ಬಸವನಗೌಡ ಪಾಟೀಲ್‌ ಯತ್ನಾಳ್‌ ಹೊರಗಿನವರಲ್ಲ ನಮ್ಮವರೆ | ಮಾಜಿ ಸಿ ಎಂ ಯಡಿಯೂರಪ್ಪ ಹೇಳಿದ್ದೇನು?

Basanagouda Patil Yatnal is now angry for some reason or the other. They are not outsiders, I want them to take everyone along," yediyurappa said.

ಬಸವನಗೌಡ ಪಾಟೀಲ್‌ ಯತ್ನಾಳ್‌ ಹೊರಗಿನವರಲ್ಲ ನಮ್ಮವರೆ | ಮಾಜಿ ಸಿ ಎಂ ಯಡಿಯೂರಪ್ಪ ಹೇಳಿದ್ದೇನು?
Basavanagouda Patil Yatnal is not an outsider he is ours

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 4, 2024

ಬಸನ ಗೌಡ ಪಾಟೀಲ್‌ ಯತ್ನಾಳ್‌ ಈಗ ಯಾವುದೋ ಒಂದು ಕಾರಣಕ್ಕೆ ಆಕ್ರೋಶದಲ್ಲಿದ್ದಾರೆ. ಅವರು ಹೊರಗಡೆಯವರಲ್ಲ ನಮ್ಮವರೆ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎನ್ನುವುದು ನನ್ನ ಅಪೇಕ್ಷೆ ಎಂದು ಮಾಜಿ ಸಿಎಂ ಯಡಿಯೂರಪ್ಪ ತಿಳಿಸಿದರು.

ಇಂದು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಬಿ ಎಸ್‌ ಯಡಿಯೂರಪ್ಪ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಬೇಕು ಎನ್ನುವುದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಬಿವೈ ರಾಘವೇಂದ್ರರವರ ಅಪೇಕ್ಷೆಯು ಆಗಿದೆ. ಏನೇ ಕೂರತೆ ಇದ್ದರೂ ಎದುರು ಬದುರು ಕೂತು ಮಾತಾಡಿ ಬಗೆಹರಿಸಿ ಒಟ್ಟಾಗಿ ಹೋಗಬೇಕು ಎನ್ನುವುದು ನನ್ನ ಅಭಿಪ್ರಾಯ ಅದಕ್ಕೆ ಎಲ್ಲರೂ ಸಹಕರಿಸುತ್ತಾರೆ ಅಂತ ನಂಬಿದ್ದೇನೆ ಎಂದರು.

ಬೆಳಗಾವಿ ಅದಿವೇಶನ ಬಗ್ಗೆ ಮಾತನಾಡಿ ನಮ್ಮ ಶಾಸಕರು ಅಧಿವೇಶನದಲ್ಲಿ ಭಾಗವಹಿಸುತ್ತಾರೆ. ಆ ವೇಳೆ ಯಶಸ್ವಿಯಾಗಿ ಸರ್ಕಾರದ ವೈಫಲ್ಯಗಳ ವಿರುದ್ದ ಜಾಗೃತಿ ಮೂಡಿಸುತ್ತಾರೆ. ಸರ್ಕಾರದ ಕೊರತೆಗಳನ್ನು ಜನರ ಗಮನಕ್ಕೆ ತರುವ ಕೆಲಸವನ್ನು ನಮ್ಮ ಶಾಸಕರು ಒಟ್ಟಾಗಿ ಮಾಡುತ್ತಾರೆ ಎಂದರು.

ಈ ವೇಳೆ ಮುಡಾ ಹಗರಣದ ಬಗ್ಗೆ ಮಾತನಾಡಿದ ಮಾಜಿ ಸಿಎಂ ಮುಡಾ ಹಗರಣದದಂತೆ ಬಹಳಷ್ಟು ಹಗರಣಗಳಿವೆ. ಮುಡಾ ಸೈಟ್ ವಾಪಾಸ್ಸು ಕೊಟ್ಟಿರುವ ವಿಚಾರ ಸಹ ನನಗೆ ತಿಳಿಯಿತು. ಒಂದು ಸಲ ಅಪರಾದ ಮಾಡಿದ ಮೇಲೆ ಅದು ಅಪರಾಧನೆ. ಸೈಟ್‌ ವಾಪಸ್ಸು ಕೊಡೋದು ಬಿಡೋದು ಬೇರೆ ವಿಷಯ. ಇಷ್ಟೇ ಅಲ್ಲ ಸಾವಿರಾರು ಸೈಟ್ ಗಳನ್ನು ಕಾನೂನು ಬಾಹಿರವಾಗಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಇ.ಡಿ ಅವರು ಪುರಾವೆ ಇಲ್ಲದೆ ಮಾತಾಡಲ್ಲ. ಮುಂದಿನ ದಿನಗಳಲ್ಲಿ ಏನೇನು ಆಗುತ್ತೆ ಅಂತ ಕಾದು ನೋಡೋಣ ಎಂದರು.

SUMMARY | Basanagouda Patil Yatnal is now angry for some reason or the other. They are not outsiders, I want them to take everyone along," yediyurappa said.


KEYWORDS |  Basanagouda Patil Yatnal,  yediyurappa, poiticalnews, kannadanews,