SHIVAMOGGA | MALENADUTODAY NEWS | Aug 21, 2024 ಮಲೆನಾಡು ಟುಡೆ
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ Karnataka State Natural Disaster Monitoring Centre
ರಾಜ್ಯದಲ್ಲಿ ಕಳೆದ ಮೂರು ತಿಂಗಳಿನ ಮಳೆಯ ವಿವರಗಳ ನೀಡಿದೆ. ಅಂಕಿ ಅಂಶಗಳನ್ನು ಗಮನಿಸುವುದಾದರೆ,

ರಾಜ್ಯದಲ್ಲಿ KSNDMC ವರದಿ ಪ್ರಕಾರ, ರಾಜ್ಯದ ದಕ್ಷಿಣ ಒಳನಾಡಿನ ಹಾಗೂ ಉತ್ತರ ಒಳನಾಡು ಜಿಲ್ಲೆಗಳ ಹಲವೆಡೆ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆ ಮತ್ತು ಕೆಲವೆಡೆ ಅಧಿಕ ಮಳೆಯಾಗಿದ್ದು, ಇನ್ನೂಳಿದೆಡೆಗಳಲ್ಲಿ ಹಾಗೂ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ಚದುರಿದಂತೆ ಹಗುರ ಮಳೆಯಾಗಿರುವುದು ಕಂಡುಬಂದಿದೆ.
ರಾಜ್ಯದಲ್ಲಿ ಒಟ್ಟಾರೆ ದಿ.21-08-2024ರನ್ವಯ ಕಳೆದ 24 ಗಂಟೆಗಳಲ್ಲಿ 5.9 ಮಿ.ಮೀ ವಾಡಿಕೆ ಮಳೆಯಿದ್ದು, ವಾಸ್ತವಿಕ 6.7 ಮಿ.ಮೀ ಮಳೆಯಾಗಿದ್ದು, ವಾಡಿಕೆಗೆ ಹೋಲಿಸಿದಾಗ ಶೇ.(+)14ರಷ್ಟು ವಾಡಿಕೆ ಮಳೆಯಾಗಿದೆ.
2024ರ ಮುಂಗಾರು ಮಳೆ
2024ರ ಮುಂಗಾರು ಜೂನ್ ಮಾಹೆಯಲ್ಲಿ, ವಾಡಿಕೆಯಾಗಿ 199 ಮಿ.ಮೀ ಮಳೆಯಾಗಬೇಕಿದ್ದು, ವಾಸ್ತವಿಕ 194 ಮಿ.ಮೀ ಮಳೆಯಾಗಿದ್ದು, ಶೇ.(-) 3ರಷ್ಟು ವಾಡಿಕೆ ಮಳೆಯಾಗಿದೆ.
2024ರ ಮುಂಗಾರು ಜುಲೈ ಮಾಹೆಯಲ್ಲಿ ವಾಡಿಕೆಯಾಗಿ 271 ಮಿ.ಮೀ ಮಳೆಯಾಗಬೇಕಿದ್ದು, ವಾಸ್ತವಿಕ 409 ಮಿ.ಮೀ ಮಳೆಯಾಗಿದ್ದು ಶೇ.51ರಷ್ಟು ಅಧಿಕ ಮಳೆಯಾಗಿದೆ.
2024ರ ಮುಂಗಾರು ಆಗಸ್ಟ್ 1 ರಿಂದ 21ನೇ ಆಗಸ್ಟ್ವರೆಗೆ, ವಾಡಿಕೆಯಾಗಿ 164 ಮಿ.ಮೀ ಮಳೆಯಾಗಬೇಕಿದ್ದು, ವಾಸ್ತವಿಕ 165 ಮಿ.ಮೀ ಮಳೆಯಾಗಿದ್ದು, ಶೇ.(+)1ರಷ್ಟು ವಾಡಿಕೆ ಮಳೆಯಾಗಿದೆ.
2024ರ ಮುಂಗಾರು (1ನೇ ಜೂನ್ ರಿಂದ 21ನೇ ಆಗಸ್ಟ್) ಅವಧಿಗೆ ವಾಡಿಕೆಯಾಗಿ 635 ಮಿ.ಮೀ ಮಳೆಯಾಗಬೇಕಿದ್ದು, ವಾಸ್ತವಿಕ 777 ಮಿ.ಮೀ ಮಳೆಯಾಗಿದ್ದು, ಶೇ.22ರಷ್ಟು ಅಧಿಕ ಮಳೆಯಾಗಿದೆ.
ಮಳೆ ಮುನ್ಸೂಚನೆ :
ದಿನಾಂಕ 21-08-2024ರನ್ವಯ, ಮುಂದಿನ 24 ಗಂಟೆಗಳ ಅವಧಿಯಲ್ಲಿ ರಾಜ್ಯದ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಅಲ್ಲಲ್ಲಿ ಅಧಿಕ ಮಳೆಯಾಗಲಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಅಲ್ಲಲ್ಲಿ ಚದುರಿದಂತೆ ವ್ಯಾಪಕವಾಗಿ ಹಗುರ ಮಳೆಯಾಗಲಿದ್ದು, ಕೆಲವೆಡೆ ಅಧಿಕ ಮಳೆಯಾಗುವ ಸಾಧ್ಯತೆಗಳಿದೆ.
ರಾಜ್ಯದ ಪ್ರಮುಖ ಜಲಾಶಯಗಳಲ್ಲಿನ ಸಂಗ್ರಹಣೆ
ರಾಜ್ಯದ ಎಲ್ಲಾ 14 ಪ್ರಮುಖ ಜಲಾಶಯಗಳಲ್ಲಿ ಒಟ್ಟಾರೆ, 803.62 ಟಿ.ಎಂ.ಸಿ ನೀರು ಸಂಗ್ರಹಣೆಯಾಗಿದೆ. ಜಲಾಶಯದ ಒಟ್ಟು ಸಾಮಾರ್ಥ್ಯದ ಶೇ.90ರಷ್ಟು ನೀರು ಸಂಗ್ರಹವಾಗಿದೆ. ವಿದ್ಯುತ್ ಉತ್ಪಾಧನೆ ಜಲಾಶಯಗಳಲ್ಲಿ ಶೇ.88ರಷ್ಟು, ಕಾವೇರಿ ಕಣಿವೆ 4 ಜಲಾಶಯಗಳಲ್ಲಿ ಶೇ.96ರಷ್ಟು, ಹಾಗೂ ಕೃಷ್ಣ ಕಣಿವೆ ವ್ಯಾಪ್ತಿ ಜಲಾಶಯಗಳಲ್ಲಿ ಶೇ.91ರಷ್ಟು ನೀರಿನ ಸಂಗ್ರಹಣೆಯಿದೆ.
ಮಲೆನಾಡು ಶಿವಮೊಗ್ಗದಲ್ಲಿ ಜೂನ್ ತಿಂಗಳಿನಲ್ಲಿ ವಾಡಿಕೆ ಮಳೆ 1678 ಎಂಎಂ ನಷ್ಟು ಮಳೆಯಾಗಬೇಕಿತ್ತು, ವಾಸ್ತವಿಕವಾಗಿ 1792 ರಷ್ಟು ಮಳೆಯಾಗಿದ್ದು ಶೇಕಡಾ 7 ರಷ್ಟು ಹೆಚ್ಚುವರಿ ಮಳೆಯಾಗಿದೆ.
ಜುಲೈ ತಿಂಗಳಿನಲ್ಲಿ 765 ಎಂಎಂ ವಾಡಿಕೆ ಮಳೆಯಾಗಬೇಕಿತ್ತು ಅಂತಿಮವಾಗಿ 1241 ಎಂಎಂ ವಾಸ್ತವವಾಗಿ ಮಳೆಯಾಗಿದೆ. ಶೇಕಡಾ 62 ರಷ್ಟು ಹೆಚ್ಚುವರಿ ಮಳೆಯಾಗಿದೆ.
ಇನ್ನೂ ಕಳೇದ ಆಗಸ್ಟ್ ಒಂದರಿಂದ ಇಲ್ಲಿವರೆಗೂ (ಆಗಸ್ಟ್ 21) 247 ಎಂಎಂ ಮಳೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಇನ್ನಷ್ಟು ಸುದ್ದಿಗಳು
-
ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ | ಒಂದೇ ಕುಟುಂಬದ ನಾಲ್ವರ ದುರಂತ ಅಂತ್ಯ
-
ಜೋಗ್‌ಪಾಲ್ಸ್ ಗೆ ಹೋಗುವಾಗ ಇರಲಿ ಎಚ್ಚರ | ಪ್ರಯಾಣಿಕನ ಮೇಲೆಯೇ ಹರಿಯಿತು ಬಸ್ | ನಡೆದಿದ್ದೇನು?
-
Shikaripura | ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಮನೆಗೆ ಮುತ್ತಿಗೆ ಹಾಕಲು ಯತ್ನ |
-
ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಿನ್ನೆಲೆಯಲ್ಲಿ | ಶಿವಮೊಗ್ಗ ಪೊಲೀಸ್ ಇಲಾಖೆಯಿಂದ ಏಳು ಪ್ರಮುಖ ಸೂಚನೆ
-
ಭದ್ರಾ ಭರ್ತಿ : ರೈತರ ಮೊಗದಲ್ಲಿ ಮಂದಹಾಸ | ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದ್ದೇನು?
-
ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ