SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 18, 2025
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ಸಂಶೋಧನಾ ಪ್ರಯೋಗಶಾಲೆಯ ಬಾಗಿಲು ಮುರಿದು ಸರಿ ಸುಮಾರು 50 ಸಾವಿರಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ಕಳ್ಳರು ಕಳ್ಳತನ ಮಾಡಿದ್ದಾರೆ. ಈ ಹಿನ್ನಲೆ ನಗರದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಫ್ಐಆರ್ ನಲ್ಲಿ ಏನಿದೆ.
ಮಾರ್ಚ್ 11 ರಂದು ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರು ವಿದ್ಯಾರ್ಥಿಗಳ ರಸಾಯನ ಶಾಸ್ತ್ರ ಸಂಶೋಧನಾ ಪ್ರಯೋಗ ಶಾಲೆಯಲ್ಲಿ ಬೆಳಗ್ಗೆ ವಿದ್ಯಾರ್ಥಿಗಳಿಗೆ ಸಂಶೋಧನೆ ಭೋದನಾ ಪಾಠ ಕಲಿಸಿ ನಂತರ ರಸಾಯನ ಶಾಸ್ತ್ರ ಸಂಶೋಧನಾ ಪ್ರಯೋಗಶಾಲೆಯ ಬಾಗಿಲನ್ನು ಹಾಕಿಕೊಂಡು ಹೋಗಿದ್ದಾರೆ. ಅವತ್ತಿನ ಪಾಠ ಮುಗಿಸಿ ಮರುದಿನ ಬಂದು ನೋಡುವಷ್ಟರಲ್ಲಿ ಪ್ರಾಧ್ಯಾಪಕರಿಗೆ ದೊಡ್ಡ ಆಘಾತ ಉಂಟಾಗಿದೆ. ಅದೇನೆಂದರೆ ಯಾರೋ ಕಳ್ಳರು ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು 12 ಸಾವಿರ ಮೌಲ್ಯದ ಸೆಕ್ಷನ್ ಪಂಪ್, 15 ಸಾವಿರ ಮೌಲ್ಯದ ಹಾಟ್ ಪ್ಲೇಟ್, 10 ಸಾವಿರ ಮೌಲ್ಯದ 2 ಮ್ಯಾಗ್ನೆಟಿಕ್ ಸ್ಟಿರಾರ್, 1 ಸಾವಿರ ಮೌಲ್ಯದ 5 ಬುರೆಟ್ ಸ್ಟ್ಯಾಂಡ್ ರಾಡ್ ಸೇರಿದಂತೆ ಇತರೆ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಸರಿಸುಮಾರು 50 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳ್ಳರು ಕಳ್ಳತನ ಮಾಡಿದ್ದು, ಈ ಹಿನ್ನಲೆ ಪ್ರಾಧ್ಯಾಪಕರು ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನಲೆ ಪೊಲೀಸರು ಕಳ್ಳರನ್ನು ಸೆರೆಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ.
SUMMARY | Thieves broke open the door of the research laboratory of chemistry students of Sahyadri College in Shivamogga and stole items worth more than Rs 50,000.
KEYWORDS | Sahyadri College, Shivamogga, Thieves,