SHIVAMOGGA | MALENADUTODAY NEWS | ಮಲೆನಾಡು ಟುಡೆ Dec 5, 2024
ಸಾಗರದಿಂದ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ನೂತನ ಕೆಎಸ್ಆರ್‌ಟಿಸಿ ರಾಜಹಂಸ ಬಸ್ (Rajahamsa Bus) ಸಂಚಾರ ಪ್ರಾರಂಭಿಸಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ನೂತನ ಬಸ್‌ಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆ ಹಾಗೂ ಎನಾಪೋಯಾ ಆಸ್ಪತ್ರೆಗೆ ಸಾಗರದಿಂದ ಹೆಚ್ಚಿನ ಜನರು ಹೋಗುತ್ತಿದ್ದಾರೆ.
ಮಣಿಪಾಲಕ್ಕೆ ಹೋಗಿ ಅಲ್ಲಿಂದ ಮಂಗಳೂರಿಗೆ ಹೋಗಬೇಕಾಗಿತ್ತು. ಹೀಗಾಗಿ ರೋಗಿಗಳಿಗೆ ಸಮಸ್ಯೆ ಆಗುತ್ತಿರುವುದು ಗಮನಕ್ಕೆ ಬಂದಿತ್ತು. ಈ ನಿಟ್ಟಿನಲ್ಲಿ ಸಾಗರದಿಂದ ನೇರವಾಗಿ ವೆನ್‌ಲಾಕ್ ಆಸ್ಪತ್ರೆಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು, ಕಾಂಗ್ರೆಸ್ ಪ್ರಮುಖರಾದ ಸುರೇಶ್ ಬಾಬು, ಕಲಸೆ ಚಂದ್ರಪ್ಪ, ಗಣಪತಿ ಮಂಡಗಳ ಇನ್ನಿತರರು ಹಾಜರಿದ್ದರು.
ಬಸ್ ಸಂಚಾರದ ಸಮಯ
ನೂತನ ರಾಜಹಂಸ ಬಸ್ ಸಾಗರದಿಂದ ರಾತ್ರಿ 10.10ಕ್ಕೆ ಹೊರಡಲಿದೆ. ಬೆಳಗಿನ ಜಾವ 4ಕ್ಕೆ ಮಂಗಳೂರು, 4.45ಕ್ಕೆ ಯನಪೋಯ ಆಸ್ಪತ್ರೆ ತಲುಪುತ್ತದೆ. ಮಂಗಳೂರಿನಿಂದ ರಾತ್ರಿ 10.10ಕ್ಕೆ ಹೊರಡುವ ಬಸ್ ಬೆಳಗಿನ ಜಾವ 4.30ಕ್ಕೆ ಸಾಗರ ತಲುಪುತ್ತದೆ.

SUMMARY | The new KSRTC Rajahamsa Bus has started plying from Sagar to Wenlock Hospital in Mangaluru.
KEY WORDS | KSRTC Rajahamsa Bus , Sagar to Wenlock Hospital Mangaluru