ರಾತ್ರಿ ಹೊತ್ತಲ್ಲಿ ಜಮೀನು, ತೋಟಕ್ಕೆ ನೀರು ಬಿಡಲು ಹೋಗುವಾಗ ಇರಲಿ ಜಾಗೃತೆ | ಎಚ್ಚರ ತಪ್ಪಿದರೆ ಸಾವು ಸಂಭವಿಸಬಹುದು

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 14, 2025 ‌‌ 

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಅತ್ತಿಗುಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಭದ್ರಾ ನಾಲೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಜಿ.ವೆಂಕಟೇಶ್ (52) ಮೃತರು

ಕಳೆದ ಶನಿವಾರದ ರಾತ್ರಿ ಈ ಘಟನೆ ನಡೆದಿದೆ. ಬಾರಂದೂರು ನಿವಾಸಿಯಾದ ಇವರು ಜಮೀನಿಗೆ ನೀರು ಹಾಯಿಸಲು ರಾತ್ರಿ ಬೈಕಿನಲ್ಲಿ ಮನೆಯಿಂದ ತೆರಳಿದ್ದರು. 

ಜಮೀನಿನ ಬಳಿ ಹರಿಯುತ್ತಿರುವ ಗೊಂದಿ ನಾಲೆ ಬಳಿ ಬೈಕ್ ನಿಲ್ಲಿಸಿ ನಾಲೆಗೆ ಅಡ್ಡಲಾಗಿ ಇಟ್ಟಿರುವ ತುಂಡುಗಳ ಮೇಲೆ ನಡೆದು ಸಾಗುವಾಗ ನಿಯಂತ್ರಣ ತಪ್ಪಿ ನಾಲೆಗೆ ಬಿದ್ದಿದ್ದಾರೆ. 

ಭಾನುವಾರ ಬೆಳಗ್ಗೆ ಈ ವಿಚಾರ ಗೊತ್ತಾಗಿದೆ.  ಅವರ ಮೃತದೇಹ ಎರೇಹಳ್ಳಿ ಗ್ರಾಮದ ಬಳಿ ಶವ ಪತ್ತೆಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶವ ಹೊರತೆಗೆದಿದ್ದಾರೆ. ವೆಂಕಟೇಶ್ ಅವರು ಬಾರಂದೂರು ಪ್ರಭಾರ ಪಿಡಿಒ ಆಗಿಯೂ ಕಾರ್ಯನಿರ್ವಹಿಸುತ್ತಿದ್ದರು. 

SUMMARY |  Shimoga district Bhadravati taluk Attigunda village panchayat development officer died after slipping in Bhadra canal

KEY WORDS |‌ Shimoga district, Bhadravati taluk , Attigunda village, panchayat development officer ,  Bhadra canal

Share This Article