ನೆಟ್‌ಫ್ಲಿಕ್ಸ್‌ನಲ್ಲಿ ಕಮಾಲ್ ಮಾಡುತ್ತಾ ಬಾಲಯ್ಯನ ಈ ಸಿನಿಮಾ | ರಿಲೀಸ್ ಯಾವಾಗ
Balakrishna's 'Daaku' is all set to release on Netflix on February 21.

SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 17, 2025
ಜನವರಿ 12 ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದ ನಂದಮೂರಿ ಬಾಲಕೃಷ್ಣ ನಟನೆಯೆ ಡಾಕು ಸಿನಿಮಾ ಇದೇ ಫೆಬ್ರವರಿ 21 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ.
ವಯಸ್ಸು 60 ದಾಟಿದ್ದರೂ ಸಹ ಬಾಲಯ್ಯ ಹಿಟ್ ಸಿನಿಮಾವನ್ನು ಕೊಡುವುದರಲ್ಲಿ ಇಂದಿಗೂ ಎತ್ತಿದ ಕೈ. ಇತ್ತೀಚೆಗೆ ಬಾಲಯ್ಯ ಅಖಂಡ ಹಾಗೂ ವೀರಸಿಂಹ ರೆಡ್ಡಿ ಮೂಲಕ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾವನ್ನು ನೀಡಿದ್ದರು. ಅದಾದ ನಂತರ ಬಾಲಯ್ಯ ಅಭಿನಯದ ಡಾಕು ಚಿತ್ರ ಘೋಷಣೆಯಾಯಿತು. ಆಗ ಅವರ ಅಭಿಮಾನಿಗಳು ಈ ಚಿತ್ರದ ಮೂಲಕ ಬಾಲಯ್ಯ ಹ್ಯಾಟ್ರಿಕ್ ಹಿಟ್ ಕೊಡಬಹುದೆಂದು ಭಾವಿಸಿದ್ದರು. ಅದರಂತಯೇ ಡಾಕು ಚಿತ್ರ ಯಶಸ್ವಿಯಾಗಿ ಪ್ರೇಕ್ಷಕರ ಮನಗೆದ್ದು ನೂರು ಕೋಟಿಗೂ ಅಧಿಕ ಕಲೆಕ್ಷನ್‌ನ್ನು ಮಾಡಿತ್ತು. ಈ ಚಿತ್ರದಲ್ಲಿ ಬಾಬಿ ಡಿಯೋಲ್ ಹಾಗೂ ಬಾಲಯ್ಯರವರ ಪಾತ್ರ ಆ ಮಟ್ಟಿಗೆ ಕಮಾಲ್ ಮಾಡಿತ್ತು.
ಈ ಚಿತ್ರವನ್ನು ಬಾಬಿ ಕೊಲ್ಲಿ ನಿರ್ದೇಶಿಸಿದ್ದು, ಚಿತ್ರಕ್ಕೆ ಸೂರ್ಯದೇವರ ನಾಗವಂಶಿ ಬಂಡವಾಳ ಹೂಡಿದ್ದರು. ಈ ವರ್ಷ ಅತಿಹೆಚ್ಚು ಕಲೆಕ್ಷನ್ ಮಾಡಿದ್ದ ತೆಲುಗು ಚಿತ್ರಗಳ ಸಾಲಿನಲ್ಲಿ ಡಾಕು ಚಿತ್ರವೂ ಸಹ ಒಂದು. ಆ ಚಿತ್ರ ಈಗ ಫೆಬ್ರವರಿ 21 ರಂದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗುತ್ತಿದ್ದು, ಬಾಲಯ್ಯ ಅಭಿಮಾನಿಗಳಿಗೆ ಸಂತಸ ತಂದಿದೆ.
SUMMARY | Balakrishna's 'Daaku' is all set to release on Netflix on February 21.
KEYWORDS | Balakrishna, Daaku, Netflix,