ಗರ್ಲ್‌ಫ್ರೆಂಡ್‌ ಎಕ್ಸ್‌ಚೇಂಜ್‌ ಕೇಸ್‌ | CCB ಯಿಂದ ಭದ್ರಾವತಿಯ ಓರ್ವ ಸೇರಿ ಇಬ್ಬರು ಅರೆಸ್ಟ್‌

Bangalore CCB police arrest two people

ಗರ್ಲ್‌ಫ್ರೆಂಡ್‌ ಎಕ್ಸ್‌ಚೇಂಜ್‌ ಕೇಸ್‌ | CCB ಯಿಂದ ಭದ್ರಾವತಿಯ ಓರ್ವ ಸೇರಿ ಇಬ್ಬರು ಅರೆಸ್ಟ್‌
Bangalore CCB police arrest two people, Bhadravati accused, girlfriend exchange case

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 26, 2024 ‌‌  

ಗರ್ಲ್‌ಫ್ರೆಂಡ್‌ ಎಕ್ಸ್‌ಚೇಂಜ್‌ ಪ್ರಕರಣವೊಂದರಲ್ಲಿ ಬೆಂಗಳೂರು ಪೊಲೀಸರು ಭದ್ರಾವತಿ ಮೂಲದ ಹರಿ ಎಂಬಾತ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ತಮ್ಮ ಸ್ನೇಹಿತೆಯ ಅಶ್ಲೀಲ ವಿಡಿಯೋ ಇಟ್ಟುಕೊಂಡು ಆಕೆಯನ್ನು ಬೇರೆಯವರ ಜೊತೆಗೆ ಸಹಕರಿಸುವಂತೆ ಒತ್ತಾಯ ಹೇರಿ ಬೆದರಿಸಿದ ಆರೋಪ ಇವರ ಮೇಲಿದೆ. 

ಏನಿದು ಕೇಸ್‌ 

ಬೆಂಗಳೂರು ಸಿಸಿಬಿ ಪೊಲೀಸರು ಪ್ರಕರಣದ ತನಿಖೆ ನಡೆಸ್ತಿದ್ದು, ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಹೇಮಂತ್ ಮತ್ತು ಭದ್ರಾವತಿ ಮೂಲದ ಹರಿ ಬಂಧಿತ ಆರೋಪಿಗಳು. ಇವರಿಂದ  7 ಮೊಬೈಲ್‌ಗಳು, 1 ಲ್ಯಾಪ್‌ಟಾಪ್‌ ವಶಕ್ಕೆ ಪಡೆಯಲಾಗಿದೆ. ಸ್ನೇಹಿತರಾಗಿದ್ದ ಇವರಿಗೆ ಸಂತ್ರಸ್ತಳು ಪರಿಚಯಸ್ಥಳಾಗಿದ್ದಳು. ಹೇಮಂತ್‌ ತೆರದಿದ್ದ ಬಾರ್‌ ಆಂಡ್‌ ರೆಸ್ಟೋರೆಂಟ್‌ನ್ನು ಹರೀಶ್‌ ನೋಡಿಕೊಳ್ಳುತ್ತಿದ್ದ. ಸಂತ್ರಸ್ತೆಯ ಹೆಸರಲ್ಲಿ ಈ ಬಾರ್‌ ಆಂಡ್‌ ರೆಸ್ಟೊರೆಂಟ್‌ ನಡೆಯುತ್ತಿತ್ತು. ಮೂವರು ಆತ್ಮೀಯರಾಗಿದ್ದರು. ಈ ನಡುವೆ ಆರೋಪಿಗಳು ಆಕೆಯನ್ನು ಇನ್ನೊಬ್ಬರ ಜೊತೆಗೂ ಸಹಕರಿಸುವಂತೆ ಒತ್ತಾಯಿಸಿದ್ದಾರೆ. ಅದರಿಂದ ಸಿಟ್ಟಿಗೆದ್ದ ಯುವತಿ ಇವರಿಂದ ದೂರವಾಗಿದ್ದಳು. ಆನಂತರ ಆಕೆಯ ವೈಯಕ್ತಿಕ ವಿಡಿಯೋ ಇಟ್ಟುಕೊಂಡು ಆಕೆ ಮೇಲೆ ದೌರ್ಜನ್ಯವೆಸಗಿದ್ದಾರೆ ಎನ್ನಲಾಗಿದೆ. ಹಣಕ್ಕಾಗಿ ಬ್ಲಾಕ್‌ ಮೇಲ್‌ ಮಾಡುತ್ತಿದ್ದರಿಂದ ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಸಂಬಂಧ ಆರೋಪಿಗಳನ್ನ ಬಂಧಿಸಿರುವ ಸಿಸಿಬಿ ಪೊಲೀಸರು ಇವರ ಲ್ಯಾಪ್‌ ಟಾಪ್‌ ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಮತ್ತಷ್ಟು ಜನರಿಗೆ ಇದೇ ರೀತಿ ಬೆದರಿಕೆ ಹಾಕಿದ ಬಗ್ಗೆ ಸಿಸಿಬಿ ಪೊಲೀಸರು ಸುಳಿವು ಪಡೆದಿದ್ದಾರೆ ಎನ್ನಲಾಗಿದೆ.

SUMMARY |   Bangalore CCB police arrest two people, including Bhadravati accused, in girlfriend exchange case

KEY WORDS |Bangalore CCB police arrest two people, Bhadravati accused, girlfriend exchange case