15 ವರುಷಗಳ ನಂತರ ಪಡುಬಿದ್ರಿ ಪೊಲೀಸರಿಗೆ ಶಿಕಾರಿಪುರದಲ್ಲಿ ಸಿಕ್ಕ ಕಳ್ಳತನದ ಕೇಸ್‌ನ ಆರೋಪಿ
Accused Arrested , Padubidri Police Station, Shikaripura, Shimoga News

SHIVAMOGGA | MALENADUTODAY NEWS | ಮಲೆನಾಡು ಟುಡೆ Jan 18, 2025
ಇತ್ತೀಚೆಗೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಮಾಳೂರು ಪೊಲೀಸರು ಉಡುಪಿಯಲ್ಲಿ ಆರೋಪಿಯೊಬ್ಬನನ್ನ ಬಂಧಿಸಿ ಕರೆತಂದಿದ್ದರು. ಇದರ ಬೆನ್ನಲ್ಲೆ ಇದೀಗ ಪಡುಬಿದ್ರಿ ಪೊಲೀಸರು ಕಳ್ಳತನ ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ನಿವಾಸಿಯೊಬ್ಬರೊಬ್ಬನ್ನು 15 ವರ್ಷಗಳ ಬಳಿಕ ಅರೆಸ್ಟ್ ಮಾಡಿದ್ದಾರೆ. ಶಿಕಾರಿಪುರ ನಿವಾಸಿ ರಮೇಶ್ ಬಂದಿತ ಆರೋಪಿ. ಈತನ ವಿರುದ್ಧ 2010 ರಲ್ಲಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಬಂಧಿಯಾಗಿದ್ದ ಈತ ಜೈಲಿನಿಂದ ಬಿಡುಗಡೆಯಾದ ನಂತರ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಎರಡು ಪ್ರಕರಣಗಳಲ್ಲಿ ಅವರ ವಿರುದ್ಧ ಎಲ್‌ಪಿಸಿ ವಾರಂಟ್‌ಗಳನ್ನು ಹೊರಡಿಸಲಾಗಿತ್ತು. ತತ್ಸಂಬಂಧ ಜನವರಿ 14, 2025 ರಂದು ಪಡುಬಿದ್ರಿ ಪೊಲೀಸ್ ಠಾಣೆಯ ಸಿಬ್ಬಂದಿ ಆರೋಪಿಯನ್ನು ಶಿವಮೊಗ್ಗದ ಶಿಕಾರಿಪುರ ತಾಲ್ಲೂಕಿನಲ್ಲಿ ಪತ್ತೆಹಚ್ಚಿ ಅರೆಸ್ಟ್ ಮಾಡಿ ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ.
SUMMARY | Accused Arrested from Padubidri Police Station, Shikaripura, Shimoga News
KEY WORDS | Accused Arrested , Padubidri Police Station, Shikaripura, Shimoga News