ಅಮ್ಮನಘಟ್ಟ ಜೇನುಕಲ್ಲಮ್ಮ ಉತ್ಸವ ಯಾವಾಗ ಗೊತ್ತಾಯ್ತಾ | ನಾಳೆ ವೀರಭದ್ರೇಶ್ವರ ಜಯಂತ್ಯುತ್ಸವ | ಬೆಟ್ಟಮಕ್ಕಿ ಗಣಪತಿ ವಿಸರ್ಜನೆ
ಅಮ್ಮನಘಟ್ಟ ಜೇನುಕಲ್ಲಮ್ಮ ಉತ್ಸವ, ವೀರಭದ್ರೇಶ್ವರ ಜಯಂತ್ಯುತ್ಸವ , ಬೆಟ್ಟಮಕ್ಕಿ ಗಣಪತಿ, ಶಿವಮೊಗ್ಗ ಫಾಸ್ಟ್ ನ್ಯೂಸ್ , Ammaghatta Jenukallamma Festival, Veerabhadreswara Jayanthyutsava, Bettamakki Ganapathy, Shivamogga Fast News,
![ಅಮ್ಮನಘಟ್ಟ ಜೇನುಕಲ್ಲಮ್ಮ ಉತ್ಸವ ಯಾವಾಗ ಗೊತ್ತಾಯ್ತಾ | ನಾಳೆ ವೀರಭದ್ರೇಶ್ವರ ಜಯಂತ್ಯುತ್ಸವ | ಬೆಟ್ಟಮಕ್ಕಿ ಗಣಪತಿ ವಿಸರ್ಜನೆ](https://malenadutoday.com/uploads/images/202409/image_870x_66e2ce4d9adb6.webp)
SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 12, 2024 shimoga Fast news
ಅಮ್ಮನಘಟ್ಟ ಜೇನುಕಲ್ಲಮ್ಮ ಉತ್ಸವ
ಹೊಸನಗರ ತಾಲ್ಲೂಕು ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಜೇನುಕಲ್ಲಮ್ಮ ಜಾತ್ರೆ ಇದೇ ಸೆಪ್ಟೆಂಬರ್ 20ರಿಂದ ನಡೆಯಲಿದೆ ಸೆ.17ರಂದು ದೇವಿಗೆ ಕಂಕಣ ಕಟ್ಟುವ ಮೂಲಕ ಚಾಲನೆ ನೀಡಲಾಗುವುದು ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷರಾಗಿರುವ ಮಾಜಿ ಶಾಸಕ ಬಿ.ಸ್ವಾಮಿರಾವ್ ತಿಳಿಸಿದ್ದಾರೆ. ‘ಸೆ.20, 24, 27 ಮತ್ತು ಅ.1ರಂದು ಜಾತ್ರೆ ನಡೆಯಲಿದೆ. ನಂತರ ನವರಾತ್ರಿ ಉತ್ಸವ ಜರುಗಲಿದೆ ಎಂದು ಅವರು ತಿಳಿಸಿದ್ದಾರೆ
ವೀರಭದ್ರೇಶ್ವರ ಜಯಂತ್ಯುತ್ಸವ
ಇನ್ನೂ ಶಿವಮೊಗ್ಗ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ಸೆಪ್ಟೆಂಬರ್ 13 ರಂದು ಅಂದರೆ ನಾಳೆ ಬೆಳಿಗ್ಗೆ 11.30ಕ್ಕೆ ವೀರಭದ್ರೇಶ್ವರ ಜಯಂತ್ಯುತ್ಸವ ಹಾಗೂ ಧರ್ಮಸಭೆ ಏರ್ಪಡಿಸಲಾಗಿದೆ ಎಂದು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಶಿವರಾಜ್ ಮಾಹಿತಿ ನೀಡಿದ್ದಾರೆ. ಧರ್ಮಸಭೆಯ ಸಾನಿಧ್ಯವನ್ನು ಸಿರಿಗೆರೆಯ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ವಹಿಸಲಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಬೆಟ್ಟಮಕ್ಕಿಯ ಗಣಪತಿ ವಿಸರ್ಜನೆ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಬೆಟ್ಟಮಕ್ಕಿಯ ಭೂತರಾಯನ ಕಟ್ಟೆಯ ಆವರಣದಲ್ಲಿ ಇಟ್ಟಂತಹ ಶ್ರೀ ವಿಶ್ವೇಶ್ವರ ಯುವಕ ಸಂಘದ ಗಣಪತಿಯ ಅದ್ದೂರಿ ವಿಸರ್ಜನಾ ಮೆರವಣಿಗೆ ನಾಳೆ ಸಂಜೆ ನಡೆಯಲಿದೆ. 22 ನೇ ವರ್ಷದ ಗಣೇಶೋತ್ಸವ ಏಳು ದಿನಗಳ ಪರ್ಯಂತ ನಡೆದಿದ್ದು ಡಿಜೆ, ಉಡುಪಿಯ ಹುಲಿವೇಷ, ಭದ್ರಾವತಿಯ ತಮಟೆ, ನಾಸಿಕ್ ಬ್ಯಾಂಡ್, ಕೀಲುಕುದುರೆ ಗೊಂಬೆಗಳು, ಸ್ಥಳೀಯ ಯುವಕ ಯುವತಿಯರ ಡ್ಯಾನ್ಸ್, ಸಿಡಿಮದ್ದು ಪ್ರದರ್ಶನದೊಂದಿಗೆ ನಾಳೆ ಗಣಪತಿ ರಾಜಬೀದಿ ಉತ್ಸವ ನಡೆಯಲಿದೆ.
weekly astrology kannada | ವಾರದ ಭವಿಷ್ಯ | ಈ ವಾರ ಈ ರಾಶಿಗಳಿಗೆ ವಿಶೇಷ ಸುದ್ದಿ
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ