ಕೋಟೆಯಲ್ಲಿ ತೋಟಕ್ಕೆ ಬೆಂಕಿ | 150 ಕ್ಕೂ ಹೆಚ್ಚು ಅಡಿಕೆ ಗಿಡ ನಾಶ
Arecanut saplings gutted in a fire, Kote village, Ayanur in Shivamogga district

SHIVAMOGGA | MALENADUTODAY NEWS | ಮಲೆನಾಡು ಟುಡೆ Jan 25, 2025
ಶಿವಮೊಗ್ಗ ಜಿಲ್ಲೆ ಆಯನೂರು ಬಳಿ ಸಿಗುವ ಕೋಟೆ ಗ್ರಾಮದಲ್ಲಿ ಅಡಿಕೆ ಸಸಿಗಳು ಬೆಂಕಿಗೆ ಆಹುತಿಯಾದ ಘಟನೆಯ ಬಗ್ಗೆ ವರದಿಯಾಗಿದೆ.
ಇಲ್ಲಿನ ನಿವಾಸಿ ಪರಮೇಶ್ವರಪ್ಪ ಎಂಬುವವರ ಜಮೀನಿನಲ್ಲಿದ್ದ 150ಕ್ಕೂ ಹೆಚ್ಚು ಅಡಕೆ ಸಸಿಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ.ಘಟನೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಇಡೀ ಜಮೀನಿಗೆ ಹೊತ್ತಿಕೊಂಡಿದ್ದ ಬೆಂಕಿ ಹನಿ ನೀರಾವರಿಗಾಗಿ ಅಳವಡಿಸಿದ್ದ ಪೈಪ್‌ಗಳನ್ನು ಪೂರ್ತಿ ಕರಗಿಸಿದೆ. ಇನ್ನೊಂದೆಡೆ ಸಸಿಗಳೆಲ್ಲವೂ ಬೆಂಕಿಯ ದಗೆಯಲ್ಲಿ ಸುಟ್ಟುಹೋಗಿವೆ.
ತೋಟದಲ್ಲಿ ಹೊಗೆ ಕಾಣಿಸಿಕೊಂಡಿದ್ದನ್ನು ಗಮನಿಸಿದ ಸ್ಥಳೀಯರು ಜಮೀನಿನ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಮಾಲೀಕರು, ಅಕ್ಕಪಕ್ಕದ ತೋಟದವರ ಸಹಾಯ ಪಡೆದು ನೀರು ಹಚ್ಚಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ಸಾಕಷ್ಟು ನಷ್ಟು ಸಂಭವಿಸಿತ್ತು. ಇನ್ನೂ ಸ್ಥಳಕ್ಕೆ ಸರ್ಕಾರಿ ಅಧಿಕಾರಿಗಳು ಬೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಆಕಸ್ಮಿಕಕ್ಕೆ ಕಾರಣ ತಿಳಿದುಬರಬೇಕಿದೆ.
SUMMARY | Arecanut saplings gutted in a fire in Kote village near Ayanur in Shivamogga district.
KEY WORDS | Arecanut saplings gutted in a fire, Kote village, Ayanur in Shivamogga district