ ಹೆಸರಲ್ಲಿ ಲೆಟರ್‌ ಹೆಡ್‌ ಕಳುಹಿಸಿ ಅವರ ಹೆಸರನ್ನ ದುರುಪಯೋಗ ಪಡಿಸಿಕೊಂಡಿದ್ದ ಎನ್ನಲಾಗಿದೆ. ಈ ಸಂಬಂಧ  ಗೃಹ ಸಚಿವರ ವಿಶೇಷ ಅಧಿಕಾರಿ ನಾಗಣ್ಣ ನೀಡಿದ ದೂರಿನ ಮೇರೆಗೆ ತುಮಕೂರು ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ

‌ 

SUMMARY |  Bengaluru-based accused arrested for obtaining VIP pass in Tirupati in the name of Home Minister Dr. G. Parameshwara

KEY WORDS |Bengaluru based accused arrested , VIP pass in Tirupati , Home Minister Dr. G. Parameshwara