ಹುಲಿಯ ಜಾಡುಹಿಡಿಯಲು ಹೊರಟ ರೂಪೇಶ್ ಶೆಟ್ಟಿ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 28, 2025

ಶಿವಮೊಗ್ಗ | ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ ಅಭಿನಯದ ಹಾಗೂ ಛಾಯನ್ ಶೆಟ್ಟಿ ನಿರ್ದೇಶನದ ಅಧಿಪತ್ರ ಸಿನಿಮಾದ ಟ್ರೈಲರ್‌ನ್ನು  ಶಿವಮೊಗ್ಗದ ಶುಭಂ ಹೋಟೆಲ್ ನಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತು. ಈ ಚಿತ್ರದ ಟ್ರೈಲರ್‌ನ್ನು  ಬಂಟರಯಾನೆ ನಾಡವರ ಸಂಘ ಶಿವಮೊಗ್ಗದ ಅಧ್ಯಕ್ಷರಾದ  ಸತೀಶ್ ಕುಮಾರ್ ಶೆಟ್ಟಿ ಬಿಡುಗಡೆ ಮಾಡಿದರು. 

- Advertisement -

ಹುಲಿ ಬೆನ್ನೇರಿದ ರೂಪೇಶ್ ಶೆಟ್ಟಿ ಟ್ರೈಲರ್‌ನಲ್ಲಿ  ಏನಿದೆ

ಟ್ರೈಲರ್ ಅನ್ನು ನೋಡಿದಾಗ ನಿರ್ದೇಶಕರು ಹೇಳಿದಂತೆ ಇದು ಪಕ್ಕ ಕರಾವಳಿ ಭಾಗದ ಮಣ್ಣಿನ ಕಥೆ ಎಂಬುದು ತಿಳಿಯುತ್ತದೆ. ಹೀರೋ ಆದ ರೂಪೇಶ್ ಶೆಟ್ಟಿ ಈ ಚಿತ್ರದಲ್ಲಿ ಖಡಕ್ ಪೋಲಿಸ್ ಅಧಿಕಾರಿ ಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಖಳನಾಯಕನ ಪಾತ್ರವನ್ನು ಹುಲಿಗೆ ಹೋಲಿಸಿದ್ದಾರೆ. ಈ ಹುಲಿ ಯಾವರೀತಿ ಜನರನ್ನು ಕೊಲ್ಲುತ್ತಿತ್ತು. ಜನರಿಗೆ ಹುಲಿಯಿಂದ ಆಗುತ್ತಿದ್ದ ತೊಂದರೆಯೇನು.ಅದಕ್ಕೆ ಕಾರಣವೇನು  ಆ ಹುಲಿಯನ್ನು ರೂಪೇಶ್ ಶೆಟ್ಟಿ ಯಾವ ರೀತಿ ಬೇಟೆ ಯಾಡುತ್ತಾರೆ ಎಂಬುದರ ಸಣ್ಣ ಝಲಕ್ ಟ್ರೇಲರ್ ನಲ್ಲಿದೆ. ಇದರ ನಡುವೆ ದೈವದ ತರಹ ವೇಷ ಧರಿಸಿದ್ದ ವ್ಯಕ್ತಿಯಿದ್ದು ಆತನೇ ಮುಖ್ಯ ಖಳನಾಯಕನ ಎಂಬುವ ಅನುಮಾನ ಎಲ್ಲರಲ್ಲೂ ಮೂಡುತ್ತದೆ. ಇದರ ನಡುವೆ ನಿರೂಪಕಿ ಜಾನ್ಹವಿ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕಿ ನಟಿಯಾಗಿ ನಟಿಸುತ್ತಿದ್ದು, ಅವರ ಪಾತ್ರವೂ ಸಹ ಬಹಳ ನೈಜತೆಯಿಂದ ಮೂಡಿಬಂದಿದೆ. ಈ ಚಿತ್ರದಲ್ಲಿ ನಾಯಕಿಯ ಪಾತ್ರ ಬಹಳ ಪ್ರಭಾವವನ್ನು ಬಿರುತ್ತದೆ. ಹಾಗೆಯೇ ಆವರ ಪಾತ್ರ ಎಲ್ಲರ ಮನಸ್ಸಿನಲ್ಲಿ ಉಳಿಯುತ್ತದೆ ಎಂಬುದು ರೂಪೇಶ್ ಶೆಟ್ಟಿ ಯವರ ಅಭಿಪ್ರಾಯ. ಟ್ರೇಲರ್ ನಲ್ಲಿ ಗಮನಿಸಿದಾಗ ಹಿನ್ನೆಲೆ ಸಂಗೀತ ಹಾಗು ಪ್ರೊಡಕ್ಷನ್ ವ್ಯಾಲ್ಯೂ ಹೆಚ್ಚು ರಿಚ್ ಆಗಿ ಕಾಣುತ್ತಿದೆ.  ಈ ಚಿತ್ರಕ್ಕೆ ಸಂಗೀತವನ್ನು ಶ್ರೀಹರಿ ಶ್ರೇಷ್ಠಿ ಸಂಯೋಜಿಸಿದ್ದು, ಚಿತ್ರಕ್ಕೆ ಬಂಡವಾಳವನ್ನು ದಿವ್ಯ ನಾರಾಯಣ್ ಲಕ್ಷ್ಮಿಗೌಡ ಕುಲದೀಪ್ ರಾಘವ್ ಹೂಡಿದ್ದಾರೆ.

ಒಟ್ಟಾರೆಯಾಗಿ 3 ನಿಮಿಷ ಇರುವ ಈ ಟ್ರೈಲರ್ ನಲ್ಲಿ ಬಹುದೊಡ್ಡ ತಾರಾಬಳಗವಿದೆ. ಕಾಂತಾರ ಖ್ಯಾತಿಯ ಪ್ರಕಾಶ್ ತುಮಿನಾಡು, ದೀಪಕ್ ರೈ ಸೇರಿದಂತೆ ಆನೇಕ ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.  ಈ ಚಿತ್ರದ ಸಮಯ 2ಗಂಟೆ 30 ನಿಮಿಷವಿದ್ದು, ಈ  ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಕಾಮಿಡಿಯೊಂದಿಗೆ ಕೂಡಿದೆ. ಹಾಗೆಯೇ ಕಥೆಯೇ ಈ ಚಿತ್ರದ ಹೀರೋ ಎಂಬುದು ನಿರ್ದೇಶಕ ಛಾಯನ್ ಶೆಟ್ಟಿಯವರ ಅಭಿಪ್ರಾಯ. ಈ ಚಿತ್ರ ಇದೆ ಫೆಬ್ರವರಿ 07 ರಂದು ರಾಜ್ಯದಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ.

SUMMARY |  The trailer of Rockstar Rupesh Shetty starrer Adhipatra, directed by Chayan Shetty, was released today at Shubham Hotel in Shivamogga

KEYWORDS | Rockstar, Rupesh Shetty, Adhipatra,  trailer, Shivamogga,

Share This Article