ತೀರ್ಥಹಳ್ಳಿಯಲ್ಲಿ ಶಂಕಿತ ಡೆಂಘಿಯ ಪ್ರಕರಣದ ಜೊತೆ, ಎರಡು KFD ಪಾಸಿಟಿವ್‌ ಕೇಸ್‌ ದಾಖಲು

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 31, 2025 ‌‌ 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕುನಲ್ಲಿ ಶಂಕಿತ ಡೆಂಘಿಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಬಗ್ಗೆ ವರದಿಯಾಗಿತ್ತು. ಇಲ್ಲಿನ ಕಟ್ಟಡ ಕಾರ್ಮಿಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಕಳೆದ ಬುಧವಾರ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಭಾರತಿಪುರ ಸಮೀಪದ ಸರುವಿನಮನೆ ಗ್ರಾಮದ ರಾಘವೇಂದ್ರ (42) ನಿಧನರಾದವರು. ಮೃತರು ಸುಮಾರು ಎಂಟು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ಜ್ವರ ಉಲ್ಬಣಗೊಂಡ ನಂತರವಷ್ಟೇ ಇಲ್ಲಿನ ಸರ್ಕಾರಿ ಜೆಸಿ ಆಸ್ಪತ್ರೆ ಗೆ ದಾಖಲಾಗಿದ್ದರು. ಪ್ಲೇಟ್‌ಲೆಟ್ ಕನಿಷ್ಠ ಸಂಖ್ಯೆಗೆ ಇಳಿಮುಖವಾದ ಹಿನ್ನೆಲೆಯಲ್ಲಿ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದರು

 

ಈ ಘಟನೆ  ಬೆನ್ನಲ್ಲೆ ತೀರ್ಥಹಳ್ಳಿಯಲ್ಲಿ ಮತ್ತೆರಡು ಶಂಕಿತ KFD ಪಾಸಿಟಿವ್‌ ಬಗ್ಗೆ ತಾಲೂಕಿನ ಕಟಗಾರು ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯ ಹೆದ್ದೂರಿನಲ್ಲಿ ಬುಧವಾರ ಇಬ್ಬರು ಕೂಲಿ ಕಾರ್ಮಿಕ ಮಹಿಳೆಯರಲ್ಲಿ ಕೆಎಫ್‌ಡಿ ಸೋಂಕು ತಗುಲಿರುವುದು ಧೃಡವಾಗಿದೆ. ಸದ್ಯ ಅವರುಗಳ ಆರೋಗ್ಯ ಸ್ಥಿರವಾಗಿದ್ದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ  ಜ್ವರದ ಕಾರಣಕ್ಕೆ ಒಳರೋಗಿಯಾಗಿ ಅಡ್ಮಿಟ್‌ ಆಗಿರುವ 15 ಮಂದಿಯ ರಕ್ತವನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜೆಸಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಗಣೇಶ್ ಭಟ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

 

SUMMARY  |  suspected  KFD  case  and suspected dengue case in Thirthahalli

KEY WORDS |   suspected  KFD  case , suspected dengue case in Thirthahalli

Share This Article