15 ಸಾವಿರ ಲಂಚ ಪಡೆದಿದ್ದ ಅಧಿಕಾರಿಗೆ  30 ಸಾವಿರ ದಂಡ |  1 ವರೆ ವರ್ಷ ಜೈಲು ಶಿಕ್ಷೆ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 1, 2025

ಶಿವಮೊಗ್ಗ | 15 ಸಾವಿರ ಲಂಚ ಪಡೆಯುತ್ತಿದ್ದ ವೇಳೆ  ಲೋಕಾಯುಕ್ತ ದಾಳಿಗೆ ಒಳಗಾಗಿ ಆರೋಪ ಎದುರಿಸುತ್ತಿದ್ದ ಭದ್ರಾವತಿಯ ಭೂಮಾಪನಾ ಪರಿವೀಕ್ಷಕರಾಗಿದ್ದ ಟಿ.ಮಲ್ಲಿಕಾರ್ಜುನಯ್ಯ ಲಂಚ ಪಡೆದ ಆರೋಪ ಸಾಬೀತಾಗಿದೆ. ಈ ಹಿನ್ನಲೆ ಶಿವಮೊಗ್ಗ ನ್ಯಾಯಾಲಯ ಅವರಿಗೆ ಒಂದೂವರೆ ವರ್ಷ ಕಾರಾಗೃಹ ಶಿಕ್ಷೆ ಹಾಗೂ 30 ಸಾವಿರ ರೂ.ದಂಡ ವಿಧಿಸಿ ಆದೇಶ ಹೊರಡಿಸಿದೆ.

- Advertisement -

Malenadu Today

ಭದ್ರಾವತಿ ತಾಲೂಕು ಎಡಿಎಲ್​​ಆರ್ ಕಚೇರಿಯ ಭೂಮಾಪನಾ ಪರಿವೀಕ್ಷಕ ಟಿ.ಮಲ್ಲಿಕಾರ್ಜುನಯ್ಯರವರು ಬಸವರಾಜಪ್ಪ ಎಂಬವರ  ಜಮೀನು ಪೋಡಿ  ದುರಸ್ತಿ ಮಾಡಿ‌ಕೊಡಲು 30 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನಲೆ ಬಸವರಾಜಪ್ಪ  ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ  ದೂರು ನೀಡಿದ್ದರು. 2013ರಲ್ಲಿ ಬಸವರಾಜಪ್ಪ ಅವರಿಂದ 15 ಸಾವಿರ ರೂ. ಲಂಚ ಪಡೆಯುವಾಗ ಭೂಮಾಪನಾ ಪರಿವೀಕ್ಷಕ ಮಲ್ಲಿಕಾರ್ಜುನಯ್ಯ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದರು. ರೆಡ್ ಹ್ಯಾಂಡ್ ಆಗಿ ಹಣದ ಜೊತೆ ಅಧಿಕಾರಿಯನ್ನು ಲೋಕಾಯುಕ್ತ ಪಒಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಪ್ರಕರಣದ ತನಿಖೆ ಕೈಗೊಂಡು ಆರೋಪಿ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಮರುಳಸಿದ್ದಾರಾಧ್ಯ ಹೆಚ್.ಜೆ. ಅವರು ಟಿ.ಮಲ್ಲಿಕಾರ್ಜುನಯ್ಯ ಲಂಚ ಪಡೆದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ದಂಡಸಹಿತ ಕಾರಾಗೃಹ ಶಿಕ್ಷೆ ವಿಧಿಸಿದೆ.

SUMMARY | The charge of bribery has been proved. A Shivamogga court sentenced him to one-and-a-half years in jail and imposed a fine of Rs 30,000 on him.

KEYWORDS |  Shivamogga court, Surveyor, Bribery, 

Share This Article
Leave a Comment

Leave a Reply

Your email address will not be published. Required fields are marked *