SHIVAMOGGA | MALENADUTODAY NEWS | ಮಲೆನಾಡು ಟುಡೆ
ಶಿವಮೊಗ್ಗ | ಸಕ್ರೆಬೈಲಿನ 10ನೇ ಮೈಲಿಗಲ್ಲು ತುಂಗಾನದಿಯ ಹಿನ್ನೀರಿನಲ್ಲಿ ತೇಲುತ್ತಿದ್ದ ಎರಡು ಪುರುಷರ ಶವಗಳು ಹಾಗೂ ಒಬ್ಬ ಮಹಿಳೆಯ ಶವ ಕಳೆದ ವಾರ ಪತ್ತೆಯಾಗಿದ್ದು, ಮೃತರ ಹೆಸರು ವಿಳಾಸ ಹಾಗೂ ವಾರಸ್ಸುದಾರರ ಬಗ್ಗೆ ಯಾವುದೇ ಸುಳಿವು ದೊರಕಿರುವುದಿಲ್ಲ. ಈ ಹಿನ್ನಲೆ ಪೊಲೀಸರು ವಾರಸುದಾರರ ಪತ್ತೆಗೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ.
ಒಬ್ಬ ಗಂಡಸ್ಸಿನ ಚಹರೆ ವಯಸ್ಸು ಸುಮಾರು 38-40 ವರ್ಷ, ದುಂಡು ಮುಖ, ಕಪ್ಪು ಮೈಬಣ್ಣ ಹೊಂದಿದ್ದು, ಕಾಪಿ ಬಣ್ಣದ ತುಂಬು ತೋಳಿನ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

ಇನ್ನೊಬ್ಬ ಗಂಡಸ್ಸಿನ ಚಹರೆ ವಯಸ್ಸು ಸುಮಾರು 40-42 ವರ್ಷ, ದುಂಡುಮುಖ, ಕಪ್ಪು ಮೈಬಣ್ಣ ಹೊಂದಿದ್ದು, ನೀಲಿ, ತಿಳಿ ಕೆಂಪು ಬಣ್ಣದ ತುಂಬು ತೋಳಿನ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಮಹಿಳೆಯ ಚಹರೆ ವಯಸ್ಸು ಸುಮಾರು 40-45 ವರ್ಷ, ದುಂಡು ಮುಖ ಹೊಂದಿದ್ದು, ನೀಲಿ, ಹಸಿರು ಮತ್ತು ಕೆಂಪು ಬಣ್ಣದ ಸೀರೆ ಹಾಗೂ ಕಪ್ಪು ಬಣ್ಣದ ರವಿಕೆ ಧರಿಸಿರುತ್ತಾರೆ.
ಈ ಮೃತ ವ್ಯಕ್ತಿಗಳ ವಾರಸ್ಸುದಾರರು ಪತ್ತೆಯಾದಲ್ಲಿ ತುಂಗಾನಗರ ಪೊಲೀಸ್ ಠಾಣೆ ದೂ.ಸಂ.: 9141289308/ 9480803370/ 9480803377 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
SUMMARY | There is no clue about the name, address and heirs of the deceased. Following this, the police issued a press release to trace the heirs.
KEYWORDS | police, death, name address, kannada news,