ಬಿಜೆಪಿ ರಾಜ್ಯಾಧ್ಯಕ್ಷ BY ವಿಜಯೇಂದ್ರ ವಿರುದ್ಧ ಮತ್ತೊಬ್ಬ ನಾಯಕನ ಬಂಡಾಯ! ಏನಿದು ರಾಜಕಾರಣ
Belagavi leader, Ramesh Jarkiholi asked who is BY Vijayendra
SHIVAMOGGA | MALENADUTODAY NEWS | ಮಲೆನಾಡು ಟುಡೆ Oct 29, 2024
ಬಿಜೆಪಿ ರಾಜ್ಯಾದ್ಯಕ್ಷ ಬಿವೈ ವಿಜಯೇಂದ್ರ ವಿರುದ್ದ ಇದೀಗ ಇನ್ನೊಬ್ಬ ಮುಖಂಡ ಬಹಿರಂಗ ಬಂಡಾಯ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ರಾಜಕಾರಣದ ಪ್ರಮುಖ ವ್ಯಕ್ತಿಯಾಗಿರುವ ರಮೇಶ್ ಜಾರಕಿಹೊಳಿ ನಿನ್ನೆ ದಿನ ಮಾತನಾಡುತ್ತಾ BY ವಿಜಯೇಂದ್ರರವರೇ ಸ್ವತಃ ತಮ್ಮನ್ನ ಕರೆದರೂ ಸಹ ನಾನು ಪ್ರಚಾರಕ್ಕೆ ಹೋಗುವುದಿಲ್ಲ ಎಂದಿದ್ದಾರೆ. ಅಲ್ಲದೆ ಅವರ ಮುಖವನ್ನೂ ನೋಡುವುದಿಲ್ಲ. ಅಷ್ಟಕ್ಕೂ ನನ್ನನ್ನು ಪ್ರಚಾರಕ್ಕೆ ಕರೆಯಲು ವಿಜಯೇಂದ್ರ ಯಾರು ಅಂತಾ ಪ್ರಶ್ನಿಸಿದ್ದಾರೆ.
ಹಾಗೊಂದು ವೇಳೆ ಪಕ್ಷದ ಹೈಕಮಾಂಡ್ ಪ್ರಚಾರಕ್ಕೆ ಹೋಗಿ ಎಂದು ಸೂಚಿಸಿದರಷ್ಟೆ ಹೋಗುವುದಾಗಿ ತಿಳಿಸಿದ ಅವರು ಇದುವರೆಗೂ ತಮ್ಮನ್ನ ಯಾರು ಕರೆದಿಲ್ಲ ಎಂದಿದ್ದಾರೆ. BSY ಸಿಎಂ ಆಗಲು ಸಿಪಿ ಯೋಗೇಶ್ವರ್ ಕಾರಣ ಎಂಬುದು ನಿಜ ಎಂದಿದ್ದಾರೆ.
SUMMARY | Belagavi leader, Ramesh Jarkiholi asked who is BY Vijayendra
KEYWORDS | Belagavi leader, Ramesh Jarkiholi , who is BY Vijayendra