SHIVAMOGGA | MALENADUTODAY NEWS | ಮಲೆನಾಡು ಟುಡೆ Dec 30, 2024
ಶಿವಮೊಗ್ಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಾಳೆ ಅಂದರೆ ಡಿಸೆಂಬರ್ 30 ರಂದು ಎಳ್ಳಾಮಾವಾಸ್ಯೆ ಜಾತ್ರೆ ಅಂಗವಾಗಿ ಶಕ್ತಿದೇವತೆಗಳ ಸಮಾಗಮವನ್ನು ಆಯೋಜಿಸಲಾಗಿದೆ. ಅದರ ವಿವರ ಹೀಗಿದೆ.
ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶ್ವ ಹಿಂದೂ ಪರಿಷತ್, ಶಕ್ತಿ ದೇವತೆಗಳ ಸಮಾಗಮ ಸಮಿತಿಯಿಂದ ಡಿಸೆಂಬರ್ 30ರಂದು ಎಳ್ಳಮಾವಾಸ್ಯೆ ಅಂಗವಾಗಿ 26ನೇ ವರ್ಷದ ಶಕ್ತಿ ದೇವತೆಗಳ ಸಮಾಗಮ ನಡೆಯಲಿದೆ.
ನಾಳೆ ಮಧ್ಯಾಹ್ನ 12ಕ್ಕೆ ನಗರದ ಶಕ್ತಿ ದೇವತೆಗಳ ಉತ್ಸವ ಮೂರ್ತಿಗಳು ದೇವಾಲಯಕ್ಕೆ ಆಗಮಿಸಲಿದೆ, ಬಳಿಕ ಭಕ್ತಾದಿಗಳಿಗೆ ಮಹಾ ಪ್ರಸಾದ ವಿನಿಯೋಗ ನಡೆಯಲಿದ್ದು ಸಂಜೆ 4.30ರಿಂದ 6.30ರ ವರೆಗೆ ಭಜನೆ, ಭಕ್ತಾದಿಗಳಿಂದ ಮಡಿಲಕ್ಕಿ ಸಮರ್ಪಣೆ ಕಾರ್ಯಕ್ರಮ ಇರಲಿದೆ. ಬಳಿಕ ಸಂಜೆ 6.30ಕ್ಕೆ ಮಹಾಮಂಗಳಾರತಿ ನಡೆಯಲಿದೆ. ದೀಪಾರಾಧನೆ ನಂತರ ಉತ್ಸವ ಮೂರ್ತಿಗಳಿಗೆ ಬಿಳ್ಕೊಡುಗೆ ನೀಡಲಾಗುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಮಿತಿ ಪ್ರಕಟಣೆ ತಿಳಿಸಿದೆ.
SUMMARY | A gathering of Shakti Deities will be held at the Kote Sri Seetharamanjaneya Swamy Temple by the Vishwa Hindu Parishad, Shakti Deities Gathering Committee.
KEY WORDS | gathering of Shakti Deitie, Kote Sri Seetharamanjaneya Swamy Temple, Vishwa Hindu Parishad, Shakti Deities Gathering Committee.
