ಅರಣ್ಯ ಒತ್ತುವರಿ | ಆರೋಪಿಗೆ ಒಂದು ವರ್ಷ ಸಜೆ 10 ಸಾವಿರ ದಂಡ
Chinnaswamy, a resident of Kunchenahalli in Holalur hobli of Shivamogga taluk, was sentenced to one year simple imprisonment and a fine of Rs 10,000 by the Karnataka Anti-Land Grabbing Special Court.

SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 12, 2025
ಶಿವಮೊಗ್ಗ | ರಾಜ್ಯ ಅರಣ್ಯ ಪ್ರದೇಶದಲ್ಲಿನ 7 ಎಕರೆ ಒತ್ತುವರಿ ಆರೋಪ ಸಾಬೀತಾದ ಹಿನ್ನಲೆ ಶಿವಮೊಗ್ಗ ತಾಲ್ಲೂಕು ಹೊಳಲೂರು ಹೋಬಳಿಯ ಕುಂಚೇನಹಳ್ಳಿ ವ್ಯಾಪ್ತಿಯ ಚಿನ್ನಸ್ವಾಮಿ ಅವರಿಗೆ, ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಒಂದು ವರ್ಷದ ಸಾಧಾರಣ ಜೈಲು ಶಿಕ್ಷೆ ಮತ್ತು ರೂ,10 ಸಾವಿರ ದಂಡ ವಿಧಿಸಿದೆ.
ಶಿವಮೊಗ್ಗದ ಶಂಕರ ವಲಯದ ಅರಣ್ಯಧಿಕಾರಿಯೊಬ್ಬರು ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ದೂರನ್ನು ನೀಡಿದ್ದರು. ದೂರಿನ ಅನುಸಾರ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಿಕ ಸದಸ್ಯ ಪಾಟೀಲ ನಾಗಲಿಂಗನಗೌಡ ಮತ್ತು ಕಂದಾಯ ಸದಸ್ಯ ಕೆ.ಎಚ್.ಅಶ್ವತ್ಥ ನಾರಾಯಣಗೌಡ ಅವರಿದ್ದ ಪೀಠವು ಈ ಕುರಿತಂತೆ ಆದೇಶಿಸಿದೆ. ದಂಡ ಪಾವತಿಸಲು ತಪ್ಪಿದರೆ ಮೂರು ತಿಂಗಳ ಸಾಧಾರಣ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದೂ ತಿಳಿಸಿದೆ. ಅಷ್ಟೇ ಅಲ್ಲದೆ ಆರೋಪಿಗಳು ಒತ್ತುವರಿ ಮಾಡಿರುವ ಅರಣ್ಯ ಜಮೀ ನನ್ನು ಕೂಡಲೇ ತೆರವುಗೊಳಿಸಬೇಕು. ಈ ಸಂಬಂಧ ವಲಯ ಅರಣ್ಯಾಧಿಕಾರಿ 60 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಪೀಠವು ನಿರ್ದೇಶನ ನೀಡಿದೆ.
SUMMARY | Chinnaswamy, a resident of Kunchenahalli in Holalur hobli of Shivamogga taluk, was sentenced to one year simple imprisonment and a fine of Rs 10,000 by the Karnataka Anti-Land Grabbing Special Court.
KEYWORDS | Shivamogga, forest land, Special Court, fined,