SHIVAMOGGA | MALENADUTODAY NEWS | ಮಲೆನಾಡು ಟುಡೆ Dec 28, 2024
ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೊಟ್ಟೆ ನೋವು ಕಾರಣಕ್ಕೆ ಇತ್ತೀಚೆಗೆಷ್ಟೆ ಮದುವೆಯಾದ ಯುವತಿ ಸಾವನ್ನಪ್ಪಿದ್ದಾಳೆ. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸ್ತಿದ್ದಾರೆ.
ಕಳೆದ ನವೆಂಬರ್ 24 ರಂದು ಇಲ್ಲಿನ ನಿವಾಸಿ ಬಿಂದು ಎಂಬಾಕೆಯ ಮದುವೆ ನಡೆದಿತ್ತು. ಆ ಬಳಿಕ ಗಂಡಿನ ಮನೆ ಹಾಗೂ ಹೆಣ್ಣಿನ ಮನೆಯಲ್ಲಿನ ವಿವಿಧ ಪೂಜೆಯಲ್ಲಿ ದಂಪತಿ ಪಾಲ್ಗೊಂಡಿದ್ದರು. ಈ ನಡುವೆ ಯುವತಿ ನೇಣಿಗೆ ಶರಣಾಗಿದ್ದಾಳೆ. ಮನೆಯವರ ಪ್ರಕಾರ, ಆಕೆಗೆ ಮೂರು ನಾಲ್ಕು ವರ್ಷದಿಂದಲೂ ತೀವ್ರ ಹೊಟ್ಟೆ ನೋವು ಬರುತ್ತಿತ್ತು ಎನ್ನಲಾಗಿದೆ. ಅದೆ ಕಾರಣಕ್ಕೆ ಆಕೆ ಸಾವಿಗೆ ಶರಣಾಗಿದ್ದಾಳೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ತರೀಕೆರೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
SUMMARY | young woman who had been married for a month committed suicide in Chikkamagaluru district.
KEY WORDS | A young woman committed suicide ,Chikkamagaluru district
