ಹೈಕೋರ್ಟ್‌ನಲ್ಲಿ ಆರ್‌ಎಂ ಮಂಜುನಾಥ ಗೌಡರ ಮೇಲ್ಮನವಿ ಅರ್ಜಿ ವಜಾ!? ವಿಚಾರ ಏನು ಗೊತ್ತಾ!?

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 28, 2025 ‌‌ ‌‌

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್‌ಎಂ ಮಂಜುನಾಥ ಗೌಡರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಕರ್ನಾಟಕ ರಾಜ್ಯ ಹೈಕೋರ್ಟ್‌ ವಜಾಗೊಳಿಸಿದೆ. ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಮತ್ತು ಎಸ್. ರಾಚಯ್ಯರವರನ್ನ ಒಳಗೊಂಡು ಪೀಠ ಈ ಆದೇಶ ಹೊರಡಿಸಿದೆ. 

- Advertisement -

ಏನಿದು ಪ್ರಕರಣ?! 

ತಮ್ಮ ವಿರುದ್ಧದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಹೊರಡಿಸಿದ ಸಮನ್ಸ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಆರ್.ಎಂ. ಮಂಜುನಾಥ್ ಗೌಡ  ಯಮೇಲ್ಮನವಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ಇದೀಗ ವಜಾಗೊಳಿಸಲಾಗಿದೆ. 

 

ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಕಲಿ ಚಿನ್ನ ಅಡವಿಟ್ಟುಕೊಂಡು ಚಿನ್ನದ ಸಾಲಗಳನ್ನು ನೀಡಿದ ಆರೋಪದ ಅಡಿಯಲ್ಲಿ ದಾಖಲಾಗಿದ್ದ ಸಂಖ್ಯೆ 325/2014 ಅಡಿಯಲ್ಲಿ 63 ಕೋಟಿ ರೂಪಾಯಿಗಳ ದುರುಪಯೋಗದ ಆರೋಪದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಎಂಟ್ರಿಯಾಗಿತ್ತು. ಈ ಸಂಬಂಧ ತನಿಖೆಗಾಗಿ ಆರ್‌ಎಂ ಮಂಜುನಾಥ ಗೌಡರಿಗೆ ಸಮನ್ಸ್‌ ಜಾರಿ ಮಾಡಿತ್ತು. 

ಇದನ್ನು ಪ್ರಶ್ನಿಸಿ ಆರ್‌ಎಂ ಮಂಜುನಾಥ ಗೌಡರ ಪರ ವಕೀಲರು ಹೈಕೋರ್ಟ್‌ ಮೊರೆಹೋಗಿದ್ದರು, ಏಕಸದಸ್ಯ ಪೀಠದಲ್ಲಿ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಸದ್ಯ ಈ ಅರ್ಜಿ ಸಹ ವಜಾಗೊಂಡಿದೆ. 

Share This Article
Leave a Comment

Leave a Reply

Your email address will not be published. Required fields are marked *