ಶಿಗ್ಗಾವಿ, ಸಂಡೂರು, ಚನ್ನಪಟ್ಟಣ ಉಪಚುನಾವಣೆ ಸೋಲು | ಬಿ ವೈ ವಿಜಯೇಂದ್ರ ಕೊಟ್ಟ ಕಾರಣ ಏನು ಗೊತ್ತಾ
I take moral responsibility for the defeat in Shiggaon, Channapatna and Sandur bypoll: BJP state president BY Vijayendra
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 24, 2024
ಶಿಗ್ಗಾಂವಿ, ಚನ್ನಪಟ್ಟಣ ಹಾಗೂ ಸಂಡೂರು ಉಪಚುನಾವಣೆಯ ಸೋಲಿನ ನೈತಿಕ ಹೊಣೆಯನ್ನ ತಾನೆ ಹೊರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಮೂರು ಕ್ಷೇತ್ರದಲ್ಲಿಯು ಸೋಲು ಕಂಡ ಬೆನ್ನಲ್ಲೆ ಮಾತನಾಡಿದ ಅವರು ಬಿಜೆಪಿ ಸೋಲಿನ ಜವಾಬ್ದಾರಿಯನ್ನು ಪಕ್ಷದ ರಾಜ್ಯಾಧ್ಯಕ್ಷನಾಗಿ ನಾನೇ ಹೊರುತ್ತೇನೆ ಎಂದಿದ್ದಾರೆ.
ಉಪಚುನಾವಣೆಯಲ್ಲಿ ಪಕ್ಷದ ಹಿನ್ನಡೆಗೆ ಕಾರಣ ಏನು ಎಂಬುದರ ಬಗ್ಗೆ ವಿಶ್ಲೇಷಣೆ ಮಾಡುತ್ತೇವೆ ಎಂದ ವಿಜಯೇಂದ್ರರವರು ನಾವು ನಮ್ಮ ತಪ್ಪನ್ನ ತಿದ್ದಿಕೊಂಡು ಹೋಗಬೇಕು ಎಂದು ಮತದಾರರು ಸಂದೇಶ ರವಾನೆ ಮಾಡಿದ್ದಾರೆ ಎಂದರು. ಅಲ್ಲದೆ ನಮ್ಮದು ರಾಷ್ಟ್ರೀಯ ಪಕ್ಷ, ಯತ್ನಾಳ್ ಕೇಂದ್ರ ಸಚಿವರಾಗಿದ್ದವರು. ಅವರು ಹಗುರವಾಗಿ ಮಾತನಾಡುವು ದನ್ನು ಬಿಡಬೇಕು ಎಂದ ಬಿಜೆಪಿ ರಾಜ್ಯಾಧ್ಯಕ್ಷ ಬರುವ ದಿನಗಳಲ್ಲಿ ಎಲ್ಲವನ್ನು ಸರಿಪಡಿಸಿಕೊಂಡು ಹೋಗುವ ಕೆಲಸ ಮಾಡುತ್ತೇವೆ ಎಂದರು
ಸೋಲಿನಿಂದ ಹತಾಶರಾಗಿಲ್ಲ ಆದರೆ, ಶಿಗ್ಗಾವಿ ಸೋಲು ಆಘಾತ ಮೂಡಿಸಿದೆ. ಬಸವರಾಜ ಬೊಮ್ಮಾಯಿಯವರು ಅಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದರು. ಅಲ್ಲಿಗೆ ಸೋಲಿನ ನಿರೀಕ್ಷೆಯೇ ಇರಲಿಲ್ಲ. ಆದರೆ ಅತಿಯಾದ ಆತ್ಮವಿಶ್ವಾಸ ಸೋಲಿಗೆ ಕಾರಣವಾಗಿರಬಹುದು. ಸೋಲಿಗೆ ಸಾಕಷ್ಟು ಕಾರಣಗಳಿರುತ್ತವೆ.ಅವುಗಳನ್ನ ಚರ್ಚಿಸುತ್ತೇವೆ ಎಂದಿದ್ದಾರೆ.
SUMMARY | I take moral responsibility for the defeat in Shiggaon, Channapatna and Sandur bypoll: BJP state president BY Vijayendra
KEY WORDS | bjp defeat in Shiggaovi, Channapatna , and Sandur bypoll BJP state president BY Vijayendra