ಮಹಾರಾಷ್ಟ್ರದಿಂದ ಊರಿಗೆ ಬಂದು ಹೆಣ್ಣು ನೋಡಲು ಬೈಕ್‌ನಲ್ಲಿ ಹೊರಟವನಿಗೆ ಆಘಾತ | ನಡು ರಸ್ತೆಯಲ್ಲಿ ಎದುರಾಗಿತ್ತು ಸಾವು

Accident near Chinnamane near Ayanur, Shimoga.

ಮಹಾರಾಷ್ಟ್ರದಿಂದ ಊರಿಗೆ ಬಂದು ಹೆಣ್ಣು ನೋಡಲು ಬೈಕ್‌ನಲ್ಲಿ ಹೊರಟವನಿಗೆ ಆಘಾತ | ನಡು ರಸ್ತೆಯಲ್ಲಿ ಎದುರಾಗಿತ್ತು ಸಾವು
Accident near Chinnamane near Ayanur, Shimoga.

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 20, 2025 ‌‌ 

ಶಿವಮೊಗ್ಗದ ಚಿನ್ನಮನೆ ಬಳಿ ನಿನ್ನೆದಿನ ಅಂದರೆ ಭಾನುವಾರ ಆಕ್ಸಿಡೆಂಟ್‌ ಅಗಿದ್ದು, ಆ ಘಟನೆಯಲ್ಲಿ ಬೈಕ್‌ ಸವಾರ ಸ್ಪಾಟ್‌ ಡೆತ್‌ ಆಗಿದ್ದಾನೆ. ಬಸ್ ಹಾಗೂ ಬೈಕ್ ನಡುವೆ ಈ ಘಟನೆ ಸಂಭವಿಸಿದೆ.  ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು,  ಘಟನೆಯು ಆಯನೂರು ಸಮೀಪದ ಚಿನ್ನಮನೆ ಗ್ರಾಮದ ಬಳಿಯಲ್ಲಿ ನಡೆದಿದೆ.

ರಿಪ್ಪನ್‌ಪೇಟೆ ಕಡೆಯಿಂದ ತೆರಳುತಿದ್ದ ಖಾಸಗಿ ಬಸ್ ಹಾಗೂ ಆಯನೂರು ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ತೆರಳುತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಘಟನೆ ಸಂಭವಿಸಿದೆ,  ಕುಂಸಿ ಪೊಲೀಸ್ ಠಾಣೆ ಪೊಲೀಸರು ಮೃತದೇಹ ಶವಾಗಾರಕ್ಕೆ ಶಿಫ್ಟ್‌ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ವಿಚಿತ್ರ ಅಂದರೆ, ಮೃತ ನಿವಾಸಿ ಕೂರಂಬಳ್ಳಿಯ 32 ವರ್ಷದ ಮಂಜುನಾಥ್‌ ಹೆಣ್ಣು ನೋಡಲು ಎಂದು ರಿಪ್ಪನ್‌ಪೇಟೆ ಕಡೆಗೆ ಹೋಗುತ್ತಿದ್ದರು ಎನ್ನಲಾಗಿದೆ. ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದ ಅವರು ಮದುವೆ ಸಲುವಾಗಿ ಹೆಣ್ಣು ನೋಡಲು ಊರಿಗೆ ಬಂದಿದ್ದರು. ಆದರೆ ಅಷ್ಟರಲ್ಲಿ ಈ ದುರ್ಘಟನೆ ಸಂಭವಿಸಿದೆ

SUMMARY |   Accident near Chinnamane near Ayanur, Shimoga.

KEY WORD |Accident near Chinnamane near Ayanur, Shimoga.