SHIVAMOGGA | MALENADUTODAY NEWS | Apr 24, 2024
ಶಿವಮೊಗ್ಗ ಲೋಕಾಯುಕ್ತ ಪೊಲೀಸರು ಕೆಲವೇ ದಿನಗಳ ಅಂತರದಲ್ಲಿ ಮತ್ತೊಂದು ಟ್ರ್ಯಾಪ್ ನಡೆಸಿದ್ದಾರೆ. ಇದೀಗ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯೊಬ್ಬರನ್ನ ಲಂಚ ತೆಗೆದುಕೊಳ್ಳುವಾಗಲೇ ಟ್ರ್ಯಾಪ್ ಮಾಡಿದೆ.
ಶಿವಮೊಗ್ಗ ಲೋಕಾಯುಕ್ತ
ನವುಲೆ ನಿವಾಸಿ ಒಬ್ಬರು ಚನ್ನಮುಂಬಾಪುರದಲ್ಲಿರುವ ತಮ್ಮ ಜಾಗಕ್ಕೆ ಖಾತೆ ಮಾಡಿಸಿಕೊಳ್ಳಲು ಅಬ್ಬಲಗೆರೆ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿದ್ದರು. 8 ಗುಂಟೆ ಜಾಗಕ್ಕೆ ಡಿಸಿ ಅಲಿನೇಷನ್ ಮಾಡಿಸಿ, ಸೂಡಾ ನಕ್ಷೆ ಹಾಗೂ ಅಪ್ರೂವಲ್ ಪಡೆದುಕೊಂಡು ಸ್ಕೆಚ್ ಸಮೇತ ಖಾತೆಗಾಗಿ ನವುಲೆ ನಿವಾಸಿ ಅರ್ಜಿ ಸಲ್ಲಿಸಿದ್ದರು. ಆರು ತಿಂಗಳ ಹಿಂದೆಯೇ ಖಾತೆಗೆ ಅರ್ಜಿ ಸಲ್ಲಿಸಿದ್ದರೂ ಸಹ ಅಧಿಕಾರಿ ಯೋಗೇಶ್ ಕೆಲಸ ಮಾಡಿಕೊಟ್ಟಿರಲಿಲ್ಲ. ಅಲ್ಲದೆ ಪದೇಪದೇ ಇದೇ ವಿಚಾರಕ್ಕೆ ಸತಾಯಿಸಿ ಲಂಚ ಕೇಳುತ್ತಿದ್ದರಂತೆ. ಈ ಹಿನ್ನೆಲೆಯಲ್ಲಿ ನೊಂದ ನಿವಾಸಿ ಶಿವಮೊಗ್ಗ ಲೋಕಾಯುಕ್ತಕ್ಕೆ ಕಂಪ್ಲೆಂಟ್ ಮಾಡಿದ್ದರು.
ಅವರ ದೂರು ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ದಿನಾಂಕ:24-04-2024 ರಂದು ಕಲಂ:7(ಎ)ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ ಕಾಯ್ದೆ-2018) ರ ಪ್ರಕಾರ ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ಕಛೇರಿಯಲ್ಲಿ ಪ್ರಕರಣ ದಾಖಲಿಸಿದ್ದರು. ಅದರಂತೆ ಟ್ರ್ಯಾಪ್‌ಗೆ ಸಿದ್ದವಾದ ಪೊಲೀಸರು ಆರೋಪಿ 15 ಸಾವಿರ ರೂಪಾಯಿ ಲಂಚ ಪಡೆಯುವ ಹೊತ್ತಿಗೆ ರೇಡ್ ಮಾಡಿದ್ದಾರೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಬ್ಬಲಗೆರೆ ಗ್ರೇಡ್ 2 ಕಾರ್ಯದರ್ಶಿ ಯೋಗೇಶ್‌ರನ್ನ ಬಂಧಿಸಿದ ಲೋಕಾಯುಕ್ತ ಪೊಲೀಸರು ಅವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com ![]() |
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com |