Bengaluru coffee shop case | ಬೆಂಗಳೂರು ಕಾಫಿ ಶಾಪ್ ವಾಶ್ ರೂಮ್‌ನಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣ | ಶಿವಮೊಗ್ಗದ ಆರೋಪಿ ಅರೆಸ್ಟ್
Bengaluru Hidden camera in coffee shop toilet bin
SHIVAMOGGA | MALENADUTODAY NEWS | Aug 12, 2024 ಮಲೆನಾಡು ಟುಡೆ
ಬೆಂಗಳೂರು ಕಾಪಿ ಶಾಫ್ (coffee shop in bangalore ) ಒಂದರ ಶೌಚಾಲಯದಲ್ಲಿ ಮೊಬೈಲ್ ಕ್ಯಾಮರಾ ಇಟ್ಟ ಪ್ರಕರಣ ಸದ್ಯ ದೊಡ್ಡಮಟ್ಟಿಗೆ ಸದ್ದು ಮಾಡುತ್ತಿದೆ. ಪ್ರಕರಣ ಸೋಶಿಯಲ್ ಮೀಡಿಯಾ ಸಾಕಷ್ಟು ಚರ್ಚೆಯನ್ನು ಸಹ ಹುಟ್ಟುಹಾಕಿದೆ.
ಬೆಂಗಳೂರು ಕಾಫಿ ಶಾಪ್ ಕೇಸ್
ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಮೂಲತಹ ಶಿವಮೊಗ್ಗದವನು ಎಂದು ಗೊತ್ತಾಗಿದೆ. 23 ವರ್ಷದ ಆರೋಪಿ ಬೆಂಗಳೂರಿನ ಗುಟ್ಟಹಳ್ಳಿಯಲ್ಲಿ ನೆಲಸಿದ್ದ. ಸದ್ಯ ಈತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) (Bharatiya Nyaya Sanhita (BNS) ) ಸೆಕ್ಷನ್ 77 (voyeurism) ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಗೆ ಸಂಬಂಧಿಸಿದ ಸೆಕ್ಷನ್‌ಗಳ ಪ್ರಕರಣ ದಾಖಲಿಸಿದ್ದಾರೆ.
(voyeurism) ಎಂದರೇ ಏನು?
Voyeurism ಕನ್ನಡದಲ್ಲಿ ವಯೂರಿಸಂ ಎಂಬುದು ಹಿಂದಿನ ಐಪಿಎಸ್ 354ಸಿ ಹಾಗೂ ಪ್ರಸ್ತುತ ಇರುವ ಬಿಎನ್‌ಎಸ್ ಸೆಕ್ಷನ್ 77 ಪ್ರಕಾರ ಶಿಕ್ಷಾರ್ಹ ಅಪರಾಧ
ಯಾವುದೇ ವ್ಯಕ್ತಿಯು ತಮ್ಮ ಕಾಮದಿಚ್ಚೆಯ ಸಲುವಾಗಿ ಇನ್ನೊಬ್ಬ ಮಹಿಳೆಯ ಖಾಸಗಿ ಚಟುವಟಿಕೆಗಳನ್ನು ನೋಡುವುದಾಗಲಿ ಅದನ್ನು ಚಿತ್ರೀಕರಿಸುವುದಾಗಿ ಅಪರಾಧವಾಗುತ್ತದೆ.
ಡಿಸಿಪಿ ಶೇಖರ್ ಹೇಳಿದ್ದೇನು?
ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಹೆಚ್ ಟಿ ಕಾಫಿ ಶಾಪ್‌ನ ಟಾಯ್ಲೆಟ್‌ನ ಡಸ್ಟ್ ಬಿನ್ ಕವರ್‌ನಲ್ಲಿ ಶಿವಮೊಗ್ಗ ಮೂಲದ ಆರೋಪಿ ಮನೋಜ್ ಎಂಬಾತ ಮೊಬೈಲ್ ಇಟ್ಟಿದ್ದ ಏರೋಪ್ಲೇನ್ ಮೂಡ್‌ನಲ್ಲಿದ್ದ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಆಗಿತ್ತು ಎಂದು ತಿಳಿಸಿದ್ದಾರೆ.
ಇನ್ನೂ ಬಗ್ಗೆ ಗೊತ್ತಾದ ತಕ್ಷಣವೆ ಮಹಿಳೆಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮರುಗಳಿಗೆಯಲ್ಲಿಯೇ ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಶಾಪ್‌ನಲ್ಲಿ ಕಾಫಿ ಮೇಕರ್ ಆಗಿದ್ದ ಈತ ಮೊಬೈಲ್‌ನ್ನ ಶೌಚಾಲಯದಲ್ಲಿ ಇಟ್ಟಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಮೊಬೈಲ್‌ನ್ನ ಹೈದ್ರಾಬಾದ್‌ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಡಿಸಿಪಿ ಶೇಖರ್ (https://x.com/DCPCentralBCP) ವಿವರಿಸಿದ್ದಾರೆ.
ಇವೆಲ್ಲದರ ಬೆಳವಣಿಗೆ ನಡುವೆ ಕಾಫಿ ಶಾಪ್ ಮಾಲೀಕರು ಸೋಶಿಯಲ್ ಮಿಡಿಯಾದಲ್ಲಿ ಆದ ಅಚಾತುರ್ಯದ ಬಗ್ಗೆ ಕ್ಷಮೆಯಾಚಿಸಿದ್ದಾರೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ