ಪೋಷಕರೇ ಹುಷಾರ್ ಕೂಲ್ಡ್ ಡ್ರಿಂಕ್ಸ್ ಮುಚ್ಚಳ ನುಂಗಿ 9 ತಿಂಗಳ ಮಗು ಸಾವು
A 9-month-old baby died after swallowing the lid of a cool drink while playing in Hyderabad

SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 12, 2025
ಹೈದರಾಬಾದ್ | ಪೋಷಕರು ಮಕ್ಕಳ ವಿಚಾರದಲ್ಲಿ ಎಷ್ಟೇ ಜಾಗರೂಕತೆಯಿಂದ ಇದ್ದರೂ ಸಾಲುವುದಿಲ್ಲ. ಮಕ್ಕಳು ಒಂದಲ್ಲ ಒಂದು ರೀತಿಯ ಅಪಾಯಕರ ಚಟುವಟಿಕೆಯಲ್ಲಿ ತೊಡಗಿರುತ್ತವೆ. ಅದನ್ನು ನಾವು ಗಮನಿಸದೇ ಹೋದರೆ ಅದು ಮಕ್ಕಳ ಜೀವಕ್ಕೆ ಕಂಟಕಾಗುವುದಂತು ಸತ್ಯ. ಅದೇ ರೀತಿ ಹೈದರಾಬಾದ್ ನಲ್ಲಿ 9 ತಿಂಗಳ ಮಗುವೊಂದು ಆಟವಾಡುತ್ತಿರುವಾಗ ಕೂಲ್ ಡ್ರಿಂಕ್ ಮುಚ್ಚಳ ನುಂಗಿ ಸಾವನ್ನಪ್ಪಿದೆ. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
కూల్ డ్రింక్ మూత మింగి 9 నెలల బాలుడు మృతి
మంచిర్యాల జిల్లా లక్షెట్టిపేట్ మున్సిపాలిటీలోని ఉత్కూర్లోసురేందర్ కుమారుడు రుద్ర అయాన్ (9నెలలు) బాబు కూల్ డ్రింక్ మూత మింగి మృతి
సురేందర్ కుటుంబసమేతంగా లక్షెట్టిపేట్ మండలంలో కొమ్ముగూడెంలోని ఓ శుభకార్యానికి హాజరయ్యారు
అక్కడ రుద్ర అయాన్… pic.twitter.com/NbjbDzDMQO — Telugu Scribe (@TeluguScribe) March 10, 2025
ಪೋಷಕರು ತೆಲಂಗಾಣದ ಉತ್ಕೂರ್ ಎಂಬ ಸ್ಥಳದಲ್ಲಿ ನಡೆದ ಕಾರ್ಯಕ್ರಮ ಒಂದಕ್ಕೆ 9 ತಿಂಗಳ ರುದ್ರ ಅಯಾನ್ ಎಂಬ ಮಗುವನ್ನು ಕರೆದುಕೊಂಡು ಹೋಗಿದ್ದರು. ಆಗ ಮಗು ಅಲ್ಲಿ ಇಟ್ಟಿದ್ದ ಕೂಲ್ ಡ್ರಿಂಕ್ಸ್ ಬಾಟಲಿಯ ಕ್ಯಾಪನ್ನು ನುಂಗಿದೆ. ಈ ವಿಷಯ ಪೋಷಕರು ತಿಳಿಯುತ್ತಿದ್ದಂತೆ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಗು ಪ್ರಾಣ ಕಳೆದುಕೊಂಡಿದೆ ಎನ್ನಲಾಗಿದೆ.
SUMMARY | A 9-month-old baby died after swallowing the lid of a cool drink while playing in Hyderabad
KEYWORDS | cool drink cap, 9 month old baby, died, Hyderabad,