SHIVAMOGGA | MALENADUTODAY NEWS | ಮಲೆನಾಡು ಟುಡೆ Dec 23, 2024
ಬೆಂಗಳೂರಿನ ಸಿಸಿಬಿ ಪೊಲೀಸರು ಹೊರರಾಜ್ಯದಿಂದ ಯುವತಿಯರನ್ನ ಕರೆಯಿಸಿ ವೇಶ್ಯಾವಾಟಿಕೆ ನಡೆಸ್ತಿದ್ದ ಆರೋಪಿಯನ್ನ ಬಂಧಿಸಿದ್ದಾರೆ ಬೆಂಗಳೂರು CCB Police ನಡೆಸಿದ ಕಾರ್ಯಾಚರಣೆಯಲ್ಲಿ ಅನಿಲ್ ಕುಮಾರ್ ರೆಡ್ಡಿ ಎಂಬಾತನನ್ನ ಬಂಧಿಸಲಾಗಿದೆ. ಮಾನವ ಕಳ್ಳಸಾಗಣೆ ಸೇರಿ ಹಲವು ಪ್ರಕರಣ , ಗೂಂಡಾಕಾಯ್ದೆ ಅಡಿ ಈತನನ್ನ ಬಂಧಿಸಲಾಗಿದ್ದು, ಸದ್ಯ ಬಳ್ಳಾರಿ ಜೈಲಿಗೆ (Bellary Jail) ಶಿಫ್ಟ್ ಮಾಡಲಾಗಿದೆ.
ಮತ್ತೊಂದು ಘಟನೆಯಲ್ಲಿ ಮಂಡ್ಯದ ಕ್ಯಾತನಹಳ್ಳಿ ಬಳಿ ಮನೆಯೊಂದಕ್ಕೆ ನುಗ್ಗಿದ ವ್ಯಕ್ತಿಯೊಬ್ಬ ಮರ ಕತ್ತರಿಸುವ ಮಷಿನ್ ಮೂಲಕ ಮನೆಯಲ್ಲಿದ್ದ ವ್ಯಕ್ತಿಯನ್ನ ಕತ್ತರಿಸಿ ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ನಿವಾಸಿ ಇಬ್ರಾಹಿಂ ಎಂಬಾತ ಈ ಕೃತ್ಯವೆಸಗಿದ್ದು, ಪೊಲೀಸರು ಈತನನ್ನ ಬಂಧಿಸಿದ್ದಾರೆ. ಇಲ್ಲಿನ ಮನೆಯೊಂದಕ್ಕೆ ಎಂಟ್ರಿಕೊಟ್ಟ ಆರೋಪಿ ಮೊದಲು ಮನೆಯಲ್ಲಿದ್ದ ಮಹಿಳೆಯ ಮೇಲೆ ಮಷಿನ್‌ನಿಂದ ಹಲ್ಲೆ ಮಾಡಿದ್ದಾನೆ. ಆ ಬಳಿಕ ಮನೆಯೊಳಗೆ ತೆರಳಿ ರಮೇಶ್ ಎಂಬವರನ್ನ ಹತ್ಯೆ ಮಾಡಿದ್ದ. ಈ ವೇಳೆ ಗಾಯಗೊಂಡ ಮಹಿಳೆಯ ಮನೆಯ ಡೋರ್ ಲಾಕ್ ಮಾಡಿ ಕೂಗಿಕೊಂಡಿದ್ದಾಳೆ. ಅಕ್ಕಪಕ್ಕದವರು ಸ್ಥಳಕ್ಕೆ ಬಂದು ಪೊಲೀಸರನ್ನ ಕರೆಸಿಕೊಂಡು ಆರೋಪಿಯನ್ನ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡು ಸಾಲ ಮಾಡಿದ್ದ ಆರೋಪಿ ಸಾಲ ತೀರಿಸಲು ಈ ಕೃತ್ಯವೆಸಗಿದ್ದ ಎನ್ನಲಾಗುತ್ತಿದೆ.
ಇನ್ನು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಟೌನ್‌ನಲ್ಲಿ ಉಪನ್ಯಾಸಕರೊಬ್ಬರು ಪೋಷಕರೊಬ್ಬರ ನಡುವಿನ ಹೊಡೆದಾಟ ನಡೆದಿದೆ ಎನ್ನಲಾಗಿದ್ದು, ಈ ಸಂಬಂಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಹ ದಾಖಲಾಗಿದೆ. ಘಟನೆಯ ವಿವರ ನೋಡುವುದಾದರೆ, ವಿದ್ಯಾರ್ಥಿಯ ಹಾಜರಾತಿ ವಿಚಾರಕ್ಕೆ ಉಪನ್ಯಾಸಕರು ಹಾಗೂ ಪೋಷಕರ ನಡುವೆ ವ್ಯಾಜ್ಯ ಶುರುವಾಗಿದ್ದು, ಈ ವೇಳೆ ಅವರು ಹೊಡೆದರು ಎಂದು ಉಪನ್ಯಾಸಕರು, ಇವರು ಹೊಡೆದರು ಎಂದು ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ದೂರು ಹಾಗೂ ಪ್ರತಿದೂರು ಎರಡು ಸಹ ದಾಖಲಾಗಿದೆ.
SUMMARY | Murder in a house in Kyatanahalli, Mandya. Murder with a wood-cutting machine, CCB police operation in Bangalore, Mandya incident, Srirangapatna, Sagar lecturer assault case
KEY WORDS | Murder in a house in Kyatanahalli, Mandya, Murder with a wood-cutting machine, CCB police operation in Bangalore, Mandya incident, Srirangapatna, Sagar lecturer assault case