ದಾವಣಗೆರೆ | ಜಗಳೂರು ರೋಡಲ್ಲಿ ಹತ್ತಿರ ಹುರಳಿ ಸೊಪ್ಪಿನ ಮೇಲೆ ಚಲಿಸಿದ ಲಾರಿಗೆ ಬೆಂಕಿ
Andhra Pradesh truck caught fire , Donehalli , Jagalur taluk ,Davangere district

SHIVAMOGGA | MALENADUTODAY NEWS | ಮಲೆನಾಡು ಟುಡೆ Jan 22, 2025
ದಾವಣಗೆರೆ ಜಿಲ್ಲೆಯಲ್ಲಿ ರಸ್ತೆಯ ಮೇಲೆ ಒಕ್ಕಣೆ ಮಾಡಲು ಹಾಕಿದ್ದ ಹುರುಳಿ ಸೊಪ್ಪಿನ ಮೇಲೆ ಸಂಚರಿಸಿದ ಲಾರಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಸ್ಥಳದಲ್ಲಿಯೇ ಹೊತ್ತಿ ಉರಿದಿದೆ. ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಸಮೀಪ ಘಟನೆ ಸಂಭವಿಸಿದೆ. ಇದೇ ಹಾದಿಯಲ್ಲಿ ಬರುತ್ತಿದ್ದ ಸಿಮೆಂಟ್ ತುಂಬಿದ ಲಾರಿಗೆ ಬೆಂಕಿ ತಗುಲಿ ಅನಾಹುತ ಸಂಭವಿಸಿದೆ.
ಆಂಧ್ರಪ್ರದೇಶದಿಂದ ದಾವಣಗೆರೆ ಕಡೆಗೆ ಬರುತ್ತಿದ್ದ ಲಾರಿ ಜಗಳೂರು ತಾಲ್ಲೂಕಿನ ದೋಣೆಹಳ್ಳಿ-ಮುಷ್ಟೂರು ನಡುವೆ ಹುರಳಿಸೊಪ್ಪಿನ ಮೇಲೆ ತೆರಳುತ್ತಲೇ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದು ವ್ಯಾಪಿಸುತ್ತಲೇ ಚಾಲಕ ಹಾಗೂ ಕ್ಲೀನರ್ ಬಸ್‌ನಿಂದ ಇಳಿದು ಸುರಕ್ಷಿತ ಸ್ಥಳಕ್ಕೆ ಬಂದಿದ್ದಾರೆ. ತುರ್ತಾಗಿ ಬೆಂಕಿ ನಂದಿಸಲು ನೀರು ಸಿಗದ ಕಾರಣ ಇಡೀ ಲಾರಿ ಹೊತ್ತಿ ಉರಿದಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.
SUMMARY | A truck from Andhra Pradesh caught fire near Donehalli in Jagalur taluk in Davangere district.
KEY WORDS | Andhra Pradesh truck caught fire , Donehalli , Jagalur taluk ,Davangere district