SHIVAMOGGA | MALENADUTODAY NEWS | Aug 13, 2024 ಮಲೆನಾಡು ಟುಡೆ
ಹಳೆಯ ಶಿವಮೊಗ್ಗದ ಒ ಟಿ ರಸ್ತೆಯಲ್ಲಿರುವ ವಿಜಯ ಗ್ಯಾರೇಜ್ ಸಮೀಪದ ಮನೆಯೊಂದರಲ್ಲಿ ಒಂದೆ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಈ ಪೈಕಿ 22 ವರ್ಷದ ಯುವಕ ದರ್ಶನ್ ಸಾವು ಸ್ಥಳೀಯರ ಮನಕಲಕುತ್ತಿದೆ.
ಇದನ್ನೂ ಸಹ ಓದಿ BREAKING NEWS | ಹಳೆಯ ಶಿವಮೊಗ್ಗದಲ್ಲಿ ಒಂದೆ ಕುಟುಂಬದ ಮೂವರು ಆತ್ಮಹತ್ಯೆ ? ತಾಯಿ, ತಮ್ಮ , ಮಗ ಸಾವು

ನಡೆದಿದ್ದೇನು?
ತಾಯಿ ಭುವನೇಶ್ವರಿ, ತಮ್ಮಮೋಹನ್ ಹಾಗೂ ಮಗ ದರ್ಶನ್ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಭುವನೇಶ್ವರಿ ಕುಟುಂಬದ ಜವಾಬ್ದಾರಿ ಹೊತ್ತಿದ್ದರು. ದರ್ಶನ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದ ಯುವಕ ತನ್ನದೇ ಸ್ನೇಹ ಬಳಗ ಹೊಂದಿದ್ದ. ಈಗಿನ ಕಾಲದ ಟ್ರೆಂಡ್‌ಗೆ ತಕ್ಕಂತ ತನ್ನನ್ನ ರೂಪಿಸಿಕೊಂಡಿದ್ದ ಯುವಕ ಸ್ಥಳೀಯವಾಗಿ ಪರಿಚಯಸ್ಥನಾಗಿದ್ದ. ತಾಯಿ ಹಾಗೂ ಮಗ ಭಾನುವಾರ ಕೆಲಸಕ್ಕೆ ಹೋಗಿದ್ದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆ ಬಳಿಕ ಮನೆಯಲ್ಲಿ ಏನು ನಡೆಯಿತು ಎಂಬುದು ಸ್ಪಷ್ಟವಾಗಿಲ್ಲ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ನಡೆದ ಘಟನೆಯ ವಿಷಯ ತಿಳಿಯುತ್ತಲೇ ಸೀಗೆಹಟ್ಟಿ, ಕ್ಲಾರ್ಕ್‌ಪೇಟೆ, ಎನ್‌ಟಿ ರೋಡ್ ಸೇರಿದಂತೆ ಹಲವರು ಸ್ಥಳಕ್ಕೆ ದೌಡಾಯಿಸಿ ಏನಾಯ್ತು ಎಂದು ವಿಚಾರಿಸಿದ್ದಾರೆ. ವಿಷಯ ಹೊರಬಿದ್ದ ಕೆಲವೇ ಹೊತ್ತಿನಲ್ಲಿ ಸ್ಥಳದಲ್ಲಿ ಜನರು ಜಮಾಯಿಸಿದ್ದರು. ದೊಡ್ಡಪೇಟೆ ಪೊಲೀಸರು ದೌಡಾಯಿಸಿ ಜನರನ್ನ ಘಟನಾ ಸ್ಥಳದಿಂದ ದೂರವಿರಿಸಿದ್ದಾರೆ. ಆ ಬಳಿಕ ಸ್ಥಳ ಮಹಜರ್ ನಡೆಸಿ ಮೃತದೇಹಗಳನ್ನ ಮೆಗ್ಗಾನ್‌ಗೆ ಶಿಫ್ಟ್ ಮಾಡಿಸಿದ್ದಾರೆ.
ಮೂವರ ನಡುವೆ ಏನಾಯ್ತು ಎಂಬುದು ಸ್ಪಷ್ಟವಾಗಿಲ್ಲವಾದರೂ ಸಂಬಂಧಿಕರು ಕುಟುಂಬಸ್ಥರು ಸಾಲ ಮಾಡಿಕೊಂಡಿದ್ದರು, ಅದನ್ನ ಕಟ್ಟುತ್ತಿದ್ದರು ಎನ್ನುತ್ತಿದ್ದಾರೆ. ಇನ್ನೂ ದರ್ಶನ್ ವಿಚಾರದ ಬಗ್ಗೆಯು ಮಾತನಾಡಿದ್ದಾರೆ.ಬದುಕಿ ಬಾಳ ಬೇಕಾದವನು ಹೀಗೆ ಸಣ್ಣ ವಯಸ್ಸಿನಲ್ಲಿ ಸಾವನ್ನಪ್ಪಿರುವುದು ಸಂಬಂಧಿಕರಲ್ಲಿ ಆಘಾತ ಮೂಡಿಸಿದೆ.