ದುರ್ಗಾಂಬ ಬಸ್‌ ಆಕ್ಸಿಡೆಂಟ್‌ 15 ಜನರಿಗೆ ಗಾಯ

accident took place between durgamba bus and lorry at Chikkajeni in Riponpet, injuring several passengers.

ದುರ್ಗಾಂಬ ಬಸ್‌ ಆಕ್ಸಿಡೆಂಟ್‌ 15 ಜನರಿಗೆ ಗಾಯ
durgamba bus

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 12, 2024 

ಹೊಸನಗರ | ರಿಪ್ಪನ್‌ ಪೇಟೆಯ ಚಿಕ್ಕಜೇನಿಯಲ್ಲಿ ದುರ್ಗಾಂಬಾ ಬಸ್‌ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬಸ್‌ ನಲ್ಲಿದ್ದ ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಹೊಸನಗರದಿಂದ ಭತ್ತ ಕಟಾವು ಯಂತ್ರವನ್ನು ಹೊತ್ತೊಯ್ಯುತ್ತಿದ್ದ ತಮಿಳುನಾಡು ರಿಜಿಸ್ಟ್ರೇಷನ್‌ ಇರುವ ಲಾರಿ ಹಾಗೂ ಶಿವಮೊಗ್ಗದಿಂದ ಕುಂದಾಪುರಕ್ಕೆ ತೆರಳುತ್ತಿದ್ದ ದುರ್ಗಾಂಬಾ ಬಸ್‌ ನಡುವೆ ಡಿಕ್ಕಿ ಯಾಗಿದೆ. 

ಆ ಬಳಿಕ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಬಸ್‌ ನಲ್ಲಿ ಒಟ್ಟು 20 ಜನರಿದ್ದು ಈ ಪೈಕಿ 15 ಜನರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಸ್ಥಳೀಯರು ಹಾಗೂ ಪೊಲೀಸರು ಗಾಯಾಳುಗಳನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸಿದ್ದಾರೆ. 

 

SUMMARY|  accident took place between durgamba bus and lorry at Chikkajeni in Riponpet, injuring several passengers.

 

KEY WORDS | 15 injured in Durgamba bus accident