VISL ಪುನರಾರಂಭ | 15 ಸಾವಿರ ಕೋಟಿಯ ಸುದ್ದಿ ಕೊಟ್ಟ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ |

Union Minister HD Kumaraswamy , 15,000 crore Plan to reopen VISL factory,   Bhadravati taluk of Shivamogga district

VISL ಪುನರಾರಂಭ | 15 ಸಾವಿರ ಕೋಟಿಯ ಸುದ್ದಿ ಕೊಟ್ಟ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ |
Union Minister HD Kumaraswamy , 15,000 crore Plan to reopen VISL factory,   Bhadravati taluk of Shivamogga district

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 23, 2024 ‌‌  

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಪ್ರತಿಷ್ಟೆಯಾಗಿರುವ VISL ಕಾರ್ಖಾನೆಯ ವಿಚಾರದಲ್ಲಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ದೊಡ್ಡ ಸುದ್ದಿಯೊಂದನ್ನ ನೀಡಿದ್ದಾರೆ. ಮಂಡ್ಯದಲ್ಲಿ ಮಾತನಾಡಿರುವ ಅವರು, 15000 ಕೋಟಿ ರುಪಾಯಿ ವೆಚ್ಚದಲ್ಲಿ ವಿಐಎಸ್‌ಎಲ್ ಪುನಶ್ಚತನಗೊಳಿಸುವ ವಿಚಾರವನ್ನು ತಿಳಿಸಿದ್ದಾರೆ. 

ಸ‌ರ್.ಎಂ.ವಿಶ್ವೇಶ್ವರಯ್ಯ ಅವರು ಭದ್ರಾವತಿಯಲ್ಲಿ ಸ್ಥಾಪಿಸಿರುವ ವಿಐಎಸ್ಎಲ್‌ ಕಾರ್ಖಾನೆಯನ್ನು15 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಪುನಶ್ಚತನಗೊಳಿಸುವುದಾಗಿ ತಿಳಿಸಿದ ಅವರು, ವಿಐಎಸ್‌ಎಲ್‌ ಕಾರ್ಖಾನೆಯನ್ನು ಪುನುರಾರಂಭಿಸುವುದಾಗಿ ಘೋಷಿಸಿದ್ದಾರೆ. 

ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡ್ತಾ ಈ ವಿಚಾರ ಪ್ರಸ್ತಾಪಿಸಿದ ಹೆಚ್‌ಡಿಕೆ ನಿರೋದ್ಯೋಗವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳುತ್ತಿರುವುದಾಗಿ ಹೇಳಿದ್ದಾರೆ. 

ಅಲ್ಲದೆ ರಾಜ್ಯ ಸರ್ಕಾರ ಸಹಕಾರ ನೀಡಿದರೆ ಮಂಡ್ಯ, ತುಮಕೂರು ಹಾಗೂ ಉತ್ತರಕರ್ನಾಟಕದ ಒಂದು ಜಿಲ್ಲೆಯಲ್ಲಿ ಕಾರ್ಖಾನೆ ಪ್ರಾರಂಭಿಸಿ ಯುವಕರಿಗೆ ಉದ್ಯೋಗ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

SUMMARY | Union Minister HD Kumaraswamy said that a plan worth Rs 15,000 crore has been made to reopen the VISL factory, which is located in Bhadravati taluk of Shivamogga district.

KEY WORDS | Union Minister HD Kumaraswamy , 15,000 crore Plan to reopen VISL factory,   Bhadravati taluk of Shivamogga district