ಆಯನೂರು | ನಿಯಂತ್ರಣ ತಪ್ಪಿ ಹಳ್ಳಕ್ಕೆ ಹಾರಿದ ಕಾರು | ಚಿತ್ರದುರ್ಗದಿಂದ ಸಾಗರಕ್ಕೆ ಹೋಗುತ್ತಿದ್ದವರಿಗೆ ಗಾಯ

An accident occurred near Ayanur in the Shivamogga district

ಆಯನೂರು | ನಿಯಂತ್ರಣ ತಪ್ಪಿ ಹಳ್ಳಕ್ಕೆ ಹಾರಿದ ಕಾರು | ಚಿತ್ರದುರ್ಗದಿಂದ ಸಾಗರಕ್ಕೆ ಹೋಗುತ್ತಿದ್ದವರಿಗೆ ಗಾಯ
Ayanur in the Shivamogga district

SHIVAMOGGA | MALENADUTODAY NEWS | Jul 9, 2024  ಮಲೆನಾಡು

ಶಿವಮೊಗ್ಗ ಜಿಲ್ಲೆ ಆಯನೂರು ಬಳಿ ಇವತ್ತು ಬೆಳಗ್ಗೆ ಅಪಘಾತವೊಂದು ಸಂಭವಿಸಿದೆ. ಘಟನೆಯಲ್ಲಿ ಚಾಲಕನ ಕಂಟ್ರೋಲ್‌ ತಪ್ಪಿ ಕಾರೊಂದು ರಸ್ತೆ ಪಕ್ಕದ ಹಳ್ಳಕೆ ಬಿದ್ದು ಪಲ್ಟಿಯಾಗಿದೆ. 

ಘಟನೆಯ ವಿವರ ನೋಡುವುದಾದರೆ, ಇವತ್ತು ಬೆಳಗಿನ ಜಾವ ಈ ಘಟನೆ ಸಂಭವಿಸಿದೆ. ಸ್ವಿಫ್ಟ್‌ ಡಿಸೈರ್‌ ಕಾರೊಂದು ಶಿವಮೊಗ್ಗದ ಕಡೆಯಿಂದ ಸಾಗರದ ಕಡೆಗೆ ಹೊರಟಿತ್ತು. ಆಯನೂರು ಬಳಿ ಇರುವ ಹಳ್ಳದ ಸಮೀಪ ಕಾರು ಕಂಟ್ರೋಲ್‌ ತಪ್ಪಿದೆ. ಪರಿಣಾಮ ಕಾರು ಪಕ್ಕದಲ್ಲಿದ್ದ ಹಳಕ್ಕೆ ಉರುಳಿದೆ. 

ಇದನ್ನು ಸಹ ಓದಿ : ಗಾಂಧಿ ಬಜಾರ್‌ನಲ್ಲಿ ಪುಟ್‌ಪಾತ್‌ ವ್ಯಾಪಾರಿಗಳಿಗೇ ನಿರ್ಬಂಧವಿದ್ಯಾ? ನಿನ್ನೆ ಸಂಜೆ ನಡೆದಿದ್ದೇನು?ಪೊಲೀಸ್ರು ಹೊಡೆದ್ರಾ? ಸಿಸಿ ಕ್ಯಾಮರಾದಲ್ಲಿ ಏನಿದೆ?

ಘಟನೆಯಲಲ್ಲಿ ಮೂವರು ಮಹಿಳೆಯರು ಹಾಗೂ ಮೂವರು ಮಕ್ಕಳು ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರು ಗಂಭೀರವಾಗಿದ್ದಾರೆ. ಇವರೆಲ್ಲಾ ಚಿತ್ರದುರ್ಗದಿಂದ ಸಾಗರಕ್ಕೆ ತೆರಳುತ್ತಿದ್ದರು ಎಂದು ಗೊತ್ತಾಗಿದೆ. ಇನ್ನೂ ಕಾರು ಕೆಳಕ್ಕೆ ಬಿಳುತ್ತಲೇ ಓಡಿ ಬಂದ ಸ್ಥಳಿಯರು ಹಾಗೂ ವಾಹನ ಸವಾರರು ಆಂಬುಲೆನ್ಸ್‌ ಕರೆಸಿಕೊಂಡು ಎಲ್ಲರನ್ನು ರಕ್ಷಣೆ ಮಾಡಿದ್ದಾರೆ. 

 

An accident occurred near Ayanur in the Shivamogga district this morning when a car lost control and overturned into a roadside ditch.