Bengaluru | ಎದುರುಗಡೆಯಿದ್ದ ಕಾರು, ಬೈಕ್‌ಗಳನ್ನು ತಳ್ಳಿಕೊಂಡೆ ಮುಂದಕ್ಕೆ ಹೋದ ಬಿಎಂಟಿಸಿ ಬಸ್‌ | ನಡೆದಿದ್ದೇನು? VIDEO ಇದೆ

Bengaluru BMTC Volvo bus collides with vehicles | ಬಿಎಂಟಿಸಿ ಬಸ್‌ವೊಂದು ಸರಣಿ ಅಪಘಾತಕ್ಕೆ ಕಾರಣವಾಗಿದೆ.

Bengaluru | ಎದುರುಗಡೆಯಿದ್ದ ಕಾರು, ಬೈಕ್‌ಗಳನ್ನು ತಳ್ಳಿಕೊಂಡೆ ಮುಂದಕ್ಕೆ ಹೋದ ಬಿಎಂಟಿಸಿ ಬಸ್‌ | ನಡೆದಿದ್ದೇನು? VIDEO ಇದೆ
ಬೆಂಗಳೂರು, ಬಿಎಂಟಿಸಿ ಬಸ್‌, ಬಿಎಂಟಿಸಿ ವೋಲ್ವೋ ಬಸ್‌ Bengaluru ,BMTC Volvo bus

SHIVAMOGGA | MALENADUTODAY NEWS | Aug 13 2024  ಮಲೆನಾಡು ಟುಡೆ  

ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ವೋಲ್ವೋ ಬಸ್‌ (BMTC Volvo Bus)ವೊಂದು, ಮುಂದಕ್ಕೆ ಸಾಗುತ್ತಿದ್ದ ನಾಲ್ಕು ಬೈಕ್‌ ಹಾಗೂ ನಾಲ್ಕು ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಈ ಘಟನೆ ಬಸ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅದೃಷ್ಟಕ್ಕೆ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಉಂಟಾಗಿಲ್ಲ. ಆದರೆ ಹಲವರಿಗೆ ಪೆಟ್ಟು ಬಿದ್ದಿದೆ. 

ಬಿಎಂಟಿಸಿ ವೋಲ್ವೋ ಬಸ್‌/ BMTC Volvo Bus

ಸೋಮವಾರ ಬೆಳಗ್ಗೆ ಹೆಬ್ಬಾಳ ಎಸ್ಟೀಂ ಮಾಲ್ ಸಮೀಪದ ಫ್ಲೈ ಓವರ್‌ನ ಮೇಲೆ ಈ ಘಟನೆ ಸಂಭವಿಸಿದೆ. ಸ್ಲೋ ಮೂವಿಂಗ್‌ ಟ್ರಾಫಿಕ್‌ನ ನಡುವೆ ಬಸ್‌ ಚಲಾಯಿಸುತ್ತಿದ್ದ ಡ್ರೈವರ್‌ಗೆ ಘಟನೆ ಹೇಗಾಯ್ತು ಎಂದೇ ಅರಿವಿಗೆ ಬರಲಿಲ್ಲ.

ನಡೆದಿದ್ದೇನು?

ಆತ ಬ್ರೇಕ್‌ ಹಾಕುವ ಪ್ರಯತ್ನ ಮಾಡಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರ ನಡುವೆ ಬಸ್‌ ಮುಂದಕ್ಕೆ ಹೋಗುತ್ತಿದ್ದ ಬೈಕ್‌ ವೊಂದಕ್ಕೆ ಡಿಕ್ಕಿಯಾಗಿದೆ. ಆ ಬಳಿಕ ಮೂರು ಬೈಕ್‌ಗಳಿಗೆ ಡಿಕ್ಕಿಯಾಗಿ ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಬಸ್‌ ಹಿಂದಿನಿಂದ ತಳ್ಳಿದ್ದರಿಂದ ಉಳಿದ ವಾಹನಗಳು ಮುಂದಿನವಾಹನಕ್ಕೆ ಡಿಕ್ಕಿಯಾಗಿವೆ. 

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ - ಹೆಚ್ಎಸ್ಆರ್ ಲೇಔಟ್‌ ಮಾರ್ಗದಲ್ಲಿ ಸಂಚರಿಸುತ್ತಿದ್ದ ವೋಲ್ವೋ ಬಸ್ ನಿಂದ ಈ ಘಟನೆ ಸಂಭವಿಸಿದೆ.  

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ