ಬೆಳೆ ಹಾನಿ ಮಾಡುವ ಪ್ರಾಣಿಗಳಿಗೆ ಗುಂಡು ಹೊಡೆಯಲು ಅನುಮತಿ ನೀಡಿ | ಆರಗ ಜ್ಙಾನೇಂದ್ರ

The crops grown by the farmers are being destroyed by wild animals. Such animals should be taken away by the forest department or farmers should be allowed to shoot at wild animals that damage crops

ಬೆಳೆ ಹಾನಿ ಮಾಡುವ ಪ್ರಾಣಿಗಳಿಗೆ ಗುಂಡು ಹೊಡೆಯಲು ಅನುಮತಿ ನೀಡಿ | ಆರಗ ಜ್ಙಾನೇಂದ್ರ
Allow animals that damage crops to shoot

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 24, 2025

ಶಿವಮೊಗ್ಗ | ರೈತರು ಬೆಳೆದ ಬೆಳೆಗಳನ್ನು ಕಾಡುಪ್ರಾಣಿಗಳು ಹಾಳು ಮಾಡುತ್ತಿವೆ. ಅಂತಹ ಪ್ರಾಣಿಗಳನ್ನು ಅರಣ್ಯ ಇಲಾಖೆಯವರು ಹಿಡಿದುಕೊಂಡು ಹೋಗಬೇಕು ಅಥವಾ ಬೆಳೆ ಹಾನಿ ಮಾಡುವ ಕಾಡುಪ್ರಾಣಿಗಳಿಗೆ ಗುಂಡು ಹೊಡೆಯಲು ರೈತರಿಗೆ ಅನುಮತಿ ಕೊಡಬೇಕು ಎಂದು ಅರಣ್ಯಾಧಿಕಾರಿಗಳ ವಿರುದ್ಧ ಮಾಜಿ ಗೃಹಸಚಿವ ಆರಗಜ್ಞಾನೇಂದ್ರ ವಾಗ್ದಾಳಿ ನಡೆಸಿದರು. 

ನಗರದ ಅರಣ್ಯಾಧಿಕಾರಿಗಳ ಕಚೇರಿ ಎದುರು ಇಂದು ಬಿಜೆಪಿ ರೈತಮೋರ್ಚಾದ ವತಿಯಿಂದ ರೈತರ ಬೆಳೆ ಹಾನಿ ಮಾಡುತ್ತಿರುವ ಕಾಡಾನೆಗಳನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ಪ್ರತಿಭಟನೆಯನ್ನು ಕೈಗೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿ ಮಾಜಿ ಗೃಹಸಚಿವರು  ಇಂದು ಪ್ರಾಣಿಗಳಿಂದ ನಮ್ಮನ್ನು ರಕ್ಷಣೆ ಮಾಡಿ ಎಂದು ನಾವು ಹೋರಾಟ ಮಾಡುತ್ತಿದ್ದೇವೆ. ಇತ್ತೀಚೆಗೆ ಪ್ರಾಣಿ ಮತ್ತು ಮನುಷ್ಯನ ಸಂಘರ್ಘ ಮೀತಿ ಮಿರುತ್ತಿದೆ. ಅರಣ್ಯಾಧಿಕಾರಿಗಳಿಗೆ ಕಾಡಿನಲ್ಲಿ ಗಿಡ ನೆಡಿ ಎಂದರೆ ರೈತರ ಮನೆ ಹಿಂಬಾಗಿಲಲ್ಲಿ ಬಂದು ಅಗಲು ಹೊಡಿಯುತ್ತಿದ್ದಾರೆ. ಮಲೆನಾಡಿನ ಭಾಗದ ಜನರ  ಸಮಸ್ಯೆಯನ್ನ ಸರ್ಕಾರ ಅರ್ಥವೇ ಮಾಡಿಕೊಂಡಿಲ್ಲ. ರೈತರು ಬೆಳೆದು ಕೊಟ್ಟ ಆಹಾರವನ್ನು  ನೀವು ಅರಾಮಾಗಿ ಕೂತುಕೊಂಡು ಊಟ ಮಾಡ್ತೀರ ಆದರೆ ರೈತರ ಕಷ್ಟಕ್ಕೆ ನೀವು ಸ್ಪಂದಿಸುವುದಿಲ್ಲ. ನಿಮ್ಮ ಇಲಾಖೆಯ ಕಾಡು ಪ್ರಾಣಿಗಳನ್ನು ನೀವು ಹಿಡಿದುಕೊಂಡು ಹೋಗಿ ಇಲ್ಲಾ ಬೆಳೆ ಹಾನಿ ಮಾಡುವ ಕಾಡು ಪ್ರಾಣಿಗೆ ಗುಂಡು ಹೊಡೆಯಲು ಅನುಮತಿ ಕೊಡಿ ಎಂದು ಅರಣಾಧಿಕಾರಿಗಳ ವಿರುದ್ದ ಗುಡುಗಿದರು.

ರೈತರ ಹಣೆಬರಹವನ್ನು ಅರಣ್ಯ ಇಲಾಖೆಯವರು ಬರೆಯುತ್ತಿದ್ದಾರೆ

ನಾವು ಬೆಳೆ ಬೆಳೆದು ಕಾಡು ಪ್ರಾಣಿಗೆ ಆಹಾರ ಕೊಡುವಂತಾಗಿದೆ. ನಮ್ಮ ಬದುಕು ಹಾಗೂ ನಾವು ತಿನ್ನುವ ಆಹಾರವನ್ನು ಅರಣ್ಯ ಇಲಾಖೆ ಕಸಿದುಕೊಳ್ಳುತ್ತಿದೆ. ರೈತರ ಹಣೆ ಬರಹ ದೇವರು ಬರೆಯುತ್ತಿಲ್ಲ ಅರಣ್ಯ ಇಲಾಖೆಯವರು ಬರೆಯುತ್ತಿದ್ದಾರೆ.ಕಾಡು ರಕ್ಷಣೆ ಆಗಿರೋದು ಅರಣ್ಯ ಇಲಾಖೆಯವರಿಂದಲ್ಲ ರೈತರಿಂದ ಎಂದರು.

SUMMARY | The crops grown by the farmers are being destroyed by wild animals. Such animals should be taken away by the forest department or farmers should be allowed to shoot at wild animals that damage crops

KEYWORDS | farmers,  forest department,  wild animals, araga jnanendra