SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 11, 2024
ಶಾಲಾ ಪ್ರವಾಸಕ್ಕೆಂದು ಕಾರವಾರದಿಂದ ಮುರುಡೇಶ್ವರ ಕ್ಕೆ ಬಂದಿದ್ದ ವಿದ್ಯಾರ್ಥಿಗಳಲ್ಲಿ ನಾಲ್ವರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿರುವ ಘಟನೆ ನಿನ್ನೆ ಕಾರವಾರ ಜಿಲ್ಲೆಯ ಮುರುಡೇಶ್ವರದಲ್ಲಿ ನಡೆದಿದೆ.
ಶ್ರಾವಂತಿ, ದೀಕ್ಷ, ಲಾವಣ್ಯ, ವಂದನ ಸಮುದ್ರ ಪಾಲಾದ ವಿದ್ಯಾರ್ಥಿಗಳು. ಕೊತ್ತೂರು ಮೂರಾರ್ಜಿ ದೇಸಾಯಿ ವಸತಿ ಶಾಲೆಯ 54 ವಿದ್ಯಾರ್ಥಿಗಳು ಹಾಗೂ 6 ಶಿಕ್ಷಕರು ಕೋಲಾರದ ಮುಳಬಾಗಿಲಿನಿಂದ ಕಾರವಾರದ ಮುರುಡೇಶ್ವರಕ್ಕೆ ಶೈಕ್ಷಣಿಕ ಪ್ರವಾಸಕ್ಕೆಂದು ಬಂದಿದ್ದರು. ಈ ವೇಳೆ ಸಮುದ್ರದಲ್ಲಿ ಆಟವಾಡುತ್ತಿದ್ದಾಗ 4 ಜನ ವಿದ್ಯಾರ್ಥಿನಿಯರು ಈಜಲು ತೆರಳಿದ್ದಾರೆ, ಆ ಸಂದರ್ಭದಲ್ಲಿ ನೀರಿನ ರಭಸ ಹೆಚ್ಚಾಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಇದರಲ್ಲಿ ಶ್ರಾವಂತಿ ಎಂಬ ವಿಧ್ಯಾರ್ಥಿನಿ ಯ ಶವ ಸಿಕ್ಕಿದ್ದು ಇನ್ನೂ 3 ಜನರ ಯುವತಿಯರಿಗಾಗಿ ಶೋಧಕಾರ್ಯ ನಡೆಯುತ್ತಿದೆ.

SUMMARY | Four students, who had come to Murudeshwar from Karwar for a school tour, drowned in the sea at Murudeshwar in Karwar district yesterday.
KEYWORDS | Murudeshwar, Karwar, sea at Murudeshwar, kannadanews,