BIG BREAKING | ಶಿವಮೊಗ್ಗದಲ್ಲಿ ಮತ್ತೊಬ್ಬ ರೌಡಿಶೀಟರ್ ಕಾಲಿಗೆ ಗುಂಡು | ಎಸ್‌ಪಿ ಮಿಥುನ್ ಕುಮಾರ್
Another rowdy-sheeter shot in leg by Shivamogga police | SP Mithun Kumar
SHIVAMOGGA | MALENADUTODAY NEWS | Aug 12, 2024 ಮಲೆನಾಡು ಟುಡೆ
ವಿವಿಧ ಹಬ್ಬಗಳ ಹಿನ್ನೆಲೆಯಲ್ಲಿ ಮೊನ್ನೆಯಷ್ಟೆ ರೌಡಿ ಪರೇಡ್ ನಡೆಸಿದ್ದ ಎಸ್‌ಪಿ ಮಿಥುನ್ ಕುಮಾರ್ ಇದೀಗ ರೌಡಿಗಳಿಗೆ ಪರೋಕ್ಷವಾಗಿ ಮತ್ತೊಂದು ಎಚ್ಚರಿಕೆ ನೀಡಿದ್ದಾರೆ. ಶಿವಮೊಗ್ಗ ಪೊಲೀಸ್ ಇಲಾಖೆ ಮತ್ತೊಮ್ಮೆ ತನ್ನ ಪಿಸ್ತೂಲ್‌ಗೆ ಕೆಲಸ ನೀಡಿದ್ದು ರೌಡಿಶೀಟರ್ ಒಬ್ಬನ ಕಾಲಿಗೆ ಗುಂಡು ಬಿದ್ದಿದೆ. ವಿನೋಭಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭವಿತ್ ಎನ್ನುವ ಆರೋಪಿಯ ಕಾಲಿಗೆ ಪಿಎಸ್‌ಐ ಗುಂಡು ಹಾರಿಸಿದ್ದಾರೆ. ಸದ್ಯ ಈತನನ್ನು ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
SP Mithun Kumar | ರೌಡಿ ಪರೇಡ್ | 110 ಹಿಸ್ಟರಿ ಶೀಟರ್ಸ್‌ಗೆ ಎಸ್‌ಪಿ ಮಿಥುನ್ ಕುಮಾರ್ ವಾರ್ನಿಂಗ್
ಭವಿತ್ ವಿರುದ್ದ ಕೊಲೆ ಪ್ರಕರಣ, ದರೋಡೆ, ಕೊಲೆ ಯತ್ನ ಪ್ರಕರಣಗಳು ಸೇರಿದಂತೆ ಒಟ್ಟು ಏಳು ಪ್ರಕರಣಗಳಿವೆ. ಅಲ್ಲದೆ ಈತನ ವಿರುದ್ಧ ರೌಡಿಶೀಟ್ ಕೂಡ ಓಪನ್ ಆಗಿತ್ತು. ಜಿಲ್ಲೆಯಿಂದ ಗಡಿಪಾರಾದ ಬಳಿಕ ಈತ, ನಿನ್ನೆ ಶಿವಮೊಗ್ಗಕ್ಕೆ ವಾಪಸ್ ಆಗಿದ್ದ. ಜಯನಗರ ಸ್ಟೇಷನ್ ಲಿಮಿಟ್ಸ್ ನಲ್ಲಿ ನಿನ್ನೆ ರಾತ್ರಿ ಕಿರಿಕ್ ಮಾಡಿ ಗಲಾಟೆ ಮಾಡಿದ್ದ ಎಂದು ಹೇಳಲಾಗಿದೆ.
ಎಸ್‌ಪಿ ಮಿಥುನ್ ಕುಮಾರ್
ಇನ್ನೂ ಈ ಬಗ್ಗೆ ಮಾಧ್ಯಮಗಳ ವಾಟ್ಸ್ಯಾಪ್ ಗ್ರೂಪ್‌ಗೆ ಮೆಸೇಜ್ ರವಾನಿಸಿರುವ ಎಸ್‌ಪಿ ಮಿಥುನ್ ಕುಮಾರ್ ಭವಿತ್ ನಿನ್ನೆ ರಾತ್ರಿ ಜಯನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ತೊಂದರೆಕೊಟ್ಟಿದ್ದಷ್ಟೆ ಅಲ್ಲದೆ ಜನರನ್ನ ಅಡ್ಡಗಟ್ಟಿ ಕೊಲೆ ಮಾಡಲು ಮುಂದಾಗಿದ್ದ ಎಂದು ತಿಳಿಸಿದ್ದಾರೆ
ಇವತ್ತು ಪಿಎಸ್‌ಐ ಸುನಿಲ್ ಭವಿತ್‌ರನ್ನ ಅರೆಸ್ಟ್ ಮಾಡಲು ಹೋದ ಸಂದರ್ಭದಲ್ಲಿ ಅವರ ಮೇಲೆಯು ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಯ ಕ್ರಮವಾಗಿ ಪೊಲೀಸ್ ಅಧಿಕಾರಿ ಫೈರ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.