ಆಗುಂಬೆ ಸುರಂಗ ಮಾರ್ಗ, ಚತುಷ್ಪತ ರಸ್ತೆ, ಸಿಗಂದೂರು ಸೇತುವೆ ಬಗ್ಗೆ ಸಂಸದರಿಂದ ಮತ್ತೊಂದು ಅಪ್‌ಡೇಟ್ಸ್

MP Ragavendra , Agumbe subway, four-lane road, Sigandur bridge , ಆಗುಂಬೆ ಸುರಂಗ ಮಾರ್ಗ, ಚತುಷ್ಪತ ರಸ್ತೆ, ಸಿಗಂದೂರು ಸೇತುವೆ, ಸಂಸದ ಬಿವೈ ರಾಘವೇಂದ್ರ

ಆಗುಂಬೆ ಸುರಂಗ ಮಾರ್ಗ, ಚತುಷ್ಪತ ರಸ್ತೆ, ಸಿಗಂದೂರು ಸೇತುವೆ ಬಗ್ಗೆ ಸಂಸದರಿಂದ ಮತ್ತೊಂದು ಅಪ್‌ಡೇಟ್ಸ್
MP Ragavendra , Agumbe subway, four-lane road, Sigandur bridge , ಆಗುಂಬೆ ಸುರಂಗ ಮಾರ್ಗ, ಚತುಷ್ಪತ ರಸ್ತೆ, ಸಿಗಂದೂರು ಸೇತುವೆ, ಸಂಸದ ಬಿವೈ ರಾಘವೇಂದ್ರ

SHIVAMOGGA | MALENADUTODAY NEWS | ಮಲೆನಾಡು ಟುಡೆ 

Sep 28, 2024  |  ವಂದೆ ಭಾರತ್‌ ಟ್ರೈನ್‌, ಸ್ಪೈಸ್‌ ಜೆಟ್‌ ಸಂಚಾರದ ಬಗ್ಗೆ ಇತ್ತೀಚೆಗೆ ಮಾಹಿತಿ ನೀಡಿದ ಸಂಸದ ಬಿವೈ ರಾಘವೇಂದ್ರ ಇದೀಗ ಆಗುಂಬೆ ಸುರಂಗ ಮಾರ್ಗ ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ  ಕೇಂದ್ರ ಭೂಸಾರಿಗೆ ಮಂತ್ರಾಲಯದ ಡೈರೆಕ್ಟರ್ ಜನರಲ್ ದರ್ಮೇಂದ್ರ ಸಾರಂಗಿರವರ ಜೊತೆಗೆ ಸಭೆ ನಡೆಸಿದ್ದಾರೆ. 

ದಿನಾಂಕ 27.09.2024 ರಂದು ಶಿವಮೊಗ್ಗ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪರಿವೀಕ್ಷಣೆಗೆ ಕೇಂದ್ರ ಭೂಸಾರಿಗೆ ಮಂತ್ರಾಲಯದ ಡೈರೆಕ್ಟರ್ ಜನರಲ್ ದರ್ಮೇಂದ್ರ ಸಾರಂಗಿರವರ ತಂಡ ಬಂದಿತ್ತು. ಈ ವೇಳೆ ಅವರನ್ನ ಸ್ವಾಗಿತಿಸಿದ ಸಂಸದರಾದ ಬಿ.ವೈ. ರಾಘವೇಂದ್ರರವರು ಸಭೆ ನಡೆಸಿದರು. 

ಈ ಸಂದರ್ಭದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳಾದ  ಸಿಗಂದೂರು ಸೇತುವೆ, ಚಿತ್ರದುರ್ಗ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ರಸ್ತೆ, ಹಾಗೂ ಸಾಗರ ಪಟ್ಟಣದ ಚತುಷ್ಪಥ ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಬಗ್ಗೆ ಚರ್ಚಿಸಿದರು. 

ಅಲ್ಲದೆ ಟೆಂಡರ್ ಪ್ರಕ್ರಿಯೆ ಮುಗಿದಿರುವ ಕಾಮಗಾರಿಗಳಾದ ಶಿವಮೊಗ್ಗ-ಆನಂದಪುರ 4 ಪಥದ ರಸ್ತೆ, ನೆಲ್ಲಿಸರದಿಂದ ತೀರ್ಥಹಳ್ಳಿವರೆಗಿನ 4 ಪಥದ ರಸ್ತೆ, ಬೈಂದೂರು-ನಾಗೋಡಿವರೆಗಿನ ದ್ವಿಪಥ ರಸ್ತೆ, ಹಾಗು ಹೊಸೂರು & ತಾಳಗುಪ್ಪ ರೈಲ್ವೇ ಮೇಲ್ವೇತುವೆ ಕಾಮಗಾರಿಗಳನ್ನು ಶೀಘ್ರ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.

2024-25 ನೇ ಸಾಲಿಗೆ ಮಂಜೂರಾದ ಕಾಮಗಾರಿಗಳಾದ ಆಗುಂಬೆ ರಸ್ತೆ, ಆನಂದಪುರದಿಂದ ತಾಳಗುಪ್ಪ ವರೆಗಿನ ರಸ್ತೆ, ಸಾಗರದಿಂದ ಮರಕುಟಕವರೆಗಿನ ರಸ್ತೆ ಹಾಗು ಬೈಂದೂರಿನಿಂದ ರಾಣೆಬೆನ್ನೂರುವರೆಗಿನ ಬಾಕಿ ಉಳಿದಿರುವ ರಸ್ತೆಗಳ ಡಿ.ಪಿ.ಆರ್ ಗಳಿಗೆ ಮಂಜೂರಾತಿ ಪಡೆಯುವ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ತಿಳಿಸಿದರು. 

ಮೇಗರವಳ್ಳಿಯಿಂದ ಸೋಮೇಶ್ವರದವರೆಗೆ ಆಗುಂಬೆ ಘಾಟಿಗೆ ಪರ್ಯಾಯವಾಗಿ 4 ಪಥದ ಟನಲ್ ರಸ್ತೆಯ ಡಿಪಿಆರ್ ತಯಾರಿಸುವ ಸಂಬಂದ ಕಾರ್ಯಸಾದ್ಯತೆ ವರದಿಯನ್ನು ತಯಾರಿಸಿ ಸಲ್ಲಿಸಲು ಸಹ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.