ಕವಿಮನೆಯ ಹೇಮಾಂಗಣದಲ್ಲಿ ಶ್ರೀಮಂತ ಮಂತ್ರ ಮಾಂಗಲ್ಯ | ವೈರಲ್‌ ವಿಡಿಯೋಗಳು ಕೇಳುತ್ತಿವೆ ಸರಿ ತಪ್ಪು?

Meanwhile a mantra mangalya has taken place at kuvempu's house in Kuppally 

ಕವಿಮನೆಯ ಹೇಮಾಂಗಣದಲ್ಲಿ ಶ್ರೀಮಂತ ಮಂತ್ರ ಮಾಂಗಲ್ಯ | ವೈರಲ್‌ ವಿಡಿಯೋಗಳು ಕೇಳುತ್ತಿವೆ ಸರಿ ತಪ್ಪು?
A grand mantra mangalya was held at Kuvempu's house

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 25, 2025

ಮಂತ್ರ ಮಾಂಗಲ್ಯ ವಿವಾಹದ ಪರಿಕಲ್ಪನೆ ಇತ್ತೀಚೆಗೆ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆಯೇ? ಇಂತಹದ್ದೊಂದು ಪ್ರಶ್ನೆ ಮೂಡಲು ಕಾರಣವಾಗಿದ್ದು ಶಿವಮೊಗ್ಗದ ಕುಪ್ಪಳ್ಳಿಯಲ್ಲಿ ನಡೆದ ಮದುವೆ. ರಾಷ್ಟ್ರಕವಿ ಕುವೆಂಪುರವರು ಮದುವೆಯಲ್ಲಿ ಆಡಂಬರ ಬೇಡ ಎನ್ನುವ ಕಾರಣಕ್ಕಾಗಿ ಸರಳವಾಗಿ ಮದುವೆಯಾಗುವ ಪದ್ದತಿಯೊಂದನ್ನು ಅಳವಡಿಸಿದರು. ಅವರು ಹಾಕಿಕೊಟ್ಟ ರೀತಿಯಲ್ಲಿಯೇ ಹಲವು ಮಲ್ನಾಡ್‌ ಜೋಡಿಗಳು ಮದುವೆಯಾಗಿರುವ ಉದಾಹರಣೆಗಳಿವೆ. ಈ ನಡುವೆ ಕವಿಮನೆ ಕುಪ್ಪಳ್ಳಿಯಲ್ಲಿ ನಡೆದ ವಿವಾಹವೊಂದರ ವಿಡಿಯೋ ಇದೀಗ ತೀರ್ಥಹಳ್ಳಿ ತುಂಬೆಲ್ಲಾ ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿದೆ. ಆ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಇದೆಂತಾ ಜಾತ್ರೆಯನಾ? ಮಂತ್ರಮಾಂಗಲ್ಯನ ಮಾರಾಯ? ಅಬ್ಬಾ, ಇಷ್ಟೊಂದು ಅಬ್ಬರವನಾ? ಎಂದು ಮಾತನಾಡುವುದು ಕೇಳುತ್ತಿದೆ. 

ಅದ್ದೂರಿತನ ವಿರುದ್ಧವಾದದು ಮಂತ್ರ ಮಾಂಗಲ್ಯ. ಹಿತೈಷಿಗಳ ಎದುರು ಸರಳ ವೇದಿಕೆಯಲ್ಲಿ ಹಾರ ಬದಲಿಸಿಕೊಂಡು ರಾಷ್ಟ್ರಕವಿಯ ಅಣತಿಯಂತೆ ಮದುವೆಯಾಗುವ ಮಂತ್ರ ಮಾಂಗಲ್ಯವೇ ದುಬಾರಿತನದ ಪ್ರದರ್ಶನವಾದರೆ ಕವಿಮನಕ್ಕೆ ನೋವುತಂದಂತಲ್ಲವೆ ಎಂಬುದು ಜನರ ಪ್ರಶ್ನೆ. ಇನ್ನೂ ಕವಿಮನೆಯಲ್ಲಿ ನಡೆದ ಮಂತ್ರಮಾಂಗಲ್ಯಕ್ಕಾಗಿ ಹೂವು ಹಣ್ಣು ತೋರಣಗಳ ಸಿಂಗಾರದ ಸೊಗಸು, ದೀಪಗಳ ಸೊಬಗು, ಆತಿಥ್ಯದ ವ್ಯವಸ್ಥೆಗಳು ಸಿರಿತನದ ಬಿನ್ನಾಣಗಳಂತಿದ್ದವು ಎನ್ನುವುದಕ್ಕೆ ವೈರಲ್‌ ಆಗಿರುವ ವಿಡಿಯೋ ಸಾಕ್ಷ್ಯ ಹೇಳುತ್ತಿದೆ. ಮೇಲಾಗಿ ಮದುವೆಯಲ್ಲಿ ನಡೆದಿದೆ ಎನ್ನಲಾದ ಕೆಲವೊಂದು ಆತಿಥ್ಯ ವ್ಯವಸ್ಥೆಯ ಬಗ್ಗೆ ತೀರ್ಥಹಳ್ಳಿಯ ಜ್ಞಾನವಂತರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. 

ಮಂತ್ರಮಾಗಲ್ಯ ಎಂದರೇನು?  

ಕುವೆಂಪು ಅವರ ಪರಿಕಲ್ಪನೆಯ ಒಂದು ಸರಳ ವಿವಾಹ ಪದ್ಧತಿಯೇ ಮಂತ್ರ ಮಾಂಗಲ್ಯ ವಿವಾಹ ಪದ್ಧತಿಯಾಗಿದೆ. ಇದನ್ನು ಜಾತಿ, ಧರ್ಮ, ಭಾಷೆ ಎಲ್ಲವನ್ನೂ ಮೀರಿದ ವಿಶ್ವಮಾನವ ವಿವಾಹ ಪದ್ಧತಿ ಎಂದರು ತಪ್ಪಾಗಲಾರದು.

ಮಂತ್ರ ಮಾಂಗಲ್ಯದ ಸರಳ ನಿಯಮಗಳು ಯಾವುವು.. ?

ಮಂತ್ರ ಮಾಂಗಲ್ಯದ ಕೆಲವೊಂದು ಸರಳ ನಿಯಮಗಳನ್ನು ನೋಡುವುದಾದರೆ. ಗಂಡಿನ ಕುಟುಂಬದವರು ಹಾಗೂ ಹೆಣ್ಣಿನ ಕುಟುಂಬದವರು ಎರಡೂ ಕಡೆಯಿಂದಲೂ ಒಟ್ಟು 200 ಜನರನ್ನು ಮೀರದಂತೆ ಆಹ್ವಾನಿಸಬೇಕು. ವಿವಾಹ ವೇದಿಕೆಯ ಮೇಲೆ ಎಲ್ಲರೆದುರು ವಧು-ವರರಿಗೆ ಉಡುಗೊರೆಗಳನ್ನು ಕೊಡುವುದು ನಿಷಿದ್ಧ. ವಿವಾಹವಾದ ನಂತರ ಯಾವಾಗ ಬೇಕಾದರೂ ಉಡುಗೊರೆಗಳನ್ನು ಕೊಡಬಹುದು. ಯಾವುದೇ ವಾದ್ಯ ಓಲಗ ತಮಟೆ ಧ್ವನಿವರ್ಧಕ ಮುಂತಾದ ಪ್ರಚಾರ ಸಾಮಗ್ರಿಗಳನ್ನು ಬಳಸಬಾರದು. 

SUMMARY |  Meanwhile a mantra mangalya has taken place at kuvempu's house in Kuppally 

KEYWORDS |  mantra mangalya,  kuvempu,  Kuppally, marriage,