SHIVAMOGGA | MALENADUTODAY NEWS | ಮಲೆನಾಡು ಟುಡೆ Jan 1, 2025
ಶಿವಮೊಗ್ಗ ಹೊಸ ವರುಷವನ್ನು ಸಂತೋಷದಿಂದಲೇ ಸ್ವಾಗತಿಸಿದೆ. ಈ ನಡುವೆ ನಿನ್ನೆ ತಡರಾತ್ರಿ ಸಿದ್ದಯ್ಯ ರೋಡ್ ಸರ್ಕಲ್ ಬಳಿಯಲ್ಲಿ ಎಂಕೆಕೆ ರೋಡ್‌ನಲ್ಲಿ ಹೊಸ ವರುಷದ ಸಂತೋಷ ಸ್ವಲ್ಪ ಜಾಸ್ತಿಯಾಗಿ, ಕಾರೊಂದು ಪಲ್ಟಿಯಾಗಿದ್ದಷ್ಟೆ ಅಲ್ಲದೆ ಬೈಕ್ ಸವಾರನೊಬ್ಬನ ಸಾವಿಗೂ ಕಾರಣವಾಗಿದೆ.
ಏನಿದು ಘಟನೆ

ನಿನ್ನೆ ತಡರಾತ್ರಿ ಎಂಕೆಕೆ ರೋಡ್‌ನಲ್ಲಿ ಹೊಸ ವರುಷದ ಸಂಭ್ರಮದ ನಡುವೆ ಸಣ್ಣದೊಂದು ಕಿರಿಕ್ ನಡೆದಿದೆ. ಕಾರೊಂದರಲ್ಲಿ ಇಬ್ಬರು ಹುಡುಗಿಯರು ಹಾಗೂ ಓರ್ವ ಹುಡುಗ ಬರುತ್ತಿದ್ದಾಗ, ಅವರ ಕಾರಿಗೆ ಬೈಕ್ ಸವಾರನೊಬ್ಬ ಕಲ್ಲಿನಿಂದ ಹೊಡೆದ ಎಂಬುದು ಆರೋಪ. ಈ ಹಿನ್ನೆಲೆಯಲ್ಲಿ ಕಾರನ್ನ ಸ್ಪೀಡಾಗಿ ಚಾಲನೆ ಮಾಡುತ್ತಾ, ಬೈಕ್ ಚೇಸ್ ಮಾಡಿಕೊಂಡು ಕಾರು ಚಲಾಯಿಸುತ್ತಿದ್ದವ ಬಂದಿದ್ದಾನೆ. ಆದರೆ ಇರುವ ಐದುವರೆ ಅಡಿ ಅಗಲದ ರಸ್ತೆಯಲ್ಲಿ ಅಷ್ಟೊಂದು ಸ್ಫೀಡಾಗಿ ಬಂದರೆ ಪರಿಸ್ಥಿತಿ ಏನಾಗಬೇಡ. ಅದರಲ್ಲಿಯು ಗಾಯತ್ರಿ ಸ್ಕೂಲ್ ಬಳಿಯಲ್ಲಿ ರಾಕ್ಷಸ ಗಾತ್ರ ಹಂಪ್‌ವೊಂದಿದೆ. ಕಾರು ಚಾಲಕನಿಗೆ ಅದು ಗಮನಕ್ಕೆ ಬಂದಿಲ್ಲ. ಬಂದ ವೇಗದಲ್ಲಿಯೇ ಹಂಪ್ ಹಾರಿಸಿದ್ದಾನೆ. ಕಾರು ಗಾಳಿಯಲ್ಲಿ ಹಾರಿ ಬೈಕ್‌ಗೆ ಡಿಕ್ಕಿಯಾಗಿ ಉಲ್ಟಾ ಬಿದ್ದಿದೆ. ಪರಿಣಾಮ ಒಬ್ಬ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಇನ್ನೊಬ್ಬನ ಬೈಕ್‌ಗೂ ಡ್ಯಾಮೇಜ್ ಆಗಿದ್ದು ಆತನೂ ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೊಸವರುಷದ ನಡುವೆ ಇಂತವು ನಡೆಯುತ್ತವೆ ಎಂದೇ ಹೆಚ್ಚುವರಿ ಪೊಲೀಸರನ್ನ ನಿಯೋಜಿಸಲಾಗಿತ್ತು. ಆದಾಗ್ಯು ಘಟನೆಯೊಂದು ನಡೆದಿದೆ. ಕಾರಿನಲ್ಲಿದ್ದವರು ಓವರ್ ಸ್ಪೀಡಾಗಿ ಬರುವುದನ್ನ ಪೊಲೀಸರು ಸಹ ಗಮನಿಸಿದ್ದಾರೆ. ಅವರನ್ನ ನಿಯಂತ್ರಿಸುವಷ್ಟರಲ್ಲಿಯೇ ಅಪಘಾತ ಸಂಭವಿಸಿದೆ. ಮತ್ತೆ ಕೆಲವರು ಹೇಳುವ ಪ್ರಕಾರ ಕಾರಿನಲ್ಲಿದ್ದವರು ಯಾರ ಕಂಟ್ರೋಲ್‌ಗೂ ಸಿಗುತ್ತಿರಲಿಲ್ಲ. ಮೇಲಾಗಿ ಸ್ಥಳಿಯರು ಹೇಳುವಂತೆ ಜೀವಹಾನಿಯಾದರೂ ಕಾರಿನಲ್ಲಿದ್ದವರು ತಮ್ಮ ತಪ್ಪಿಲ್ಲ ಎಂದು ಸ್ಥಳೀಯರ ಜೊತೆಗೆ ವಾದಿಸಿದ್ದಾರೆ. ಈ ದೃಶ್ಯಗಳನ್ನ ಸ್ಥಳಿಯರು ಮೊಬೈಲ್ ಕ್ಯಾಮರಾಗಳಲ್ಲಿ ರೆಕಾರ್ಡ್ ಮಾಡಿದ್ದಾರೆ.
ಸದ್ಯ ವಿಡಿಯೋಗಳು ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ. ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುವ ಪ್ರಕ್ರಿಯೆಯಲ್ಲಿದ್ದಾರೆ. ಕಾರಿನಲ್ಲಿದ್ದವರು ಅಮಲಿನದ್ದರಾ? ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. ಆದರೆ ಏನೇ ಇದ್ದರೂ ಒಂದು ಜೀವ ಹಾನಿಯಾಗುವಂತದ್ದು ಏನಿತ್ತು ಎಂಬುದು ಪ್ರಶ್ನೆ.
SUMMARY | Fatal accident near H Siddaiah Road Circle, Shimoga
KEY WORDS | Fatal accident ,H Siddaiah Road Circle, Shimoga