SHIVAMOGGA | MALENADUTODAY NEWS | ಮಲೆನಾಡು ಟುಡೆ Jan 1, 2025
ಸಾಮಾನ್ಯವಾಗಿ ಬೋರ್‌ವೆಲ್‌ನಲ್ಲಿ ಬಿದ್ದ ಮಕ್ಕಳನ್ನು ರಕ್ಷಣೆ ಮಾಡುವ ವಿಚಾರ ಆಗಾಗ ಸುದ್ದಿಯಾಗುತ್ತದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಕೋಣಂದೂರಿನಲ್ಲಿ ಬೋರ್‌ವೆಲ್‌ನೊಳಗೆ ಬಿದ್ದ ನಾಗರಹಾವನ್ನ ರಕ್ಷಣೆ ಮಾಡಲಾಗಿದೆ.

ಸುಮಾರು 540 ಅಡಿ ಆಳದ ಬೋರ್‌ವೆಲ್ ಪೈಪ್‌ಗೆ ಬಿದ್ದಿದ್ದ, ಮೂರು ಅಡಿ ಉದ್ದದ ನಾಗರಹಾವನ್ನು 10 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿರುವ ಬಗ್ಗೆ ವರದಿಯಾಗಿದೆ. ಇಲ್ಲಿನ ಪೇಟೆಯಲ್ಲಿ ಜನರಿರುವ ಜಾಗದಲ್ಲಿ ಹರಿದಾಡುತ್ತಾ ಬಂದ ಹಾವೊಂದು ಭಯಕ್ಕೆ ಅಲ್ಲಿಯೇ ಇದ್ದ ಬೋರ್‌ವೆಲ್ ಬಳಿಗೆ ಹೋಗಿದೆ. ಆನಂತರ ಕಣ್ಮರೆಯಾಗಿದೆ. ಇದಿರಂದ ಜನರಿಗೆ ಇನ್ನಷ್ಟು ಆತಂಕವಾಗಿದೆ. ಹೀಗಾಗಿ ಬೋರ್‌ವೆಲ್‌ಗೆ ಬಿದ್ದಿರುವ ಸಂಶಯ ವ್ಯಕ್ತಪಡಿಸಿ ಹಾವಿಗಾಗಿ ಹುಡುಕಾಟ ನಡೆಸಿದ್ದಾರೆ. ಕ್ಯಾಮರಾವೊಂದನ್ನ ಬೋರ್‌ವೆಲ್ ಒಳಗೆ ಇಳೆ ಬಿಟ್ಟು ನೋಡಿದ್ದಾರೆ. ಆಗ ಬೋರ್‌ವೆಲ್‌ನೊಳಗೆ ನಾಗರ ಹಾವು ಸಿಲುಕಿರುವುದು ಗೊತ್ತಾಗಿದೆ. ಅದನ್ನ ಮೇಲಕ್ಕೆ ಎತ್ತಲು ಸ್ಥಳೀಯರು ಪ್ರಯತ್ನಿಸಿದ್ದರು. ಆದರೆ ಪ್ರಯತ್ನ ಫಲ ಕೊಡಲಿಲ್ಲ.

ಹೀಗಾಗಿ ಅಂತಿಮವಾಗಿ ಸ್ಥಳೀಯರು ಅರಣ್ಯ ಇಲಾಖೆ ಮತ್ತು ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ(ARRS)ದ ನೆರವು ಕೇಳಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅಜಯ್ ಗಿರಿ ನೇತೃತ್ವದ ARRS ತಂಡ 10 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹಾವನ್ನ ಹಿಡಿದಿದೆ. ಮಲೆನಾಡು ಭಾಗದಲ್ಲಿ ನಡೆದ ಅಪರೂಪ ಹಾಗೂ ವಿಶೇಷವಾದ ಕಾರ್ಯಾಚರಣೆಯ ವಿಡಿಯೋವನ್ನು ಅಜಯ್ ಗಿರಿಯವರು ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಷೇರ್ ಮಾಡಿದ್ದು ನಡೆದ ಘಟನೆಯ ಮಾಹಿತಿಯನ್ನ ಸಹ ನೀಡಿದ್ದಾರೆ.
View this post on Instagram
SUMMARY | Cobra snake rescued from borewell in Konandur, Thirthahalli taluk, Shimoga district
KEY WORDS | Cobra snake rescued from borewell , Konandur, Thirthahalli taluk, Shimoga district