6 ವರುಷ ನೆಟ್ಟು ಬೆಳಸಿದ 400 ಅಡಿಕೆ ಮರಗಳನ್ನ ಕಡಿದು ಟ್ರಂಚ್‌ ಹೊಡೆದ ಅರಣ್ಯ ಇಲಾಖೆ | ನಡೆದಿದ್ದೇನು?

350 to 400 areca trees cut down, forest department, sagara,  kargal

6 ವರುಷ ನೆಟ್ಟು ಬೆಳಸಿದ 400 ಅಡಿಕೆ ಮರಗಳನ್ನ ಕಡಿದು ಟ್ರಂಚ್‌ ಹೊಡೆದ ಅರಣ್ಯ ಇಲಾಖೆ | ನಡೆದಿದ್ದೇನು?
350 to 400 areca trees cut down, forest department, sagara,  kargal

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 4, 2025 ‌‌ 

ಮಲೆನಾಡಿನಲ್ಲಿ ಮತ್ತೆ ಒತ್ತುವರಿ ತೆರವಿನ ಅಡಿಯಲ್ಲಿ ಕಾರ್ಯಾಚರಣೆ ಆರಂಭವಾಗಿದೆಯಾ? ಹೀಗೊಂದು ಪ್ರಶ್ನೆಗೆ ಪ್ರತಿಯಾಗಿ ಕಾರ್ಗಲ್‌ನಲ್ಲಿ ನಡೆದ ಅರಣ್ಯ ಇಲಾಖೆಯ ಕಾರ್ಯಾಚರಣೆಯೊಂದು ರೈತರಲ್ಲಿ ಆಕ್ರೋಶ ಮೂಡಿಸಿದೆ. ಕಾರ್ಗಲ್ ನ ರೈತ ಮಂಜುನಾಥ್ ಗೆ ಸೇರಿದ 350 ರಿಂದ 400 ಅಡಿಕೆ ಮರಗಳನ್ನು ಕಡಿದು ನಾಶಪಡಿಸಿದ್ದಾರೆ.

ಭೂ ಒತ್ತುವರಿ ನಿಷೇಧ ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದೆ. ಜೋಗ ಜಲಪಾತ ಪ್ರದೇಶದ ಸರ್ವೆ ನಂಬರ್‌ 1 ರಲ್ಲಿದ್ದ ಕೃಷಿಕ ಮಂಜುನಾಥ್‌ ಅವರಿಗೆ ಸೇರಿದ 350ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ನೆಲಸಮ ಮಾಡಿದೆ.

ಮಂಜುನಾಥ್‌ ರ ವಿರುದ್ಧ ಕೋರ್ಟ್‌ ತೀರ್ಪು ನೀಡಿದ್ದು , 1.20 ಎಕರೆ ಜಮೀನು ಹೊರತುಪಡಿಸಿ ಉಳಿದ ಒತ್ತುವರಿ ಭೂಮಿಯನ್ನು ವಶಪಡಿಸಿಕೊಳ್ಳಲು ಆದೇಶ ನೀಡಿತ್ತು. ಆದರೆ ಅರಣ್ಯ ಇಲಾಖೆ ಕೋರ್ಟ್‌ ಆದೇಶದ ಹೊರತಾಗಿ ಫಸಲಿಗೆ ಬಂದಿದ್ದ  6 ವರ್ಷ ಪ್ರಾಯದ ಅಡಿಕೆಯನ್ನು ನೆಲಸಮ ಮಾಡಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ

SUMMARY | 350 to 400 areca trees belonging to farmer Manjunath of Kargal have been cut down and destroyed.

KEY WORDS | 350 to 400 areca trees cut down, forest department, sagara,  kargal